ದೇವರ ಕರೆ
ಬೆಳ್ಳಗೆ ಎದ್ದ ಕೂಡಲೇ ಅಪಶಕುನದ ಹಕ್ಕಿಯೊಂದು ಬಾಯಿ ಬಡಿದುಕೊಂಡು ಮನೆ ಮುಂದೆ ರಪ್ಪನೆ ಪಾಸಾಯಿತು. ಏನಪ್ಪಾ.. ಬೆಳಗ್ಗೆ ಬೆಳಗ್ಗೆ ಅಪಶಕುನ ಜಾಗಂಟೆ ಬಡಿಯುತ್ತಿದೆ ಎಂದು ಹಿಂದಿನ ಕಾಲದವರಂತೆ ನನ್ನ ತಲೆಯಲ್ಲೂ ಮೂಢನಂಬಿಕೆಯ ಗುಂಗು ತಲೆಗೆ ಒಮ್ಮೆಲೇ ಬಡಿಯಿತು.
ಆದರೆ ನಮ್ಮಂತೆಯೇ ಅವು ಜೀವಿಗಳು. ಅವಕ್ಕೂ ತನ್ನದೇ ಆದ ಸ್ವಾತಂತ್ರ್ಯವಿದೆ. ನಾವು ಇನ್ನೊಬ್ಬರ ಕಿವಿ-ತಮಟೆ ಬಿರಿಯುವಷ್ಟು ಮಾತು, ಹರಟೆ ಹೊಡೆಯುವಾಗ ಇನ್ನೂ ಮೂಕ ಜೀವಿಗಳು ಅವು ತನ್ನ ಭಾವನೆ ಹೊರ ಹಾಕುವುದರಲ್ಲಿ ತಪ್ಪೇನಿದೆ ಎಂದು ಯೋಚಿಸುತ್ತ... ಯಾವುದೊ ಸಾವಿನ ಸುದ್ದಿ ಕೇಳುವ ಸಂಭವ ಇದೆಯೇನೋ ಎಂದು ಮನಸ್ಸಲ್ಲೇ ಅಂದುಕೊಳ್ಳುತ ಹಲ್ಲು ಉಜ್ಜಲು ಹೊರ ಬಂದೆ.
ಅಜ್ಜಿ ಹೊರಗೆ ಬರುತ್ತಾ, ಎಂಥ ಕರ್ಮ ಹಕ್ಕಿ! ಮನೆ ಮುಂದೆ ಬೆಳೆ ಬೆಳೆ ಕೆರ ಕೆರ ರಾಗ ಎಳಿತಿದೆ.. ಅಂದು ಅಪಶಕುನ ನುಡಿದ ಹಕ್ಕಿಗೆ ಶಾಪ ಹಾಕತೊಡಗಿದರು. ಹಲ್ಲು ಉಜ್ಜುತ್ತಿದ್ದ ನನ್ನ ಕಿವಿಗೆ ಕೇಳಿ ನಗು ಬರ ತೊಡಗಿತು ಆದರೆ ನಗು ಕಾಣದೆ ಪೇಸ್ಟಿನ ನೊರೆಯಲ್ಲಿ ಮಾಯವಾಗಿತ್ತು. ಏನೋ ಕೆಟ್ಟ ಸುದ್ದಿ ಕೇಳೋಕೆ ಇದೆ ಅಂತ ಅಡುಗೆ ಮನೆಯಲ್ಲಿದ್ದ ಅಮ್ಮ ತನ್ನಷ್ಟಕ್ಕೆ ಗುನು ಗುನು ಎಂದು ಗೊಣಗುತ್ತಿದ್ದರು.
