ಸೋಮವಾರ, ಜನವರಿ 5, 2026

ಸಂಚಿಕೆ - ೧೦

ಧರಾಧರೇಂದ್ರನ ಮಡಿಲಲಿ

ಧರಾಧರೇಂದ್ರನ ಮಡಿಲಲಿ ವಾಸವಿರುವ 

ಸುರಸರಿ ನಾಡೆಂಬ ನಾಡಲಿ, 

ನೀಲಾಕಾಶದ ಕುಂಕುಮ ತಿಲಕದಿಂದ 

ಅಲಂಕೃತಳಾದ ಭೂದೇವಿಯ ವಕ್ಷಸ್ಥಲದಿ 

ಮಾನವನು ಉದಯಿಸಿ


ಧರ್ಮವನೆಂಬ ದಂಡವ ಹಿಡಿದು 

ಸತ್ಯವನೆಂಬ ಕವಚವ ತೊಟ್ಟು 

ಕರ್ಮಪಥದಿ ನಿರ್ಭಯವಾಗಿ ಸಂಚರಿಸುತ, 

ಪರೋಪಕಾರವನು ಪರಮಧರ್ಮವೆಂದು 

ಮನಸಲಿ ನೆಲೆಗೊಳಿಸಿ ನಡೆದು


ಕಾಲಚಕ್ರ ತಿರುಗುತಿರಲು 

ಕರ್ಮಫಲವು ನೆರಳಿನಂತೆ ಬೆನ್ನಟ್ಟುವುದು; 

ಆದುದರಿಂದ, ಓ ಮಾನವನೆ, 

ಅಹಂಕಾರವ ತ್ಯಜಿಸಿ, 

ವಿವೇಕವನೆಂಬ ದೀಪವ ಹಚ್ಚಿ 

ಜೀವನಯಾನವ ಸಾಧಿಸು


ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

 ಸಭೆ

ಸಭೆಯೊಂದು ನಡೆಯುತಿದೆ ಲೋಕದಲಿ 

ಸೇರಿರುವರು ಸಾವಿರಾರು ಪ್ರಜೆಗಳು 

ನಡೆಯುತ್ತಿವೆ ವಾದ-ವಿವಾದಗಳು 

ಅವರು ಹೆಚ್ಚು-ಇವರು ಹೆಚ್ಚು ಎಂಬ ಚರ್ಚೆಗಳು 

ಮರೆತಿರುವರು ಅವರುಗಳು ಅಂತಿಮ ತತ್ವಗಳು 

ಆದರೂ ಕೊನೆಯಲಿ ಹೇಳುವರು ವೇದಾಂತಗಳು.


ಸಭೆಯೊಂದು ನಡೆಯುತಿದೆ ಲೋಕದಲಿ 

ಎಲ್ಲರಲ್ಲೂ ವಿಭಿನ್ನ ವಿಚಾರಗಳು 

ಆದರೂ ಕೇಳುತ್ತಿರುವ ಕಿವಿಗಳು 

ಆಡಂಬರ ನೋಡುತ್ತಿರುವ ಕಣ್ಣುಗಳು 

ಬುದ್ಧಿಯು ತಿಳಿಯುತ್ತಿರುವ ಅಂಶಗಳು 

ಆದರೂ ಮನಸ್ಸು ಒಪ್ಪದ ಸಂಗತಿಗಳು


ಸಭೆಯೊಂದು ನಡೆಯುತಿದೆ ಲೋಕದಲಿ 

ಸಹಕರಿಸಿರುವರು ಎಲ್ಲ ಜನರು 

ದೊಡ್ಡಸ್ಥಿಕೆಯಲ್ಲಿ ಕುಳಿತಿರುವವರು ಕೆಲವರು 

ಕೂರಲು ಯೋಗ್ಯರಲ್ಲ ಎಂಬಂತೆ 

ನಿಂತಿರುವರು ಶ್ರಮಿಸಿದವರು, 

ಭಾಷಣದಲ್ಲಿ ಕೇಳುತಿದೆ ಎಲ್ಲರೂ ಸಮಾನರು 

ಮರೆಯಾಗುತಿದೆ ಮಾನವೀಯತೆಯ ತವರು.


