ಧರಾಧರೇಂದ್ರನ ಮಡಿಲಲಿ
ಧರಾಧರೇಂದ್ರನ ಮಡಿಲಲಿ ವಾಸವಿರುವ
ಸುರಸರಿ ನಾಡೆಂಬ ನಾಡಲಿ,
ನೀಲಾಕಾಶದ ಕುಂಕುಮ ತಿಲಕದಿಂದ
ಅಲಂಕೃತಳಾದ ಭೂದೇವಿಯ ವಕ್ಷಸ್ಥಲದಿ
ಮಾನವನು ಉದಯಿಸಿ
ಧರ್ಮವನೆಂಬ ದಂಡವ ಹಿಡಿದು
ಸತ್ಯವನೆಂಬ ಕವಚವ ತೊಟ್ಟು
ಕರ್ಮಪಥದಿ ನಿರ್ಭಯವಾಗಿ ಸಂಚರಿಸುತ,
ಪರೋಪಕಾರವನು ಪರಮಧರ್ಮವೆಂದು
ಮನಸಲಿ ನೆಲೆಗೊಳಿಸಿ ನಡೆದು
ಕಾಲಚಕ್ರ ತಿರುಗುತಿರಲು
ಕರ್ಮಫಲವು ನೆರಳಿನಂತೆ ಬೆನ್ನಟ್ಟುವುದು;
ಆದುದರಿಂದ, ಓ ಮಾನವನೆ,
ಅಹಂಕಾರವ ತ್ಯಜಿಸಿ,
ವಿವೇಕವನೆಂಬ ದೀಪವ ಹಚ್ಚಿ
ಜೀವನಯಾನವ ಸಾಧಿಸು
ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