ಸೋಮವಾರ, ಜನವರಿ 5, 2026

ಸಂಚಿಕೆ - ೧೦

ಸಿಂಧೂರ

ಭಾರತದ ಹಣೆಯ ಸಿಂಧೂರ 

ನಮ್ಮ ಜಮ್ಮು – ಕಾಶ್ಮೀರ


ತಿಳಿದೀರೇ ನೀವು ಸಿಂಧೂರ ಮಹಿಮೆಯ 

ಕೇಳಿಲ್ಲಿ ನೀವು, ಸಿಂಧೂರ ಸಾಹಸವ


ಜೋಡಿ ಪಕ್ಷಿಯ ಮಧುರ ಪಯಣ 

ಹೆಜ್ಜೆಯನಿಟ್ಟಿತು ದೂರದೆಡೆಗೆ 

ಭಾರತ ಸಿಂಧು ರಶ್ಮಿಯೆಡೆಗೆ


ಅವಳ ಬಂಧ ಬೆಸೆದಿತ್ತು ಇನಿಯನೊಡನೆ 

ಪಾತಕಿಗಳ ದೃಷ್ಟಿ ಹತ್ತಿತ್ತು. 

ಅವಳ ಸಿಂಧೂರದೊಡನೆ


ಕಾರ್ಮೋಡ ಕವಿಯಿತು 

ಹೊಸ ಬಾಳಿನ ನಂಟಿಗೆ 

ಮಧುರ ಸ್ವಪ್ನವ ಕದಡಿತು 

ಕುಕ್ಷಿಯೊಂದು ರಪ್ಪನೆ ಬಡಿಯಿತು 

ಒಡಲ ಮೊರೆತ ಜೋರಾಯಿತು 

ಹೃದಯ ಬಡಿತ ಒಡೆಯಿತು 

ಇರುಳ ಛಾಯೆ ಆವರಿಸಿತು


ಕುಸಿಯಿತು ಇನಿಯನ ತಲೆ 

ಅವಳ ಆಕ್ರಂಧನ ಮುಗಿಲ ಮುಟ್ಟಿತು 

ಜಾರಿತು ಕೊರಳಲ್ಲಿದ್ದ ಕರಿಮಣಿಮಾಲೆ 

ಚದುರಿತು ಜೋಡಿ ಹೂ ಮಾಲೆ


ಕ್ಷಣಗಳಲ್ಲಿ ಅಳಿಸಿತು ಹಣಿಯ ಕುಂಕುಮ 

ಕಮರಿತು ಅವಳಿಟ್ಟ ಕುಸುಮ


ಅವಳ ಸಿಂಧೂರ ಅಳಿಸಿದವರ 

ತಲೆ ಧರೆಗುರುಳಿತು 

ಸಿಂಧೂರವೇ ಕೊಟ್ಟಿತು 

ಪ್ರತಿ ಉತ್ತರ


ನಾವು ಹೇಳೋಣ 

ಭಾರತೀಯ ಸೇನೆಗೆ ಜೈಕಾರ...


ಮಂಗಳ ಮಳಲಿ, ಎಂ.ಎ. ಕನ್ನಡ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...