ಸುಜಾತ ಗಿ, ಪೂಜೇರ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ನಿತ್ಯ ಸತ್ಯ

ಇರಬೇಕಿಲ್ಲ ನಾವು 

ಅವರಂತೆ ಇವರಂತೆ।


ಇದ್ದರೆ ಸಾಕು ಯಾರಿಗೂ 

ಹೊರೆಯಾಗದಂತೆ।


ಬೇಕಿಲ್ಲ ನಮಗೆ ಅವರು 

ಹಾಗಂತೆ ಹೀಗಂತೆ।


ಸುಖದುಃಖ ಏನಾದರೇನಂತೆ 

ಬಂದುದ ಸ್ವೀಕರಿಸೋಣ ಬಂದಂತೆ।


ಸಂಗ್ರಹ : - ತ್ರಿವೇಣಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

 ಪ್ರಾಮಾಣಿಕತೆಯ ಪ್ರತಿಫಲ

      ಪಂಪರಾಮಾಪುರವೆಂಬ ಪುಟ್ಟ ಹಳ್ಳಿ ಅಲ್ಲಿಯ ಜಮೀನ್ದಾರ ರಾಮಪ್ಪ ಗೌಡರು, ಅವನ ಹೆಂಡತಿ ಸುಕನ್ಯ, ರಾಮಪ್ಪ ತನ್ನ ಮನೆ ಮತ್ತು ಜಮೀನಿನ ಕೆಲಸಕ್ಕಾಗಿ ಆಳುಗಳನ್ನು ನೇಮಿಸಿಕೊಂಡಿದ್ದ. ಅವರಲ್ಲಿ ಬಹಳ ನಿಷ್ಠಾವಂತನೆಂದರೆ ರಾಜು ಎಂಬ ಒಬ್ಬ ಆಳು. ಅವನು ರಾಮಪ್ಪ ಹೇಳಿದ ಕೆಲಸಗಳನ್ನು ನಿಷ್ಠೆಯಿಂದ ಮಾಡಿ ಅವನ ವಿಶ್ವಾಸ ಗಳಿಸಿಕೊಂಡಿದ್ದ. ಇದನ್ನು ನೋಡಿ ಸಹಿಸದ ಆಳುಗಳು ಇವನನ್ನು ಹೇಗಾದರು ಮಾಡಿ ಕೆಲಸದಿಂದ ತೆಗೆದು ಹಾಕಿಸಬೇಕೆಂದು ಯಾವಾಗಲೂ ರಾಜುವಿನ ಮೇಲೆ ಕೆಂಡಕಾರುತ್ತ ಇರುತ್ತಾರೆ. ಆದರೆ ರಾಜು ಎಲ್ಲರೊಂದಿಗೆ ಸರಿಸಮಾನನಾಗಿ ಮಾತನಾಡುತ್ತ ಚೆನ್ನಾಗಿ ಇರುತ್ತಾನೆ.

      ಒಂದು ದಿನ ಇದ್ದಕ್ಕಿದ್ದಂತೆ ರಾಮುವಿನ ತಾಯಿಗೆ ಹುಷಾರಿಲ್ಲಾದಂತಾಗುತ್ತದೆ. ಹಾಗಾಗಿ ಅವನು ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಅದೇ ಸಮಯದಲ್ಲಿ ಜಮೀನ್ದಾರ ರಾಮಪ್ಪ ತನ್ನ ಹೆಂಡತಿಗಾಗಿ ಪ್ರೀತಿಯಿಂದ ಮಾಡಿಸಿದಂತಹ ವಜ್ರದ ಮೂಗುತಿ ಕಾಣೆಯಾಗುತ್ತದೆ. ಅದನ್ನು ಭದ್ರ ಎನ್ನುವಂತ ಆಳು ಕದ್ದು ಪಕ್ಕದೂರಿನ ಶೇಟುವಿಗೆ ಮಾರಿರುತ್ತಾನೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಇನ್ನುಳಿದಂತಹ ಆಳುಗಳು ರಾಜುವೇ ಮೂಗುತಿಯನ್ನು ಕದ್ದು ಊರು ಬಿಟ್ಟು ಹೋಗಿದ್ದಾನೆ. ಎಂದು ಸುದ್ದಿ ಹಬ್ಬಿಸಿರುತ್ತಾರೆ. ಇದರಿಂದ ಸಿಟ್ಟಿಗೆದ್ದ ಜಮೀನ್ದಾರ ರಾಮಪ್ಪ ರಾಮುವನ್ನು ಹುಡುಕಿಸುತ್ತಾ ಇರುತ್ತಾನೆ. ಮಾರನೇ ದಿನಾ ಎಂದಿನಂತೆ ಕೆಲಸಕ್ಕೆಂದು ಬರುತ್ತಾನೆ. ನಡೆದಿದ್ದೆಲ್ಲಾ ವಿಚಾರಗಳು ಅವನ ಸ್ನೇಹಿತನಿಂದ ತಿಳಿಯುತ್ತದೆ. ನಂತರ ರಾಜು ಜಮೀನ್ದಾರ ಬಳಿ ಹೋಗಿ ನಿಜವನ್ನು ಹೇಳಿದನು. ಅವನು ನಂಬಲಿಲ್ಲ. ಅವನನ್ನು ಕೆಲಸದಿಂದ ತೆಗೆದು ಹಾಕುತ್ತಾನೆ. ಇತ್ತ ಹುಷಾರು ತಪ್ಪಿದ ತಾಯಿಯ ಚಿಕಿತ್ಸೆಗಾಗಿ ಹಣ ಬೇರೆ ಬೇಕಿತ್ತು. ಈ ಕಡೆ ಕಳ್ಳತನದ ಆರೋಪ ರಾಜು ಮಾನಸಿಕವಾಗಿ ಕುಗ್ಗಿ ಹೊಗುತ್ತಾನೆ. ಒಂದು ಅರಳಿ ಮರದ ಬಳಿ ಕುಳಿತು ಅಳುತ್ತಿರುತ್ತಾನೆ. ಅದೇ ಸಮಯಕ್ಕೆ ಪಕ್ಕದಲ್ಲಿದ್ದ ಹಾಳು ಮನೆಯ ಹತ್ತಿರ ಯಾರೋ ಮಾತನಾಡಿದ ಹಾಗೆ ಕೆಳಿಸುತ್ತದೆ. ನಂತರ ಇವನು ಹೋಗಿ ನೋಡಿದಾಗ ಅಲ್ಲಿ ಭದ್ರ ತನ್ನ ಸ್ನೇಹಿತನ ಬಳಿ ಮೂಗುತಿ ಕದ್ದು ಮಾರಿದ ವಿಚಾರವನ್ನು ಹೇಳುತ್ತಿರುತ್ತಾನೆ. ಕ್ರೋಧಗೊಂಡ ರಾಜು ಭದ್ರನನ್ನು ಸರಿಯಾಗಿ ಚಚ್ಚಿಹೊಡೆದು ಬಾಯಿ ಬಿಡಿಸಿ ಜಮೀನ್ದಾರನ ಬಳಿ ಕರೆದೊಯ್ಯುತ್ತಾನೆ. ನಂತರ ಆ ಶೇಟು ಹೊಡೆದು ಬಾಯಿ ಬಿಡಿಸಿ ರಾಜು ಜಮೀನ್ದಾರನ ಹೆಂಡತಿ ಸುಕನ್ಯಾಳ ಮೂಗುತಿಯನ್ನು ಮರಳಿ ತಂದು ಕೊಡುತ್ತಾನೆ. ಹಾಗೆ ತಾನು ತಪ್ಪು ತಿಳಿದಿದಕ್ಕಾಗಿ ಜಮೀನ್ದಾರ ರಾಜುವನ್ನು ಕ್ಷಮೆಯಾಚಿಸಿ ಆತನ ತಾಯಿಯ ಆಸ್ಪತ್ರೆ ವೆಚ್ಚವನ್ನು ಭರಿಸುತ್ತಾನೆ. ನಂತರ ರಾಮುವಿಗೆ ಕೊಡುವ ಸಂಬಳವನ್ನು ಜಾಸ್ತಿ ಮಾಡುತ್ತಾನೆ. ತನ್ನ ಆಪ್ತರ ಪಟ್ಟಿಗೆ ರಾಮುವನ್ನು ಸೇರಿಸಿಕೊಳ್ಳುತ್ತಾನೆ ಮತ್ತು ಪಕ್ಕದೂರಿಂದ ತನ್ನ ಸಂಬಂಧಿಗಳ ಮಗಳೊಂದಿಗೆ ರಾಮುವಿಗೆ ಮದುವೆ ಕೂಡ ಮಾಡಿಸುತ್ತಾನೆ.

