ಸೋಮವಾರ, ಜನವರಿ 5, 2026

ಸಂಚಿಕೆ - ೧೦

ಕಾಣುವ ಹಂಬಲ

ಚರ್ಮವ ಹರಿದು ಚಾಪೆಯ ಮಾಡಿ 

ದೇಹವ ತೆಗೆದು ಕಂಬವ ಮಾಡಿ 

ಕರುಳ ಹರಿದು ಮಾಲೆಯ ಮಾಡಿ 

ರಕ್ತ ತೆಗೆದು ಎಣ್ಣೆಯ ಮಾಡಿ 

ನರವ ಹರಿದು ಬತ್ತಿಯ ಮಾಡಿ 

ಕೂದಲು ತೆಗೆದು ಕಡ್ಡಿಯ ಮಾಡಿ 

ಬೆರಳು ಕಡಿದು ದೀಪದ ಹಿಂದಿನ ಪ್ರಭಾವಳಿಯ ಮಾಡಿ 

ಉಗುರು ತೆಗೆದು ದರ್ಪಣ ಮಾಡಿ 

ಮೆದುಳು ತೆಗೆದು ಮಣಿಯ ಮಾಡಿ 

ಗಂಟಲು ತೆಗೆದು ಗಂಟೆಯ ಮಾಡಿ 

ಹೃದಯ ತೆಗೆದು ಶಂಕವ ಮಾಡಿ 

ನಿನಗಾಗಿ ಚರ್ಮದ ಚಾಪೆಯ ಮೇಲೆ ಮೆದುಳಿನ ಮಣಿ ಇಟ್ಟು 

ಅದರ ಮೇಲೆ ದೇಹವೆಂಬ ದೀಪದ ಕಂಬವನಿಟ್ಟು 

ಅದಕ್ಕೆ ಕರುಳ ಮಾಲೆಯಿಂದ ಸಿಂಗರಿಸಿ 

ಆ ದೀಪಕ್ಕೆ ನರದ ಬಿತ್ತಿಯ ಹೊಸೆದು ಹಾಕಿ 

ರಕ್ತವೆಂಬ ಎಣ್ಣೆ ಸುರಿದು ಕೂದಲಿನ ಕಡ್ಡಿಯ ಹಿಡಿದು 

ನಿನಗಾಗಿ ಕಾಯುತ್ತಿರುವೆ 

ನೀ ಬಂದು ಬೆಂಕಿಯಾಗಿ ಸ್ಪರ್ಶ ಮಾಡಬಾರದೆ 

ನಿನ್ನನ್ನು ಈ ಕಣ್ಣುಗಳಿಂದ ನೋಡಿ 

ಹೃದಯದ ಶಂಕವ ಊದಿ 

ಗಂಟಲಿನ ಗಂಟೆಯ ಬಾರಿಸಿ 

ಈ ನನ್ನ ಮನಸ್ಸಿಂದ ಪೊಜೆಯ ಗೈಯುವೆ ಓ ಶಿವನೆ.....


ರವಿ ಅ.ಮ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...