ಗುರುವಾರ, ಜೂನ್ 18, 2026

೩೫ನೇ ಸಂಪುಟದ ಆಶಯ ನುಡಿ


Prathvi naik



ಪ್ರಥ್ವಿ ನಾಯ್ಕ್ 

ಸಂಪಾದಕಿ, ಬಿತ್ತಿ ಗೋಡೆ ಬರಹ,

ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ,

ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ


ಆಶಯ ನುಡಿ


      ಮಂಗಳೂರು ವಿಶ್ವವಿದ್ಯಾನಿಲಯ ೨೦೨೬ರ ೩೫ನೇ ಬಿತ್ತಿ ಸಂಪುಟವು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಬಿತ್ತಿ ಕೇವಲ ವಿಭಾಗದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳಿಗೂ ಸಹ ಅವಕಾಶ ಮಾಡಿಕೊಟ್ಟಿದೆ. ಕವನ, ಕಥೆ, ನಾಟಕ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಬರವಣಿಗೆಯ ಕಲೆಯನ್ನು ರೂಢಿಸಿಕೊಟ್ಟಿದೆ. ವಿದ್ಯಾರ್ಥಿಗಳು ಸಹ ಅಷ್ಟೇ ಉತ್ಸುಕತೆಯಿಂದ ಬರವಣಿಗೆಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಗಳ ಹೊಸತನದ ಆಲೋಚನೆಯನ್ನು ಹೊರಹೊಮ್ಮಿಸಿ, ಅವುಗಳನ್ನು ಬರವಣಿಗೆಯ ರೂಪದಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲ ಕೌಶಲ್ಯವನ್ನು ಬೆಳೆಸುವಲ್ಲಿ ಈ ವೇದಿಕೆ ಮಹತ್ತರ ಪಾತ್ರ ವಹಿಸಿದೆ.

      ಪ್ರೊ. ಮಾಧವ ಪೆರಾಜೆಯವರ ಮೊದಲ ಸಂಪಾದಕತ್ವದಲ್ಲಿ ಆರಂಭಗೊಂಡು ಇಂದಿಗೂ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳದೆ ನಿರಂತರವಾಗಿ ನಡೆದುಕೊಳ್ಳುತ್ತಾ ಬಂದಿದೆ. ಈ ವರ್ಷದ ಬಿತ್ತಿಯ ಉದ್ಘಾಟನಾ ಕಾರ್ಯಕ್ರಮವನ್ನು ಪ್ರೊ.ಕೃಷ್ಣಮೂರ್ತಿ, ನಿವೃತ್ತ ಪ್ರಾಂಶುಪಾಲರು, ಗೋವಿಂದ ದಾಸ ಕಾಲೇಜು ಸೂರತ್ಕಲ್... ವಿಭಾಗದ ಅಧ್ಯಕ್ಷರು, ಉಪನ್ಯಾಸಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂಪುಟದ ಬಿತ್ತಿ ಸಂಪಾದಕಿ ಆಗಿ ಆಯ್ಕೆ ಆದ ಮೊದಲ ದಿನದಿಂದ ಇಲ್ಲಿಯ ತನಕವೂ ಬಿತ್ತಿಯಲ್ಲಿ ಹೊಸತನವನ್ನು ತರುವ ಹಂಬಲವಿತ್ತು. ಬಿತ್ತಿಯ ಉದ್ಘಾಟನೆ ವೇಳೆಯಲ್ಲಿ ಅಕ್ಷರಗಳನ್ನು ಬಿತ್ತನೆ ಮಾಡುವ ಮೂಲಕ ಉದ್ಘಾಟನೆಯಲ್ಲಿ ಹೊಸತನವನ್ನು ಮೂಡಿಸಲಾಯಿತು. ಅದರಂತೆ ಪುಸ್ತಕ ಪರಿಚಯ, ವಾಚಕರವಾಣಿ, ವರದಿ ತಯಾರಿಕೆ. ವಿಮರ್ಶೆ, ನುಡಿ ಬರಹ. ಇಷ್ಟೇ ಅಲ್ಲದೆ ಈ ಬರಹಗಳು ಪುಸ್ತಕದ ಮೂಲಕ ಬೆಳಕಿಗೆ ಬರುವುದರ ಜೊತೆಗೆ ಡಿಜಿಟಲ್ ರೂಪದಲ್ಲಿಯೂ ಪ್ರಕಟಿಸಿದ್ದೇವೆ. ವಿದ್ಯಾರ್ಥಿಗಳ ಬರಹಗಳನ್ನು ಡಿಜಿಟಲ್ ಮಾದರಿಯ ಮುಖಾಂತರವೂ ನೋಡಬಹುದಾಗಿದೆ ಜೊತೆಗೆ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳಿಗೂ ಸಹ ಅವರ ಸೃಜನಶೀಲ ಬರವಣಿಗೆಯನ್ನು ಬರೆಯುವುದಕ್ಕೆ ಮತ್ತು ಅವರ ಪ್ರತಿಭೆಯನ್ನು ಗುರುತಿಸುವುದಕ್ಕೆ ಈ ವೇದಿಕೆ ಅವಕಾಶ ಮಾಡಿಕೊಟ್ಟಿದೆ.