      ಇದರಿಂದ ತಿಳಿಯುವುದೆನೆಂದರೆ ನಾವು ನಮ್ಮ ಸತ್ಯವನ್ನು ಸಾಯುವವರೆಗೂ ಉಳಿಸಿಕೊಂಡರೆ, ಅದೇ ಸತ್ಯವಂತಿಗೆ ನಮ್ಮನ್ನು ಒಂದು ದಿನ ಉಳಿಸುತ್ತದೆ ಮತ್ತು ಗೆಲ್ಲಿಸುತ್ತದೆ.

ಲಿಖಿತ. ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ಸಿಂಧೂರ

ಭಾರತದ ಹಣೆಯ ಸಿಂಧೂರ 

ನಮ್ಮ ಜಮ್ಮು – ಕಾಶ್ಮೀರ


ತಿಳಿದೀರೇ ನೀವು ಸಿಂಧೂರ ಮಹಿಮೆಯ 

ಕೇಳಿಲ್ಲಿ ನೀವು, ಸಿಂಧೂರ ಸಾಹಸವ


ಜೋಡಿ ಪಕ್ಷಿಯ ಮಧುರ ಪಯಣ 

ಹೆಜ್ಜೆಯನಿಟ್ಟಿತು ದೂರದೆಡೆಗೆ 

ಭಾರತ ಸಿಂಧು ರಶ್ಮಿಯೆಡೆಗೆ


ಅವಳ ಬಂಧ ಬೆಸೆದಿತ್ತು ಇನಿಯನೊಡನೆ 

ಪಾತಕಿಗಳ ದೃಷ್ಟಿ ಹತ್ತಿತ್ತು. 

