ಸೋಮವಾರ, ಜನವರಿ 5, 2026

ಸಂಚಿಕೆ - ೧೦

 ಪ್ರಾಮಾಣಿಕತೆಯ ಪ್ರತಿಫಲ

      ಪಂಪರಾಮಾಪುರವೆಂಬ ಪುಟ್ಟ ಹಳ್ಳಿ ಅಲ್ಲಿಯ ಜಮೀನ್ದಾರ ರಾಮಪ್ಪ ಗೌಡರು, ಅವನ ಹೆಂಡತಿ ಸುಕನ್ಯ, ರಾಮಪ್ಪ ತನ್ನ ಮನೆ ಮತ್ತು ಜಮೀನಿನ ಕೆಲಸಕ್ಕಾಗಿ ಆಳುಗಳನ್ನು ನೇಮಿಸಿಕೊಂಡಿದ್ದ. ಅವರಲ್ಲಿ ಬಹಳ ನಿಷ್ಠಾವಂತನೆಂದರೆ ರಾಜು ಎಂಬ ಒಬ್ಬ ಆಳು. ಅವನು ರಾಮಪ್ಪ ಹೇಳಿದ ಕೆಲಸಗಳನ್ನು ನಿಷ್ಠೆಯಿಂದ ಮಾಡಿ ಅವನ ವಿಶ್ವಾಸ ಗಳಿಸಿಕೊಂಡಿದ್ದ. ಇದನ್ನು ನೋಡಿ ಸಹಿಸದ ಆಳುಗಳು ಇವನನ್ನು ಹೇಗಾದರು ಮಾಡಿ ಕೆಲಸದಿಂದ ತೆಗೆದು ಹಾಕಿಸಬೇಕೆಂದು ಯಾವಾಗಲೂ ರಾಜುವಿನ ಮೇಲೆ ಕೆಂಡಕಾರುತ್ತ ಇರುತ್ತಾರೆ. ಆದರೆ ರಾಜು ಎಲ್ಲರೊಂದಿಗೆ ಸರಿಸಮಾನನಾಗಿ ಮಾತನಾಡುತ್ತ ಚೆನ್ನಾಗಿ ಇರುತ್ತಾನೆ.

