ಸೋಮವಾರ, ಜನವರಿ 5, 2026

ಸಂಚಿಕೆ - ೧೦

ಮಸುಕಿನ ಕನ್ನಡಿಯಲ್ಲಿ ನಸು ನಗು.....

 

ಮಸುಕು ತುಂಬಿದ ಕನ್ನಡಿಯಲ್ಲಿ 

ಮೊಗವ ನೋಡಿ ಮರುಳೆಂದು ಬಾವಿಸುವೆಯ. 

ಚಿತ್ತ ಸೆಳೆದಿರಬಹುದು ಕನ್ನಡಿಯತ್ತ, 

ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು.

ವಾಸ್ತವದಲ್ಲಿ ನಾವು ಪ್ರಕಾಶಿತವಾಗಿದ್ದರು, 

ನಮ್ಮನ್ನು ಮಸುಕಾಗಿ ತೋರಿಸುವುದು, 

ನಮ್ಮನ್ನು ಮಸುಕೆಂದೇ ತೋರಿಸುವುದು.

ಹೌದು ನಾವು ಮರುಳರಾದೆವು, 

ಈ ಮಸುಕಿನ ಕನ್ನಡಿಯಲ್ಲಿ ನೋಡಿಕೊಂಡು.

ಯಾಕೆ ಬೇಕು ಈ ಮಸುಕಿನ ಕನ್ನಡಿ.

ಯಾರದೋ ಚಿತ್ತವನ್ನು ದುರ್ಬಲಗೊಳಿಸಲೇ, 

ಇನ್ಯಾರದೋ ಚಿತ್ತಕ್ಕೆ ಹರ್ಷ ನೀಡಲೇ, 

ಚಿತ್ತ ದುರ್ಬಲಗೊಳಿಸುವ 

ಈ ಮಸುಕಿನ ಕನ್ನಡಿಯ ಏನು ಮಾಡಲಿ 

ಒಡೆದು ಚೂರು ಮಾಡಲೇ, 

ಬಿಸಾಡಿ ಮತ್ತೊಬ್ಬರಿಗೆ ಘಾಸಿಗೊಳಿಸಲೇ.

ಇಲ್ಲ ಇಲ್ಲ ಇಂತ ಮರುಳುತನ ಬೇಡ.

ಮಸುಕು ಕನ್ನಡಿಗೆ ಆವರಿಸಿದೆಯೇ ಹೊರತು 

ಕನ್ನಡಿಯೇ ಮಸುಕಲ್ಲವಲ್ಲ.

ನಮ್ಮನ್ನು ಮಸುಕುಗೊಳಿಸಿದ 

ಈ ಮಸುಕನ್ನು ತೊಲಗಿಸಬೇಕು.

ಆಗ ನಮ್ಮ ಮಸುಕು ತೊಲಗುವುದು.

ಮಸುಕಾದರು ಕನ್ನಡಿ ತನ್ನ ಧರ್ಮ ಪಾಲನೆ ಮಾಡುತ್ತಿದೆ.

ನಾವೇ ನಮ್ಮ ಧರ್ಮ ಪಾಲನೆ ಮಾಡಬೇಕಿದೆ.

ಹಾಗ ಕನ್ನಡಿಯ ಮುಂದೆ ನಸುನಕ್ಕರು, ಅತ್ತರು, 

ನಮ್ಮನ್ನು ಹೇಗೆ ಪರೀಕ್ಷಿಸಿಕೊಂಡರು, 

ವಾಸ್ತವತೆಯನ್ನು ಮಾತ್ರ ತೋರಿಸುತ್ತದೆ.

ಮಸುಕು ಕನ್ನಡಿಯಿಂದ ಹೊರ ಬನ್ನಿ, 

ಈ ಕಿರು ಕನ್ನಡಿಯಲ್ಲೇ ಕಿರು ನಗೆಯ ಬೀರಿ.

ಕಿರು ಹುಡುಗಾಟಿಕೆಯ ನಿಮ್ಮಿ ಚಿತ್ರಕ್ಕೆ, 

ಈ ಆಟಿಕೆಯೇ ನಿಮ್ಮಲ್ಲಿ ನಗುವನ್ನು ತುಂಬಲಿ.


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...