ಅವಳ ಸಿಂಧೂರದೊಡನೆ


ಕಾರ್ಮೋಡ ಕವಿಯಿತು 

ಹೊಸ ಬಾಳಿನ ನಂಟಿಗೆ 

ಮಧುರ ಸ್ವಪ್ನವ ಕದಡಿತು 

ಕುಕ್ಷಿಯೊಂದು ರಪ್ಪನೆ ಬಡಿಯಿತು 

ಒಡಲ ಮೊರೆತ ಜೋರಾಯಿತು 

ಹೃದಯ ಬಡಿತ ಒಡೆಯಿತು 

ಇರುಳ ಛಾಯೆ ಆವರಿಸಿತು


ಕುಸಿಯಿತು ಇನಿಯನ ತಲೆ 

ಅವಳ ಆಕ್ರಂಧನ ಮುಗಿಲ ಮುಟ್ಟಿತು 

ಜಾರಿತು ಕೊರಳಲ್ಲಿದ್ದ ಕರಿಮಣಿಮಾಲೆ 

ಚದುರಿತು ಜೋಡಿ ಹೂ ಮಾಲೆ


ಕ್ಷಣಗಳಲ್ಲಿ ಅಳಿಸಿತು ಹಣಿಯ ಕುಂಕುಮ 

ಕಮರಿತು ಅವಳಿಟ್ಟ ಕುಸುಮ


ಅವಳ ಸಿಂಧೂರ ಅಳಿಸಿದವರ 

ತಲೆ ಧರೆಗುರುಳಿತು 

ಸಿಂಧೂರವೇ ಕೊಟ್ಟಿತು 

ಪ್ರತಿ ಉತ್ತರ


ನಾವು ಹೇಳೋಣ 

ಭಾರತೀಯ ಸೇನೆಗೆ ಜೈಕಾರ...


ಮಂಗಳ ಮಳಲಿ, ಎಂ.ಎ. ಕನ್ನಡ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ಕರುನಾಡು

ಎತ್ತ ಸಾಗುತಿದೆ ಕರುನಾಡು 

ಕರುಣೆ ತುಂಬಿದ ನೆಲೆ ಬೀಡು


ಕಸವಾದಳೆ ಹೆಣ್ಣು 

ಭೋಗವಸ್ತುವಾದಳೆ ಹೆಣ್ಣು 

ಕಣ್ಣಿಗೆ ಬಿದ್ದಿರುವುದೇ ಮತಾಂಧತೆಯ ಮಣ್ಣು 

ತೆರೆಯಬಾರದೆ ಸಮಾನತೆಯ ಕಣ್ಣು


ನೇಹಾ, ರುಕ್ಸಾನ, ಸೌಜನ್ಯ ಮಣ್ಣಾದವರೇ 

ಪುರುಷ ಪ್ರಧಾನತೆಯಲ್ಲಿ ಮಿಂದೆದ್ದ ಗಂಡು ಜಾತಿಯಿಂದ 

ಮಾತೆ ಎನ್ನುವವಳ ಮುಖಕ್ಕೆ ಮಸಿ ಏಕೆ? 

ಹೆಣ್ಣು ಅಬಲೆಯೆಂದೋ...?


ರಾಜಕೀಯಕ್ಕೆ ದಾಳವಾಯಿತೆ ಹೆಣ್ಣಿನ ಪ್ರಾಣ 

ಬೆಲೆಯಿಲ್ಲದ ಒಂದು ವಸ್ತುವೇ ಅವಳ ಮೌನ 

ಭಾರತಮಾತೆಯ ಮಡಿಲ ಮಕ್ಕಳೆಲ್ಲವೇ 

ಹಿಂದೂ-ಮುಸಲ್ಮಾನ?

ಬೇರೆ ಎಂದಾದರೆ ಎಲ್ಲಿದೆ ಭಾರತ ಪರಿಪೂರ್ಣ


ಸಂಗ್ರಹ :- ಶ್ರೀಷ್ಮ ಎಂ.ಬಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ಅತ್ತೆ ಕೊಟ್ಟ ಉಡುಗೊರೆ....