      ಎಲ್ಲಾ ಪ್ರಯತ್ನಗಳು ಒಬ್ಬರ ಕೈಯಿಂದ ಮಾತ್ರ ಸಾಧ್ಯವಾಗುವುದಿಲ್ಲ. ಹಲವಾರು ಕೈಗಳು ಒಂದಾಗುವುದರ ಮೂಲಕವೇ ಈ ಪ್ರಯತ್ನ ಯಶಸ್ವಿಯಾಗುತ್ತದೆ. ಹಾಗೆಯೇ ಈ ಪ್ರಯತ್ನಕ್ಕೆ ಕಾರಣಕರ್ತರಾದಂತಹ ಬಿತ್ತಿ ಸಂಪಾದಕ ಸಂಚಾಲಕರಾದಂತಹ ಡಾ. ಯಶು ಕುಮಾರ್. ಡಿ. ಡಾ. ನಾಗಪ್ಪ ಗೌಡ ಆರ್, ಡಾ. ಧನಂಜಯ್ ಕುಂಬ್ಳೆ, ಡಾ. ಸೋಮಣ್ಣ ಹೊಂಗಳ್ಳಿ ಸರ್ ಇವರೆಲ್ಲರಿಗೂ ಬಿತ್ತಿ ಸಂಪಾದಕ ಮಂಡಳಿಯ ಪರವಾಗಿ ಹೃತೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಜೊತೆಗೆ ಪ್ರತಿ ಬಾರಿಯೂ ಅಂಕಣಗಳನ್ನು ತಯಾರಿಸುವಾಗ, ಪ್ರತಿ ಸಂಚಿಕೆಗಳಲ್ಲಿ ಪತ್ರಿಕೆಗಳನ್ನು ಬಿಡುಗಡೆ ಮಾಡುವಾಗ ಸಹಕರಿಸಿದ ವಿಭಾಗದ ಸಿಬ್ಬಂದಿಯಾಗಿರುವ ವಿದ್ಯಾ ಹಾಗೂ ಸಂಶೋಧನಾರ್ಥಿಗಳಿಗೂ ತುಂಬು ಹೃದಯದಿಂದ ಹಾಗೂ ಸಂಪಾದಕ ಮಂಡಳಿಯ ಪರವಾಗಿ ಕೃತಜ್ಞತೆಯನ್ನು ತಿಳಿಸುತ್ತೇನೆ.

      ತಮ್ಮ ಹಲವಾರು ಕೆಲಸದ ನಡುವೆಯೂ ಬಿಡುವಿನ ವೇಳೆಯಲ್ಲಿ ನಮಗೆ ಸಹಕರಿಸಿದ ಉಪಸಂಪಾದಕರಾದ ಜಗದೀಶ, ಸಹಾಯಕರಾದ ಪೂಜಾ, ಆಶ್ರಿತ, ಪರಶುರಾಮ, ದಿವ್ಯ, ಸಲೀಂ, ಸೌಮ್ಯ ಟಿ. ಎಸ್. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಇವರೆಲ್ಲರಿಗೂ ಧನ್ಯವಾದಗಳು ತಿಳಿಸುತ್ತೇನೆ. ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

      ಬಿತ್ತಿ ಬರಹ ಸಾಹಿತ್ಯದ ಒಂದು ಪ್ರಕಾರ ಮಾತ್ರವಲ್ಲ, ಬದಲಾವಣೆಯತ್ತ ಮುನ್ನಡೆಸುವ ಶಕ್ತಿಯಾಗಿ ಬಿತ್ತಿ ಬರಹ ಇಂದಿಗೂ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಹೀಗೆ ನಿರಂತರವಾಗಿ ಈ ಬೆಳವಣಿಗೆ ಮುಂದುವರೆಯಲಿ ಎಂದು ನಾನು ಆಶಿಸುತ್ತೇನೆ.

ಇಂತಿ ನಿಮ್ಮ      
ಪ್ರಥ್ವಿ ನಾಯ್ಕ್    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...