ನನಗನಿಸುತ್ತಿತ್ತು.. ಪ್ರಕೃತಿಯೊಡಗಿನ ಹಿರಿಯರ ನಂಟು ಎಷ್ಟೊಂದು ಸುಂದರ ಮತ್ತು ಒಂದೊಂದು ಅಂಶಗಳಿಗೂ ಒಂದೊಂದು ಅರ್ಥವನ್ನು ಕಟ್ಟಿದಾರೆ. ಓದಿದವರಿಗೆ ಮೂಢನಂಬಿಕೆ ಅನ್ನಿಸಬಹುದು. ಆದರೆ ಅವರ ಒಂದೊಂದು ನಂಬಿಕೆಗಳು ಆಚರಣೆಗಳಲ್ಲೂ ಹಲವಾರು ಒಳ ಅರ್ಥ ಇದ್ದವು. ಕೆಲವೊಂದು ಅನಿಷ್ಟ ಮೂಢನಂಬಿಕೆಯನ್ನು ಖಂಡಿಸಬೇಕು ಸರಿ, ಆದರೆ ಕೆಲವೊಂದು ಅವರ ಅವರ ನಂಬಿಕೆಗಳಿಗೆ ಬಿಟ್ಟಿದ್ದು. ಅದನ್ನು ಪ್ರಶ್ನಿಸಲು ಅಸಾಧ್ಯ
ಅಯ್ಯೋ.... ನೋಡಿ, ಒಂದು ಹಕ್ಕಿಯ ಧ್ವನಿಯಲ್ಲಿ ಎಷ್ಟೊಂದು ಒಳ(ನಿಗೂಢ) ಅರ್ಥ ಸಿದ್ಧಾಂತಗಳಿವೆ ಎಂದು ಅಲ್ಲೇ ಹಲ್ಲು ತಿಕ್ಕುತ/ಉಜ್ಜಿಕೊಂಡು ಯೋಚಿಸುತ್ತಾ ಕೂತಿದ್ದೆ. ಎಷ್ಟು ಹೊತ್ತು ಹಲ್ಲು ಉಜ್ಜುತೀಯೇ ಎಂದು ಅಜ್ಜಿ ದನಿ ಏರಿಸಿದರು. ಅಜ್ಜಿ ಧ್ವನಿ ಕೇಳಿಸಿಕೊಂಡು ತಡವರಿಸುತ ಬೇಗ ಬೇಗ ಮುಖಕ್ಕೆ ನೀರು ಹಾಕಿ. ಬಾಯಿ ತೊಳೆದುಕೊಂಡು ಒಳ ನಡೆದೆ.
ಬೆಳಗಿನ ಊಟ ಮುಗಿಸೋಣವೆಂದು ಕೂತೆ. ಬಿಸಿ ಬಿಸಿ ಒಂದು ತುತ್ತು ಊದುತಾ ಬಾಯಿಗೆ ಇಡೋಣವೆಂದು ಬಾಯಿ ತನಕ ತಂದಾಗ ಫೋನ್ ಕರೆ ಕೇಳಿಸಿತು. ಅಮ್ಮ ಎತ್ತಿಕೊಂಡರು ಅನಿಸುತ್ತದೆ. ಮಾತಾಡುತ ಮಾತಾಡುತ ಹೌದ?, ಯಾವಗಂತೆ?, ಏನಾಗಿತ್ತಂತೆ?. ಶೇ!... ಹಾಗಾಗಬಾರದಿತ್ತು. ಹೌದ... ಸರಿ ಸರಿ ಅಂದು ಫೋನ್ ಇಟ್ಟು ಬೇಜಾರಲ್ಲಿ ಬಂದು ಅತ್ತೆ... ನಮ್ಮೂರಲ್ಲಿ ಹೀಗಾಯಿತಂತೆ ಎಂದು ಅಮ್ಮ ಫೋನಲ್ಲಿ ಕೇಳಿದನ್ನು ಒಪ್ಪಿಸ ತೊಡಗಿದರು. ಅಜ್ಜಿ ಅದಕ್ಕೆ ಮಸಾಲೆ ಹಾಕ ತೊಡಗಿದರು. ಬೆಳಗ್ಗೆ ಹಕ್ಕಿ ಕೂಗಿಕೊಡಾಗಲೇ ಏನೋ ಸುದ್ದಿ ಬರುತ್ತದೆ ಎಂದು ಅಂದುಕೊಂಡಿದ್ದೆ! ಹಾಗೆ ಆಯಿತು... ನೋಡು, ನಾ ಹೇಳಿಲ್ವ.... ನಾ ಹೇಳಿಲ್ವ.. ಎಂದು ಹೇಳಿದ್ದನ್ನೇ ಹೇಳುತಾ. ನಾನು ಹೇಳಿದಾಗೆ ಆಯಿತೆಂದು ಜ್ಯೋತಿಷ್ಯ ನುಡಿಯುವರಂತೆ ಅದೇ ರಾಗ ಎಳೀತಾ ಇದ್ದರು. ಹೌದು ಅತ್ತೆ, ಹೌದು ಅನ್ನುತ್ತಾ ಅಮ್ಮ ಸೀರಿಯಲ್ಗಳನ್ನು ಮತ್ತೆ ಮತ್ತೆ ರಿವೈನ್ಸ್ ಮಾಡಿ ತೋರಿಸುವಂತೆ ಅಜ್ಜಿಯ ಮಸಾಕೆಗೆ ಅಮ್ಮ ಒಗ್ಗರಣೆ ಹಾಕುತ್ತಿದ್ದರು.