ನಮ್ ಅತ್ತೆ ಅಳಿಯ ಅಂತ ಕರಿತವ್ಳೆ

ಚಿಕನ್ ಸುಕ್ಕ ತಿನ್ನತವ್ಳೆ

ಮಗಳನ್ನ ಮದ್ದೆ ಮಾಡ್ಕೊ ಅಂತವ್ಳೆ

ಸುಂದ್ರಿ ನನ್ ಮಗಳು ಅಂತವ್ಳೆ

ಅತ್ತೆಯೇನೊ ಮದ್ದೆ ಮಾಡ್ಲಿ ಕಳಿಸವ್ಳೆ

ಮಗಳೇನೊ ಮೊಬೈಲ್ ಹೊತ್ತುಕೊಂಡು ಬಂದವ್ಳೆ

ತರ ತರ ಫೋಟೋ ತೆಗೆತವ್ಳೆ

ಮಾಮ ಅಂತ ಕರಿತವ್ಳೆ

ಮಸಾಲೆ ದೋಸೆ ಕೇಳ್ತವ್ಳೆ

ಸೀರೆ ಗೀರೆ ಅಂತವ್ಳೆ

ಸಿನಿಮಾ ಟೆಂಟಲ್ಲಿ ಕುರ್ತಾವ್ಳೆ

ಸುಂದ್ರ ನಮ್ ಮಾಮ ಅಂತವ್ಳೆ

ಸುನಾಯಿ ಪೌಡ‌ರ್ ಕೇಳ್ತವ್ಳೆ 

ಚೆನ್ನಾಗಿ ಇರ್ಬೇಕು ಅಂತವ್ಳೆ

ಶಾಪಿಂಗ್ ಗೆ ನಡಿ ಅಂತವ್ಳೆ

ಊಟ ಗೀಟ ಮಾಡ್ತವ್ಳೆ

ಉಪ್ಪು ಕಾರ ಇಲ್ಲೇ ತಿನ್ನವ್ಳೆ

ಹಬ್ಬಕೆ ಅಂತ ಹೋಗ್ತಾವ್ಳೆ

ಆರು ದಿನ ಇರ್ತಾವ್ಳೆ

ಅರವತ್ತು ರೀಲು ಮಾಡ್ತವ್ಳೆ

ಹೊಟ್ಟೆ ತುಂಬಾ ತಿಂತವ್ಳೆ

ಹೊಟ್ಟೆ ಎಷ್ಟೋ ಉರುಸ್ತವ್ಳೆ

ಕಾರಲ್ಲಿ ಹೋಗೋಣ ಅಂತವ್ಳೆ

ಕಾಂತಾರ ಸಿನಿಮಾ ಕೇಳ್ತವ್ಳೆ

ಒಟ್ಟಾಗಿ ಬಾಳೋಣ ಅಂತವ್ಳೆ

ಓಡೆ ಪಾಯಿಸ ಮಾಡ್ತವ್ಳೆ

ಹೊಟ್ಟೆ ತುಂಬಾ ತಿನ್ನವ್ಳೆ

ಒಮ್ಮೊಟ್ಟಿಗೆ ನಗಿಸ್ತವ್ಳೆ

ಹೊಲ ಮಾಡೋಣ ಅಂತವ್ಳೆ

ಒಲೆ ಮುಂದೇನೆ ಕುರ್ತಾವ್ಳೆ

ಹಲೋ ಮಾಮ ಅಂತವ್ಳೆ

ಕರಿಯಾಕೆ ಬರಲ್ವಾ ಅಂತವ್ಳೆ

ಕರಿಯಾಕೆ ಹೋದ್ರೆ ಗೋಬಿ ಮಂಚೂರಿ ಕೇಳ್ತವ್ಳೆ

ಹಬ್ಬದ ನೆವ ಹೇಳ್ತಾವ್ಳೆ

ಅಮ್ಮನ ಮನೆಗೆ ಹೋಗ್ತವ್ಳೆ.


ಮಹೇಶ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ಮಸುಕಿನ ಕನ್ನಡಿಯಲ್ಲಿ ನಸು ನಗು.....

 

ಮಸುಕು ತುಂಬಿದ ಕನ್ನಡಿಯಲ್ಲಿ 

ಮೊಗವ ನೋಡಿ ಮರುಳೆಂದು ಬಾವಿಸುವೆಯ. 

ಚಿತ್ತ ಸೆಳೆದಿರಬಹುದು ಕನ್ನಡಿಯತ್ತ, 

ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು.

ವಾಸ್ತವದಲ್ಲಿ ನಾವು ಪ್ರಕಾಶಿತವಾಗಿದ್ದರು, 

ನಮ್ಮನ್ನು ಮಸುಕಾಗಿ ತೋರಿಸುವುದು, 

ನಮ್ಮನ್ನು ಮಸುಕೆಂದೇ ತೋರಿಸುವುದು.

ಹೌದು ನಾವು ಮರುಳರಾದೆವು, 

ಈ ಮಸುಕಿನ ಕನ್ನಡಿಯಲ್ಲಿ ನೋಡಿಕೊಂಡು.

ಯಾಕೆ ಬೇಕು ಈ ಮಸುಕಿನ ಕನ್ನಡಿ.

ಯಾರದೋ ಚಿತ್ತವನ್ನು ದುರ್ಬಲಗೊಳಿಸಲೇ, 

ಇನ್ಯಾರದೋ ಚಿತ್ತಕ್ಕೆ ಹರ್ಷ ನೀಡಲೇ, 

ಚಿತ್ತ ದುರ್ಬಲಗೊಳಿಸುವ 

ಈ ಮಸುಕಿನ ಕನ್ನಡಿಯ ಏನು ಮಾಡಲಿ 

ಒಡೆದು ಚೂರು ಮಾಡಲೇ, 

ಬಿಸಾಡಿ ಮತ್ತೊಬ್ಬರಿಗೆ ಘಾಸಿಗೊಳಿಸಲೇ.

ಇಲ್ಲ ಇಲ್ಲ ಇಂತ ಮರುಳುತನ ಬೇಡ.

ಮಸುಕು ಕನ್ನಡಿಗೆ ಆವರಿಸಿದೆಯೇ ಹೊರತು 

ಕನ್ನಡಿಯೇ ಮಸುಕಲ್ಲವಲ್ಲ.

ನಮ್ಮನ್ನು ಮಸುಕುಗೊಳಿಸಿದ 

ಈ ಮಸುಕನ್ನು ತೊಲಗಿಸಬೇಕು.

ಆಗ ನಮ್ಮ ಮಸುಕು ತೊಲಗುವುದು.

ಮಸುಕಾದರು ಕನ್ನಡಿ ತನ್ನ ಧರ್ಮ ಪಾಲನೆ ಮಾಡುತ್ತಿದೆ.

ನಾವೇ ನಮ್ಮ ಧರ್ಮ ಪಾಲನೆ ಮಾಡಬೇಕಿದೆ.

ಹಾಗ ಕನ್ನಡಿಯ ಮುಂದೆ ನಸುನಕ್ಕರು, ಅತ್ತರು, 

ನಮ್ಮನ್ನು ಹೇಗೆ ಪರೀಕ್ಷಿಸಿಕೊಂಡರು, 

ವಾಸ್ತವತೆಯನ್ನು ಮಾತ್ರ ತೋರಿಸುತ್ತದೆ.

