ಸೋಮವಾರ, ಜನವರಿ 5, 2026

ಸಂಚಿಕೆ - ೧೦

 ಸಭೆ

ಸಭೆಯೊಂದು ನಡೆಯುತಿದೆ ಲೋಕದಲಿ 

ಸೇರಿರುವರು ಸಾವಿರಾರು ಪ್ರಜೆಗಳು 

ನಡೆಯುತ್ತಿವೆ ವಾದ-ವಿವಾದಗಳು 

ಅವರು ಹೆಚ್ಚು-ಇವರು ಹೆಚ್ಚು ಎಂಬ ಚರ್ಚೆಗಳು 

ಮರೆತಿರುವರು ಅವರುಗಳು ಅಂತಿಮ ತತ್ವಗಳು 

ಆದರೂ ಕೊನೆಯಲಿ ಹೇಳುವರು ವೇದಾಂತಗಳು.


ಸಭೆಯೊಂದು ನಡೆಯುತಿದೆ ಲೋಕದಲಿ 

ಎಲ್ಲರಲ್ಲೂ ವಿಭಿನ್ನ ವಿಚಾರಗಳು 

ಆದರೂ ಕೇಳುತ್ತಿರುವ ಕಿವಿಗಳು 

ಆಡಂಬರ ನೋಡುತ್ತಿರುವ ಕಣ್ಣುಗಳು 

ಬುದ್ಧಿಯು ತಿಳಿಯುತ್ತಿರುವ ಅಂಶಗಳು 

ಆದರೂ ಮನಸ್ಸು ಒಪ್ಪದ ಸಂಗತಿಗಳು


ಸಭೆಯೊಂದು ನಡೆಯುತಿದೆ ಲೋಕದಲಿ 

ಸಹಕರಿಸಿರುವರು ಎಲ್ಲ ಜನರು 

ದೊಡ್ಡಸ್ಥಿಕೆಯಲ್ಲಿ ಕುಳಿತಿರುವವರು ಕೆಲವರು 

ಕೂರಲು ಯೋಗ್ಯರಲ್ಲ ಎಂಬಂತೆ 

ನಿಂತಿರುವರು ಶ್ರಮಿಸಿದವರು, 

ಭಾಷಣದಲ್ಲಿ ಕೇಳುತಿದೆ ಎಲ್ಲರೂ ಸಮಾನರು 

ಮರೆಯಾಗುತಿದೆ ಮಾನವೀಯತೆಯ ತವರು.


ಸುಜಾತ ಗಿ, ಪೂಜೇರ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...