ತಂದೆ ಬೇಗ ಕೆಲಸಕ್ಕೆ ಹೊರಟು ಹೋಗುವುದರಿಂದ ಕೆಲಸದ ಒತ್ತಡ ಇರುತ್ತದೆ ಸಂಜೆ ಬಂದಮೇಲೆ ಹೇಳಿದರಾಯಿತೆಂದು, ದೇವರ ಕರೆ ಬಂದಾಗ ಹೋಗಲೇಬೇಕಲ್ಲಾ ಎಂದು ಮಾತು ಮುಗಿಸಿ ಎಲ್ಲರು ಸುಮ್ಮನಾದರು. ನಾನು ಕಾಲೇಜಿಗೆ ಹೊತ್ತಾಯಿತೆಂದು ಬೇಗ ಬೇಗ ಹೊರಟು ಬಸ್ಸಿಗೆ ತಡವಾಯಿತೇನೋ ಅಂದುಕೊಳ್ಳುತ ಓಡೋಡಿ ಬಂದೆ. ಬಸ್ ಸ್ಟಾಂಡ್ ಬಳಿ ಗೆಳತಿಯನ್ನು ನೋಡಿ ಅಬ್ಬಾ! ಬಸ್ಸು ಇನ್ನೂ ಬಂದಿಲ್ಲ ಎಂದು ಸಮಾಧಾನಗೊಳ್ಳುತ್ತ, ಸುಸ್ತು ನಿವಾರಿಸತೊಡಗಿದೆ. ಆಗ ಗೆಳತಿ ಅಂದಳು, ಬೆಳೆ ಬೆಳೆ ಹೊರಟು ಬಂದಾಗ ಬೆಕ್ಕೊಂದು ಅಡ್ಡ ಬರಬೇಕಾ! ಅದರಲ್ಲೂ ಕರಿ ಬೆಕ್ಕು. ಎಂದು ಮುಖ ಕೆಂಪು ಮಾಡಿ ಹೇಳುತ್ತಾ... ಇನ್ನೂ ಏನೂ ಕಾದಿದೆಯೋ ಎಂದು ಮುನಿಸಿಕೊಂಡಳು. ಅಷ್ಟರಲ್ಲಿ ಬಸ್ಸು ಹಾರ್ನ್ ಹೊಡೆದುಕೊಂಡು ಜೋರಾಗಿ ಬ್ರೇಕ್ ಹಾಕಿ ನಿಂತು ಲೇಟಾಯಿತು. ಲೇಟಾಯಿತು... ಬೇಗ ಬೇಗ ಹತ್ತಿ ಎಂದು ಮುಗಿಸುವಷ್ಟರಲ್ಲಿ ಬುರ್! ಅನ್ನುತ್ತಾ ಧೂಳು ಹಾರಿಸಿಕೊಂಡು ಹೊರಟ ಬಸ್ಸು ಕಾಲೇಜು ಎದುರಲ್ಲಿಯೇ ನಿಲ್ಲಿಸಿತು.
