ಸೋಮವಾರ, ಜನವರಿ 5, 2026

ಸಂಚಿಕೆ - ೧೦

'ಸಂಕಲ್ಪ ಗೀತೆ'

ಸುತ್ತಲು ಕವಿಯುವ ಕತ್ತಲೊಳಗೆ 

ಪ್ರೀತಿಯ ಹಣತೆಯ ಹಳ್ಳೋಣ 

ಬಿರುಗಾಳಿಗೆ ಹೊಯ್ದಾಡುವ ಹಡಗನು 

ಎಚ್ಚರದಲಿ ಮುನ್ನಡೆಸೋಣ.


ಕಲುಷಿತವಾದೀ ನದೀ ಜಲಗಳಿಗೆ 

ಮುಂಗಾರಿನ ಮಳೆಯಾಗೋಣ 

ಬರಡಾಗಿರುವೀ ಕಾಡುಮೇಡುಗಳ 

ವಸಂತವಾಗುತ ಮುಟ್ಟೋಣ.


ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ 

ಹೊಸ ಭರವಸೆಗಳ ಕಟ್ಟೋಣ 

ಮನುಜರ ನಡುವಣ ಅಡ್ಡಗೋಡೆಗಳ 

ಕೆಡವುತ ಸೇತುವೆಯಾಗೋಣ.


ಮತಗಳೆಲ್ಲವೂ ಪಥಗಳು ಎನ್ನುವ 

ಹೊಸ ಎಚ್ಚರದೊಳು ಬದುಕೋಣ 

ಭಯ ಸಂಶಯದೊಳು ಕಂದಿದ ಕಣೋಳು 

ನಾಳಿನ ಕನಸನು ಬೆಳೆಯೋಣ.


ರಾಷ್ಟ್ರ ಕವಿ ಜಿ. ಎಸ್. ಶಿವರುದ್ರಪ್ಪ

ಕವನ ಸಂಕಲನ : 'ವ್ಯಕ್ತ ಮಧ್ಯ'

೧೯೯೩ - ೧೯೯೯


ಸಂಗ್ರಹ - ಟಿ.ಎ ಸುಮನ್ ಜಬೀನಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...