ಸೋಮವಾರ, ಜನವರಿ 5, 2026

ಸಂಚಿಕೆ - ೧೦

ಒಳರೋಗಿಗಳು

ಜಗದ ಜನರೆಲ್ಲ ಒಂದಲ್ಲ ಒಂದು ರೀತಿಯ ಒಳರೋಗಿಗಳೆ 

ಅನ್ನಿಸುವುದೊಮ್ಮೆ ಹಲವರನ್ನು ಕಂಡಾಗ 

ಕೆಲವರು ದೈಹಿಕವಾದರೆ ಮತ್ತೆ ಕೆಲವರು ಮಾನಸಿಕರು 

ನಗುವರು ಆದರೆ ಅಲ್ಲಿ ಸಂಪನ್ನತೆಯಿಲ್ಲ 

ಅಳುವರು ಆದರೂ ಯಾರಿಗೂ ತಿಳಿಯುವುದಿಲ್ಲ 

ಅನ್ನಿಸುವುದಿನ್ನೊಮ್ಮೆ ಏಕಾಂಗಿಯಾಗಿಯೆ ಇರಬೇಕೆಂದು 

ಆದರೂ ಸಂಘ ಸಾಂಗತ್ಯ ಬೇಕೆಂದು 

ಅನಿಸುವುದು ಮತ್ತೊಮ್ಮೆ ಲೋಕವೆಲ್ಲಾ ಹೀಗೆಯೆ? 

ಇಲ್ಲ ನನ್ನ ಸುತ್ತಲಿನವರು ಮಾತ್ರ ಹೀಗೆಯಾ ಎಂದು 

ಹಂಚಿಕೊಳ್ಳುವಾಸೆ ನಗುವನ್ನೂ, 

ದುಃಖವನ್ನೂ, ಆಶ್ಚರ್ಯವನ್ನೂ 

ಆದರೆ ಹಂಚಲಾರರು ಎದುರಿನವರ 

ಸ್ಪಂದನವೇಗೊ ಎಂಬ ಸಂಶಯ 

ಅಪರೂಪಕ್ಕೆ ಸ್ಪಂದಿಸುವ ಜೀವ ಸಿಕ್ಕರೂ 

ಅವರೊಂದಿಗಿನ ಬಾಂಧವ್ಯ ಅಲ್ಪಕಾಲವೆ 

ನಿಮಗೂ ಕೂಡ ಹೀಗೆಯೆ ಎನಿಸುವುದೆ? 

ಹೀಗೆ ಜಗವೆಲ್ಲಾ ಹೀಗೆಯೆ ಎನಿಸುವುದು 

ಅಂತರಂಗದಲಿ ಅವರು ಒಳರೋಗಿಗಳೇ ಎಂದು?.


ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...