ಪರೀಕ್ಷೆ ಇದ್ದ ಕಾರಣ ತುಸು ಬೇಗನೆ ಕಾಲೇಜಿಗೆ ಹೊರಟು ಬಂದಿದೆವು. ಸ್ವಲ್ಪ ಹರಟೆ ಸ್ವಲ್ಪ ಓದು ಎನ್ನುತ್ತಾ ಪರೀಕ್ಷೆ ಸಮಯ ಸಮೀಪಿಸಿದಾಗ ಪರೀಕ್ಷೆ ಕೋಣೆಯಲ್ಲಿ ಕೂತು ಪರೀಕ್ಷೆ ಬರೆಯಲು ಮುಂದಾದೆ ಬದಿಗೆ ಒಂದು ಸಲ ಕಣ್ಣಾಡಿಸಿದಾಗ ನನ್ನ ಗೆಳತಿ ಪ್ರಶ್ನೆ ಪತ್ರಿಕೆಯನ್ನು ತಿಂದು ಬಿಡುವಂತೆ ದುರು ದುರು ಎಂದು ನೋಡುತ್ತಿದ್ದಳು.
ನಾವೆಲ್ಲರೂ ಪರೀಕ್ಷೆ ಬರೆದು ಹೊರ ಬಂದು ಒಂದು ಸಲ ದಿನದ ಪರೀಕ್ಷೆಯ ಬಗ್ಗೆ ಚರ್ಚಿಸುತ್ತಿದ್ದಾಗ ಗೆಳತಿ, ಹಾಳಾದ ಶನಿ!... ಎಲ್ಲಿಂದ ವಕ್ರಿಸಿಕೊಂಡಿತೋ, ಬೆಳೆ ಬೆಳೆ ಅಡ್ಡ ದಾಟಿದಾಗಿನಿಂದ ನನ್ನ ಗ್ರಹಚರನೇ ಸರಿಲ್ಲ ಅದಿಕ್ಕೆ ಪ್ರಶ್ನೆ ಪತ್ರಿಕೆ ತುಂಬಾ ಕಷ್ಟ ಇತ್ತು ಎಂದು ಉಹು... ಉಹು... ಎಂದು ಮೊಸಳೆ ಕಣ್ಣೀರು ಹಾಕುತ. ಸಿಗ್ಲಿ ಆ ಬೆಕ್ಕು ಸಿಕ್ಕಿದ್ದಲ್ಲಿ ಹೊಡೆದು ಸಾಯಿಸ್ತೀನಿ ಅನ್ನುತಾ ನನ್ನ ಜೊತೆ ಚರ್ಚೆಗಿಳಿದಳು. ನಾನು ಆಯ್ತು ಮಾರೈತಿ, ಆಯ್ತು ಇನ್ನೂ ನನ್ನನ್ನು ಸಾಯಿಸಬೇಡ ಎಂದು ಅವಳ ಗಮನ ಬೇರೆ ಕಡೆ ತಿರುಗಿಸಲು ತಿರುಮಂತ್ರ ಹಾಕಿದೆ. ಛೇ!... ನನ್ನ ಗೆಳತಿ ಒಂದು ಬೆಕ್ಕಿಗೆ ಹೀಗೆಲ್ಲ ಹಿಗ್ಗಾಮುಗ್ಗ ಬೈತಿರುವುದು ಕಂಡು ಆ ಬೆಕ್ಕಿನ ಗತಿಯನ್ನು ಮನಸಲ್ಲೇ ಊಹಿಸಿಕೊಂಡಾಗ ಅಧೋಗತಿ.. ಎಂದು ಮನೆಯತ್ತ ಮುಖ ಮಾಡಿದೆ.
ಸಂಜೆಯ ಚಹಾ.. ಹೀರುತ. ಈ ಶಕುನದ ಬಗೆಗೆ ಜನರ ನಡವಳಿಕೆಯನ್ನು ಯೋಚಿಸಿ.. ಯೋಚಿಸಿ ಚಹಾ ಲೋಟ ಕಾಲಿಯಾಗಿತ್ತು ತಲೆ ಕೆಟ್ಟು ಹೋಗಿ ಏನಾದರೂ ಓದೋಣವೆಂದು ಕುಳಿತರು ಅದರದೆ ಚಿಂತೆ ಕಾಡತೊಡಗಿತು. ಯಾವುದಾದರು ಕಾದಂಬರಿ ಓದೋಣವೆಂದು ಕಾರಂತರ ಕಾದಂಬರಿ ಹಿಡಿದು ಕುಳಿತೆ, ಓದುತಾ... ಕಣ್ಣು ಹಾಗೆಯೇ ತೂಕಡಿಸ ತೊಡಗಿ ಅಲ್ಲೇ ನಿದ್ರೆಗೆ ಜಾರಿದೆ. ಕಾದಂಬರಿಯಲ್ಲಿ ಬರುವ ಕೆಲವು ಪಾತ್ರಗಳು ಮನಸ್ಸಿಗೆ ನಾಟಿಬಿಟ್ಟವು. ನಿದ್ರೆಯಿಂದ ಎದ್ದು ಸೀದಾ ಮುಖ ಉಜ್ಜಿಕೊಂಡು ಸೀದಾ ಸ್ನಾನ ಮುಗಿಸಿಕೊಂಡು ಬಂದೆ. ಯಾಕೋ ಗೊತ್ತಿಲ್ಲ ತಿಂಗಳ ಬೆಳಕನ್ನು ನೋಡುತ ಕೂರೋಣವೆಂದು ಮನಸ್ಸಾಗಿ ಚಂದಿರನನ್ನು ನೋಡು ಕುಳಿತೆ. ತಲೆಯಲ್ಲಿ ಹಲವಾರು ಯೋಚನೆಗಳು ಸುಳಿದಾಡಿದವು.