      ಒಂದು ದಿನ ಇದ್ದಕ್ಕಿದ್ದಂತೆ ರಾಮುವಿನ ತಾಯಿಗೆ ಹುಷಾರಿಲ್ಲಾದಂತಾಗುತ್ತದೆ. ಹಾಗಾಗಿ ಅವನು ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಅದೇ ಸಮಯದಲ್ಲಿ ಜಮೀನ್ದಾರ ರಾಮಪ್ಪ ತನ್ನ ಹೆಂಡತಿಗಾಗಿ ಪ್ರೀತಿಯಿಂದ ಮಾಡಿಸಿದಂತಹ ವಜ್ರದ ಮೂಗುತಿ ಕಾಣೆಯಾಗುತ್ತದೆ. ಅದನ್ನು ಭದ್ರ ಎನ್ನುವಂತ ಆಳು ಕದ್ದು ಪಕ್ಕದೂರಿನ ಶೇಟುವಿಗೆ ಮಾರಿರುತ್ತಾನೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಇನ್ನುಳಿದಂತಹ ಆಳುಗಳು ರಾಜುವೇ ಮೂಗುತಿಯನ್ನು ಕದ್ದು ಊರು ಬಿಟ್ಟು ಹೋಗಿದ್ದಾನೆ. ಎಂದು ಸುದ್ದಿ ಹಬ್ಬಿಸಿರುತ್ತಾರೆ. ಇದರಿಂದ ಸಿಟ್ಟಿಗೆದ್ದ ಜಮೀನ್ದಾರ ರಾಮಪ್ಪ ರಾಮುವನ್ನು ಹುಡುಕಿಸುತ್ತಾ ಇರುತ್ತಾನೆ. ಮಾರನೇ ದಿನಾ ಎಂದಿನಂತೆ ಕೆಲಸಕ್ಕೆಂದು ಬರುತ್ತಾನೆ. ನಡೆದಿದ್ದೆಲ್ಲಾ ವಿಚಾರಗಳು ಅವನ ಸ್ನೇಹಿತನಿಂದ ತಿಳಿಯುತ್ತದೆ. ನಂತರ ರಾಜು ಜಮೀನ್ದಾರ ಬಳಿ ಹೋಗಿ ನಿಜವನ್ನು ಹೇಳಿದನು. ಅವನು ನಂಬಲಿಲ್ಲ. ಅವನನ್ನು ಕೆಲಸದಿಂದ ತೆಗೆದು ಹಾಕುತ್ತಾನೆ. ಇತ್ತ ಹುಷಾರು ತಪ್ಪಿದ ತಾಯಿಯ ಚಿಕಿತ್ಸೆಗಾಗಿ ಹಣ ಬೇರೆ ಬೇಕಿತ್ತು. ಈ ಕಡೆ ಕಳ್ಳತನದ ಆರೋಪ ರಾಜು ಮಾನಸಿಕವಾಗಿ ಕುಗ್ಗಿ ಹೊಗುತ್ತಾನೆ. ಒಂದು ಅರಳಿ ಮರದ ಬಳಿ ಕುಳಿತು ಅಳುತ್ತಿರುತ್ತಾನೆ. ಅದೇ ಸಮಯಕ್ಕೆ ಪಕ್ಕದಲ್ಲಿದ್ದ ಹಾಳು ಮನೆಯ ಹತ್ತಿರ ಯಾರೋ ಮಾತನಾಡಿದ ಹಾಗೆ ಕೆಳಿಸುತ್ತದೆ. ನಂತರ ಇವನು ಹೋಗಿ ನೋಡಿದಾಗ ಅಲ್ಲಿ ಭದ್ರ ತನ್ನ ಸ್ನೇಹಿತನ ಬಳಿ ಮೂಗುತಿ ಕದ್ದು ಮಾರಿದ ವಿಚಾರವನ್ನು ಹೇಳುತ್ತಿರುತ್ತಾನೆ. ಕ್ರೋಧಗೊಂಡ ರಾಜು ಭದ್ರನನ್ನು ಸರಿಯಾಗಿ ಚಚ್ಚಿಹೊಡೆದು ಬಾಯಿ ಬಿಡಿಸಿ ಜಮೀನ್ದಾರನ ಬಳಿ ಕರೆದೊಯ್ಯುತ್ತಾನೆ. ನಂತರ ಆ ಶೇಟು ಹೊಡೆದು ಬಾಯಿ ಬಿಡಿಸಿ ರಾಜು ಜಮೀನ್ದಾರನ ಹೆಂಡತಿ ಸುಕನ್ಯಾಳ ಮೂಗುತಿಯನ್ನು ಮರಳಿ ತಂದು ಕೊಡುತ್ತಾನೆ. ಹಾಗೆ ತಾನು ತಪ್ಪು ತಿಳಿದಿದಕ್ಕಾಗಿ ಜಮೀನ್ದಾರ ರಾಜುವನ್ನು ಕ್ಷಮೆಯಾಚಿಸಿ ಆತನ ತಾಯಿಯ ಆಸ್ಪತ್ರೆ ವೆಚ್ಚವನ್ನು ಭರಿಸುತ್ತಾನೆ. ನಂತರ ರಾಮುವಿಗೆ ಕೊಡುವ ಸಂಬಳವನ್ನು ಜಾಸ್ತಿ ಮಾಡುತ್ತಾನೆ. ತನ್ನ ಆಪ್ತರ ಪಟ್ಟಿಗೆ ರಾಮುವನ್ನು ಸೇರಿಸಿಕೊಳ್ಳುತ್ತಾನೆ ಮತ್ತು ಪಕ್ಕದೂರಿಂದ ತನ್ನ ಸಂಬಂಧಿಗಳ ಮಗಳೊಂದಿಗೆ ರಾಮುವಿಗೆ ಮದುವೆ ಕೂಡ ಮಾಡಿಸುತ್ತಾನೆ.

      ಇದರಿಂದ ತಿಳಿಯುವುದೆನೆಂದರೆ ನಾವು ನಮ್ಮ ಸತ್ಯವನ್ನು ಸಾಯುವವರೆಗೂ ಉಳಿಸಿಕೊಂಡರೆ, ಅದೇ ಸತ್ಯವಂತಿಗೆ ನಮ್ಮನ್ನು ಒಂದು ದಿನ ಉಳಿಸುತ್ತದೆ ಮತ್ತು ಗೆಲ್ಲಿಸುತ್ತದೆ.

ಲಿಖಿತ. ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...