ಮಸುಕು ಕನ್ನಡಿಯಿಂದ ಹೊರ ಬನ್ನಿ, 

ಈ ಕಿರು ಕನ್ನಡಿಯಲ್ಲೇ ಕಿರು ನಗೆಯ ಬೀರಿ.

ಕಿರು ಹುಡುಗಾಟಿಕೆಯ ನಿಮ್ಮಿ ಚಿತ್ರಕ್ಕೆ, 

ಈ ಆಟಿಕೆಯೇ ನಿಮ್ಮಲ್ಲಿ ನಗುವನ್ನು ತುಂಬಲಿ.


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

'ಸಂಕಲ್ಪ ಗೀತೆ'

ಸುತ್ತಲು ಕವಿಯುವ ಕತ್ತಲೊಳಗೆ 

ಪ್ರೀತಿಯ ಹಣತೆಯ ಹಳ್ಳೋಣ 

ಬಿರುಗಾಳಿಗೆ ಹೊಯ್ದಾಡುವ ಹಡಗನು 

ಎಚ್ಚರದಲಿ ಮುನ್ನಡೆಸೋಣ.


ಕಲುಷಿತವಾದೀ ನದೀ ಜಲಗಳಿಗೆ 

ಮುಂಗಾರಿನ ಮಳೆಯಾಗೋಣ 

ಬರಡಾಗಿರುವೀ ಕಾಡುಮೇಡುಗಳ 

ವಸಂತವಾಗುತ ಮುಟ್ಟೋಣ.


ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ 

ಹೊಸ ಭರವಸೆಗಳ ಕಟ್ಟೋಣ 

ಮನುಜರ ನಡುವಣ ಅಡ್ಡಗೋಡೆಗಳ 

ಕೆಡವುತ ಸೇತುವೆಯಾಗೋಣ.


ಮತಗಳೆಲ್ಲವೂ ಪಥಗಳು ಎನ್ನುವ 

ಹೊಸ ಎಚ್ಚರದೊಳು ಬದುಕೋಣ 

ಭಯ ಸಂಶಯದೊಳು ಕಂದಿದ ಕಣೋಳು 

ನಾಳಿನ ಕನಸನು ಬೆಳೆಯೋಣ.


ರಾಷ್ಟ್ರ ಕವಿ ಜಿ. ಎಸ್. ಶಿವರುದ್ರಪ್ಪ

ಕವನ ಸಂಕಲನ : 'ವ್ಯಕ್ತ ಮಧ್ಯ'

೧೯೯೩ - ೧೯೯೯


ಸಂಗ್ರಹ - ಟಿ.ಎ ಸುಮನ್ ಜಬೀನಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

 

ದೇವರಿಗೂ ನೋವುಂಟು

ಬೇಡಿಹರು ಕಣ್ಮುಚ್ಚಿ, ಕೈಮುಗಿದು 

ಅಡ್ಡಬಿದ್ದು, ಅಂಗಲಾಚಿ, ಮೇಲಕ್ಕೆತ್ತದೆ ಶಿರವ 

ಯಾರೂ ಕೇಳಿಹರು, ಹೇಳುವವರೇ ಸರ್ವರೂ 

ದೇವರಿಗೂ ನೋವುಂಟು ಕೇಳಿರೈ..


ಕಾಡಿನಲಿ ಕಳೆದುಕೊಂಡ ಕೈ ಹಿಡಿದವಳ 

ಪ್ರೇಮದಲಿ ಕೈಯ ಸುಟಕೊಂಡ, ಕೊಳಲನೂದುವವನು 

ಎದೆಯಲಿದ್ದವಳ ಹುಡುಕಿ ಹೊರಟ 

ಶೇಷ ಶಯನನು 

ದೇವರಿಗೂ ನೋವುಂಟು ಕೇಳಿರೈ..


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ಗೋಡೆಗಳು

ಗೋಡೆಗಳನ್ನು ಕೆಡವಬೇಕಿದೆ 

ಗೆಳೆಯಾ...

ಹೌದು! ಗೋಡೆಗಳನ್ನು 

ಕೆಡವಿಹಾಕುವ ಅನಿವಾರ್ಯತೆಯಿದೆ 

ಈಗೇನೋ ಹಸಿ ಗೋಡೆಗಳವು 

ತುಸು ಸುಲಭವಾಗಿ 

ಒಡೆದುಹೋಗಬಹುದವು... 

ಒಮ್ಮಿಂದೊಮ್ಮೆ ಗೋಡೆಗಳು 

ಗಟ್ಟಿಯಾಗಿ ನಿಂತುಬಿಟ್ಟರೇ...!? 

ಹಾಗೊಮ್ಮೆ ಗೋಡೆಗಳೇ 

ಅನಿವಾರ್ಯವಾಗಿದ್ದರೆ ಅಲ್ಲಿ 

ಪ್ರೀತಿಯ ಗೋಡೆಗಳ ಕಟ್ಟೋಣ

ಸುತ್ತ ಹಸಿರು ಬಳ್ಳಿಯ ಬಿಟ್ಟು 

ನೀರ ಮುತ್ತುಗಳ ಹನಿಸಿ 

ಹೂವರಳುವ ಸೊಬಗ ನೋಡೋಣ!