ಮನೆಯೊಳಗೆ ಹಾರರ್ ಕಥೆ ಶುರುವಾಗಿತ್ತು. ರುಂಡ ಇಲ್ಲದ, ಕಾಲು ಇಲ್ಲದ ಪ್ರತಾತ್ಮಗಳ ಸಾಲು ಸಾಲು ಕಥೆಗಳು.. ಹೀಗಂತೆ...! ಹಾಗಂತೆ....! ಎಂದು ಕೇಳಿಸತೊಡಗಿದವು. ನನ್ನ ಕಿವಿಯು ಪಕ್ಕನೆ ನೆಟ್ಟಗಾಯಿತು. ಅಮ್ಮನ ಊರ ಪಕ್ಕದಲ್ಲಿ ನಡೆದ ನಿಜ ಘಟನೆಗಳನ್ನು ಮೆಲುಕು ಹಾಕುತ ಕುಳಿತವರು ಊಟದ ಸಮಯವಾದುದರಿಂದ ಊಟ ಮುಗಿಸಿ ನಿದ್ರೆಯ ಅಮಲಿಗೆ ಜಾರಿದೆವು.
ಗದ್ದೆ ಅಂಚಿನಲ್ಲಿ ಯಾರೋ ನನ್ನನು ಹಿಂಬಾಲಿಸಿಕೊಂಡು ಬಂದಂತೆ ಅನಿಸಿ ಮನದೊಳಗೆ ದಿಗಿಲಾಗಿ ಭಯದಿಂದ ಕಾಲು ಬೇಗ ಬೇಗ ಮುಂದೆ ಸಾಗತೊಡಗಿತ್ತು. ಒಂದು ಬಾರಿ ಯಾರು ಹಿಂದಿನಿಂದ ಹಿಂಬಾಲಿಸೋದು ಅಂತ ನೋಡೋಣವೆಂದು ಒಂದು ಬಾರಿ ತಿರುಗಿ ನೋಡ್ಲಾ ನೋಡ್ತಾ ಎಂದು ಭಯದಲ್ಲಿ ಹಿಂದೆ ತಿರುಗಿ ನೋಡಿದಾಗ ರುಂಡ ಇಲ್ಲದ ಯಾರೊಬ್ಬರೂ, "ನಿಲ್ಲಿ, ನಾನು ಬರುತೇನೆ". ಎಂದು ಕೂಗಿ ಕರೆಯುದು ಕೇಳಿ ನನ್ನ ಕೈ ಕಾಲು ಆಡದೆ ದೇಹ ಮಂಜುಗಡ್ಡೆಯಾದಂತಾಗಿ ಮನೆ ಕಡೆ ಓಟಕಿತ್ತಾಗ ಬಿದ್ದೆ ಅನ್ನುವಷ್ಟರಲ್ಲಿ ಅಮ್ಮ...! ಎಂದು ಚಿತ್ರನೇ ಕೂಗಿಕೊಂಡೆ.
