ಸೋಮವಾರ, ಜನವರಿ 5, 2026

ಸಂಚಿಕೆ - ೧೦

ಅತ್ತೆ ಕೊಟ್ಟ ಉಡುಗೊರೆ....

ನಮ್ ಅತ್ತೆ ಅಳಿಯ ಅಂತ ಕರಿತವ್ಳೆ

ಚಿಕನ್ ಸುಕ್ಕ ತಿನ್ನತವ್ಳೆ

ಮಗಳನ್ನ ಮದ್ದೆ ಮಾಡ್ಕೊ ಅಂತವ್ಳೆ

ಸುಂದ್ರಿ ನನ್ ಮಗಳು ಅಂತವ್ಳೆ

ಅತ್ತೆಯೇನೊ ಮದ್ದೆ ಮಾಡ್ಲಿ ಕಳಿಸವ್ಳೆ

ಮಗಳೇನೊ ಮೊಬೈಲ್ ಹೊತ್ತುಕೊಂಡು ಬಂದವ್ಳೆ

ತರ ತರ ಫೋಟೋ ತೆಗೆತವ್ಳೆ

ಮಾಮ ಅಂತ ಕರಿತವ್ಳೆ

ಮಸಾಲೆ ದೋಸೆ ಕೇಳ್ತವ್ಳೆ

ಸೀರೆ ಗೀರೆ ಅಂತವ್ಳೆ

ಸಿನಿಮಾ ಟೆಂಟಲ್ಲಿ ಕುರ್ತಾವ್ಳೆ

ಸುಂದ್ರ ನಮ್ ಮಾಮ ಅಂತವ್ಳೆ

ಸುನಾಯಿ ಪೌಡ‌ರ್ ಕೇಳ್ತವ್ಳೆ 

ಚೆನ್ನಾಗಿ ಇರ್ಬೇಕು ಅಂತವ್ಳೆ

ಶಾಪಿಂಗ್ ಗೆ ನಡಿ ಅಂತವ್ಳೆ

ಊಟ ಗೀಟ ಮಾಡ್ತವ್ಳೆ

ಉಪ್ಪು ಕಾರ ಇಲ್ಲೇ ತಿನ್ನವ್ಳೆ

ಹಬ್ಬಕೆ ಅಂತ ಹೋಗ್ತಾವ್ಳೆ

ಆರು ದಿನ ಇರ್ತಾವ್ಳೆ

ಅರವತ್ತು ರೀಲು ಮಾಡ್ತವ್ಳೆ

ಹೊಟ್ಟೆ ತುಂಬಾ ತಿಂತವ್ಳೆ

ಹೊಟ್ಟೆ ಎಷ್ಟೋ ಉರುಸ್ತವ್ಳೆ

ಕಾರಲ್ಲಿ ಹೋಗೋಣ ಅಂತವ್ಳೆ

ಕಾಂತಾರ ಸಿನಿಮಾ ಕೇಳ್ತವ್ಳೆ

ಒಟ್ಟಾಗಿ ಬಾಳೋಣ ಅಂತವ್ಳೆ

ಓಡೆ ಪಾಯಿಸ ಮಾಡ್ತವ್ಳೆ

ಹೊಟ್ಟೆ ತುಂಬಾ ತಿನ್ನವ್ಳೆ

ಒಮ್ಮೊಟ್ಟಿಗೆ ನಗಿಸ್ತವ್ಳೆ

ಹೊಲ ಮಾಡೋಣ ಅಂತವ್ಳೆ

ಒಲೆ ಮುಂದೇನೆ ಕುರ್ತಾವ್ಳೆ

ಹಲೋ ಮಾಮ ಅಂತವ್ಳೆ

ಕರಿಯಾಕೆ ಬರಲ್ವಾ ಅಂತವ್ಳೆ

ಕರಿಯಾಕೆ ಹೋದ್ರೆ ಗೋಬಿ ಮಂಚೂರಿ ಕೇಳ್ತವ್ಳೆ

ಹಬ್ಬದ ನೆವ ಹೇಳ್ತಾವ್ಳೆ

ಅಮ್ಮನ ಮನೆಗೆ ಹೋಗ್ತವ್ಳೆ.


ಮಹೇಶ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...