ರೇಷ್ಮಾ ಎನ್ ಬಾರಿಗ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ಮನದ ಮಾತು 

ನನ್ನೆದೆಯಾಳದ 

ಈ ಕಹಿ ನೋವುಗಳ 

ಹೇಳಲಿ ಯಾರಿಗೆ. ॥ 

ಈ ಒಂಟಿತನದ 

ಬಡಪಾಯಿ ಹೃದಯಕೆ 

ಆ ಸಿಹಿ ನೆನಪುಗಳಾಸರೆ, ॥ (ಪ)


ಪ್ರತಿ ನೋವು-ನಲಿವಿನಲು 

ಜೊತೆಗಿರುವೆ ಅಂದಾಕಿ | 

ಅಂದ-ಚೆಂದದ ಮಾತನಾಡಿ 

ಮೈ-ಮನ ತಣಿಸಿದಾಕಿ | 

ಏಳೇಳು ಜನ್ಮಕ್ಕೂ ಆಗ್ತಿನಿ 

ಅಂತ ಹೇಳಿದಾಕಿ ನನ್ನಾಕಿ |


ಕಣ್ಣುಂದೆ ಇದ್ದರು 

ಹುಡುಗರು ಸಾವಿರ । 

ನಿನ್ನಯ ಹೊರತು ಯಾರಿಲ್ಲ 

ನೀ ನನ್ನ ಹಮ್ಮಿರ ॥

ಗುಣದಲ್ಲಿ ಒಂದು ತೂಕ ಜಾಸ್ತಿ 

ನೀ ಅಪ್ಪಟ ಬಂಗಾರ ॥। 


ಎಲ್ಲಿ ಹೋಯಿತು 

ಆ ನಿನ್ನ ರನ್ನ ।

ಕಂಡವರ ಮಾತ ಕೇಳಿ 

ಕಳೆದುಕೊಂಡಂಗಾಯ್ತು ಹೊನ್ನ ॥

ಕೇಳಿ ಹೇಳಿಕೆ ಮಾತ 

ದೂರವಾಯ್ತು ನನ್ನ ಚಿನ್ನ ॥।


ಶರಣಬಸವ ನಾಯಕ

ಸಂಚಿಕೆ - ೧೦

ಒಳರೋಗಿಗಳು

ಜಗದ ಜನರೆಲ್ಲ ಒಂದಲ್ಲ ಒಂದು ರೀತಿಯ ಒಳರೋಗಿಗಳೆ 

ಅನ್ನಿಸುವುದೊಮ್ಮೆ ಹಲವರನ್ನು ಕಂಡಾಗ 

ಕೆಲವರು ದೈಹಿಕವಾದರೆ ಮತ್ತೆ ಕೆಲವರು ಮಾನಸಿಕರು 

ನಗುವರು ಆದರೆ ಅಲ್ಲಿ ಸಂಪನ್ನತೆಯಿಲ್ಲ 

ಅಳುವರು ಆದರೂ ಯಾರಿಗೂ ತಿಳಿಯುವುದಿಲ್ಲ 

ಅನ್ನಿಸುವುದಿನ್ನೊಮ್ಮೆ ಏಕಾಂಗಿಯಾಗಿಯೆ ಇರಬೇಕೆಂದು 

ಆದರೂ ಸಂಘ ಸಾಂಗತ್ಯ ಬೇಕೆಂದು 

ಅನಿಸುವುದು ಮತ್ತೊಮ್ಮೆ ಲೋಕವೆಲ್ಲಾ ಹೀಗೆಯೆ? 

ಇಲ್ಲ ನನ್ನ ಸುತ್ತಲಿನವರು ಮಾತ್ರ ಹೀಗೆಯಾ ಎಂದು 

ಹಂಚಿಕೊಳ್ಳುವಾಸೆ ನಗುವನ್ನೂ, 

ದುಃಖವನ್ನೂ, ಆಶ್ಚರ್ಯವನ್ನೂ 

ಆದರೆ ಹಂಚಲಾರರು ಎದುರಿನವರ 

ಸ್ಪಂದನವೇಗೊ ಎಂಬ ಸಂಶಯ 

ಅಪರೂಪಕ್ಕೆ ಸ್ಪಂದಿಸುವ ಜೀವ ಸಿಕ್ಕರೂ 

ಅವರೊಂದಿಗಿನ ಬಾಂಧವ್ಯ ಅಲ್ಪಕಾಲವೆ 

ನಿಮಗೂ ಕೂಡ ಹೀಗೆಯೆ ಎನಿಸುವುದೆ? 

ಹೀಗೆ ಜಗವೆಲ್ಲಾ ಹೀಗೆಯೆ ಎನಿಸುವುದು 

ಅಂತರಂಗದಲಿ ಅವರು ಒಳರೋಗಿಗಳೇ ಎಂದು?.


ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ಸುಮ್ಮನಿರುವೆ ನೀನು.....

ಕಣ್ಣುಗಳು ಏನನ್ನು ನೋಡಲು 

ಹುಡುಕುತ್ತಿವೆ ಏಕೆ? 