ಕಣ್ಣು ಬಿಟ್ಟು ನೋಡಿದಾಗ ಚಾಪೆ ಮೇಲೆ ದಡಬಡಿಸಿ ಕೂತಿದ್ದೆ. ಕಥೆಯಲ್ಲಿ ಕೇಳಿದ ಅದೇ ಆಕೃತಿ ಕನಸ್ಸಲ್ಲಿ ಕಂಡು ಬೆಚ್ಚಿ ಹೋಗಿ ಮುಖ ಬಾಡಿ, ದೇಹವೇ ಬೆವರಿಳಿದು ಸ್ನಾನ ಮಾಡಿ ಬಂದ ಹಾಗೆ ಒಂದು ಕಡೆ ಆದರೆ, ಇನೊಂದೆಡೆಯಿಂದ ನಾಯಿ ಓಡಿಸಿಕೊಂಡು ಬಂದಾಗೇ ಎದುರುಸುರು ಬಿಡುತಿದ್ದವಳು ಸಾವಧಾನಿಸಿಕೊಂಡು ಮುಖವೆಲ್ಲ ಒರೆಸುತ ಪಕ್ಕಾದಲ್ಲೇ ಇಟ್ಟಿದ್ದ ನೀರನ್ನು ಕುಡಿದು, "ರಾಮಂ, ಸ್ಕಂದಂ...ಮಂತ್ರ ಹೇಳುತಾ ಕಣ್ಣು ಗಟ್ಟಿಯಾಗಿ ಮುಚ್ಚುತ ಕಂಬಳಿ ತಲೆ ತನಕ ಹೊದ್ದು ಮಲ್ಗೊಂಡವಳು ಸೂರ್ಯದೇವ ಕಿಟಕಿ ಸರಿಸಿ ದರ್ಶನ ನೀಡಿದಾಗಲೇ ಎಚ್ಚರ ಆಗಿದ್ದು, ಎದ್ದೇಳುವ ಭರದಲ್ಲಿ ಎಡ ಮಗ್ಗುಲಿನಿಂದ ಎದ್ದು ಕೈ ಉಜ್ಜಿ ಮುಖಕ್ಕೆ ಒತ್ತಿ ಹಿಡಿದು ತೆಗೆಯುವಾಗ ಅಜ್ಜಿಯ ದರುಷನವಾಗಿ ಎಡ ಮಗ್ಗುಲಿಂದ ಎದ್ದೇಳಬಾರದು ಗೊತ್ತಿಲ್ವ ನಿನಗೆ, ಅಂದು ಪುನಃ ಮಲಗಿಸಿ ಬಲ ಮಗ್ಗುಲಿಂದ ಎದ್ದೆ, ಈ ಅಜ್ಜಿದ್ದು ಬೆಳೆ ಬೆಳೆ ಎಂಥ ರಾಮಯಣ ಅಂತ ಚಾಪೆ ಮಾಡಿದಿ ಗುಡಿಸಿ ಹೊರ ಬಂದಾಗ ಅಜ್ಜಿ ಯಾರಿಗೋ ಬಯ್ಯುದು ಕೇಳಿಸಿತು. ನೋಡಿದ್ರೆ.... ನಾಯಿ ಊಳಿಡುವುದು ಕೇಳಿಸಿತು. ಈ ನಾಯಿಗೇನು ಶುರುವಾಯಿತು ಕರ್ಮ ಶನಿನ ತಂದು ಅಂತ ಊಳಿಡುತ್ತಿರುವ ನಾಯಿಯನ್ನು ಓಡಿಸತೊಡಗಿದರು. ಅಜ್ಜಿ ಬಾಯಿಗೆ ನಾನಾಯಿತು ಇನ್ನೂ ಈ ನಾಯಿ ತಗ್ಗಕೊಂಡಿತ ಹಣೆಬರಹ ಏನೂ ಮಾಡಕೆ ಆಗುತೆ... ಅಲ್ವಾ, ದಿನನಿತ್ಯದ ಕಾರ್ಯ ಮುಗಿಸಿ ಬಂದಾಗ, ದೇವರು ಕರೆ ಕಳಿಸಿದಾಗ ಹೋಗಲೇಬೇಕು ತಾನೇ ದೇವರ ಇಚ್ಛೆ ನಮ್ಮದೇನಿಲ್ಲ... ನಮ್ಮ ಸಮಯ ಮುಗಿದಾಗ ಯಮರಾಯನ ಕುಣಿಕೆಯಿಂದ ತಪ್ಪಿಸೋರು ಯಾರು? ಸಾಧ್ಯನೇ ಇಲ್ಲಾ.. ಇಂದು ಇದ್ದವರು ನಾಳೆ ಎದ್ದೇಳುತ್ತೆವೋ ಇಲ್ಲವೋ ಗ್ಯಾರಂಟಿ ಇಲ್ಲಾ... ಅನ್ನುವ ಅಜ್ಜಿಯ ಮಾತುಗಳು ಕಿವಿಯೊಳಗೆ ನುಸುಳಿದವು.
ನಮ್ಮಜ್ಜಿ ಮತ್ತು ಪಕ್ಕದ್ಮನೆ ಗಂಗಜ್ಜಿ(ಗಂಗು ಅಜ್ಜಿ) ಸೇರಿಕೊಂಡು ಹರಟೆಗೆ ಕೂತಿದ್ದರು. ನಾನು ಬರುತ್ತಿರುವುದು ಕಂಡು ಅಜ್ಜಿ ಮುಖ ಸಿಂಡರಿಸಿಕೊಂಡು. ಬಂದಳು ಅಡಿಯಿಂದ ಮುಡಿ ತನಕ ಕೇಳೋಕೆ... ಎಂದು ಪಿಸು ಪಿಸು ಹರಟುತ ಎರಡು ಗಟ್ಟಿಯಾದ ಮುದಿ ಜೀವಗಳು "ಮರಣಕ್ಕೊಂದು ನೆವನ" ಎಂದು ಹೇಳುತಾ ಸಾಯುವವರು ಹೇಗಾದರೂ ಸತ್ತೇ ಸಾಯುತ್ತಾರೆ. ಬದುಕುಳಿಯಲು ಹುಲ್ಲು ಕಡ್ಡಿಯು ಆಸರೆಯಾಗಬಹುದು ಹಾಗೆಯೇ ಹುಲ್ಲುಕಡ್ಡಿಗೆ ಬೆಂಕಿ ಕಿಚ್ಚು ತಗುಲಿದರೆ ಮಾರಣ ಹೋಮವೇ ಎನ್ನುತ, ಕೆಲವರು ಆಕ್ಸಿಡೆಂಟ್ಲಿ ಸಾಯುತ್ತಾರೆ. ಇನ್ನೂ ಹಲವಾರು ತಾವೇ ಆತ್ಮಹತ್ಯೆಗೊಳಗಾಗುತ್ತಾರೆ. ಮೊನ್ನೆ ಒಂದು ಗಾಡಿಗೆ ನಾಯಿ ಎದುರಾಗಿದಷ್ಟೇ ಗಾಡಿ ದಾರಿ ಮರೆತು ಪ್ರಪಾತ ನೋಡಿದರೆ, ನಾಯಿ ಒಂದು ಜೀವವನ್ನೇ ಬಲಿ ಪಡೆಯಿತು. ಹೆಸರಿಗೊಂದು ಪಾಣಿ ಅಡ್ಡ ಬಂತಷ್ಟೇ ಅದಿಕ್ಕೆ ಇನ್ನೊಂದು ಅಜ್ಜಿ ಈಗ ಸಾಯುವುದಕ್ಕೆ ಲೆಕ್ಕವಿಲ್ಲ ಎಳೆ ಪ್ರಾಯದವರು ಸಾಯುವ ಪರಿಯ ಮೆಲುಕು ಹಾಕುತ ಊರಿನ ಅಂತೆ ಕಂತೆಗಳ ಸಾವಿನ ನೈಜ ಕಥೆಗಳನ್ನು ತೆರೆದಿಡತೊಡಗಿದರು.
ದೇವರ ಆಟವ ಬಲ್ಲವರಾರು..? ದೇವರ ಕರೆ ಬಂದಾಗ ಹೋಗಲೇಬೇಕು ಮಾನವರು, ದೇಹ ಬಂಧನದಿಂದ ಮುಕ್ತಗೊಂಡು ಆತ್ಮವು ಪರಮಾತ್ಮನೆಡೆಗೆ ಸಾಗಲು...
ಮಂಗಳ ಮಳಲಿ, ಎಂ.ಎ. ಕನ್ನಡ, ಎಸ್.ವಿ.ಪಿ. ಕನ್ನಡ ವಿಭಾಗ