ಮಾತುಗಳು ಮೌನವಾಗಿವೆ 

ನೀ ಸುಮ್ಮನೆ ಇರುವೆ ಯಾಕೆ


ನೀ ಏನನ್ನೂ ಕೇಳಲು ಬಂದಿರುವೆ 

ನೀ ಕೇಳಿದ್ದಾದರೂ ಏನಿದೆ ಮಂಕೆ 

ಜ್ಞಾಪಕ ವೆಂಬುದು ದೀಪದ ಹಾಗೆ 

ಒತ್ತಿ ಉರಿಯುವುದು ಹೊರೆತು 

ಹತ್ತಿ ಉರಿಯುವುದಲ್ಲ.....


ಭಾವನೆಗಳು ಮುಖದಲ್ಲಿ ಭಾರವಾಗಿವೆ 

ಹೇಗೆ ಬದುಕನ್ನು ತಿಳಿಸಲು 

ಹೋರಾಡುತ್ತಿವೆ ಜೋಕೆ, 

ನೀವು ಹೋದರು ಉಳಿಯುತ್ತೇವೆ 

ಭಾವನೆಗಳು ಸಾಕೆ.....


ನೀ ಸೋತರೆ ಅರಳಲಾರವು 

ಭಾವನೆಗಳು ಮುಖದಲ್ಲಿ 

ನೀ ಗೆದ್ದರೆ ಭಾವನೆಗಳು 

ಬದುಕುವುವು ಭೂಮಿ ತವರಿನಲ್ಲಿ.....


ಮಲ್ಲಿಕಾರ್ಜುನ ಹ ಕೆರೂಡಿ, ಭೂಗೋಳ ಶಾಸ್ತ್ರ ವಿಭಾಗ

ಸಂಚಿಕೆ - ೧೦

ಕಾಣುವ ಹಂಬಲ

ಚರ್ಮವ ಹರಿದು ಚಾಪೆಯ ಮಾಡಿ 

ದೇಹವ ತೆಗೆದು ಕಂಬವ ಮಾಡಿ 

ಕರುಳ ಹರಿದು ಮಾಲೆಯ ಮಾಡಿ 

ರಕ್ತ ತೆಗೆದು ಎಣ್ಣೆಯ ಮಾಡಿ 

ನರವ ಹರಿದು ಬತ್ತಿಯ ಮಾಡಿ 

ಕೂದಲು ತೆಗೆದು ಕಡ್ಡಿಯ ಮಾಡಿ 

ಬೆರಳು ಕಡಿದು ದೀಪದ ಹಿಂದಿನ ಪ್ರಭಾವಳಿಯ ಮಾಡಿ 

ಉಗುರು ತೆಗೆದು ದರ್ಪಣ ಮಾಡಿ 

ಮೆದುಳು ತೆಗೆದು ಮಣಿಯ ಮಾಡಿ 

ಗಂಟಲು ತೆಗೆದು ಗಂಟೆಯ ಮಾಡಿ 

ಹೃದಯ ತೆಗೆದು ಶಂಕವ ಮಾಡಿ 

ನಿನಗಾಗಿ ಚರ್ಮದ ಚಾಪೆಯ ಮೇಲೆ ಮೆದುಳಿನ ಮಣಿ ಇಟ್ಟು 

ಅದರ ಮೇಲೆ ದೇಹವೆಂಬ ದೀಪದ ಕಂಬವನಿಟ್ಟು 

ಅದಕ್ಕೆ ಕರುಳ ಮಾಲೆಯಿಂದ ಸಿಂಗರಿಸಿ 

ಆ ದೀಪಕ್ಕೆ ನರದ ಬಿತ್ತಿಯ ಹೊಸೆದು ಹಾಕಿ 

ರಕ್ತವೆಂಬ ಎಣ್ಣೆ ಸುರಿದು ಕೂದಲಿನ ಕಡ್ಡಿಯ ಹಿಡಿದು 

ನಿನಗಾಗಿ ಕಾಯುತ್ತಿರುವೆ 

ನೀ ಬಂದು ಬೆಂಕಿಯಾಗಿ ಸ್ಪರ್ಶ ಮಾಡಬಾರದೆ 

ನಿನ್ನನ್ನು ಈ ಕಣ್ಣುಗಳಿಂದ ನೋಡಿ 

ಹೃದಯದ ಶಂಕವ ಊದಿ 

ಗಂಟಲಿನ ಗಂಟೆಯ ಬಾರಿಸಿ 

ಈ ನನ್ನ ಮನಸ್ಸಿಂದ ಪೊಜೆಯ ಗೈಯುವೆ ಓ ಶಿವನೆ.....


ರವಿ ಅ.ಮ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ಚಿತ್ರಗಳು 

ಚಿತ್ರ ರಚನೆ :- ಸೌಮ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦



ಚಿತ್ರಗಳು 

ಚಿತ್ರ ರಚನೆ :- ರಮ್ಯಶ್ರೀ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಚಿತ್ರ ರಚನೆ : ರಮ್ಯಶ್ರೀ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಸಂಚಿಕೆ - ೧೦

ಚಿತ್ರಗಳು 




ಚಿತ್ರ ರಚನೆ :- ದಿವ್ಯಶ್ರೀ ಎ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ



ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...