ಗುರುವಾರ, ಜೂನ್ 18, 2026

೩೫ನೇ ಸಂಪುಟದ ಆಶಯ ನುಡಿ


Yashukumar D.



ಡಾ. ಯಶುಕುಮಾರ್ ಡಿ.

ಅಧ್ಯಾಪಕರು ಮತ್ತು ಬಿತ್ತಿ ಸಂಚಾಲಕರು

ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ,

ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ


ಆಶಯ ನುಡಿ


ಬಿತ್ತಿದ ಬೀಜಕ್ಕೆ ಫಸಲು ಬರಲಿ

      ಮೂರು ದಶಕಗಳಿಂದ ವಿದ್ಯಾರ್ಥಿಗಳ ಸೃಜನಶೀಲತೆಗೆ ಹೊಳಪುಗನ್ನಡಿಯಾಗಿರುವ ವಿಭಾಗದ 'ಬಿತ್ತಿ' ಗೋಡೆಬರಹವು ಈ ವರ್ಷವೂ ನಾವೀನ್ಯತೆಗಳಿಂದ ಮೂಡಿಬಂದಿದೆ. ಹೊಸ ಬರಹಗಾರರು ಮತ್ತು ಹಲವರ ಮೊದಲ ಬರಹಗಳಿಗೆ 'ಬಿತ್ತಿ' ಆಸರೆಯಾಗಿದೆ. ಸಾಹಿತ್ಯದ ಹಲವು ಪ್ರಕಾರಗಳಿಗೆ, ಮಾದರಿಗಳಿಗೆ ಆರಂಭಿಕ ಒತ್ತಾಸೆಗಳನ್ನು ನೀಡಿದ ಬಿತ್ತಿಗೆ ಸಂಪಾದಕರು ಮತ್ತು ಅವರ ಬಳಗ ಸ್ವಂತದೆನ್ನುವ ತುಡಿತದಿಂದ ಸಮಯ, ಶ್ರಮ, ಒತ್ತಾಯ, ಪ್ರಕಟನಾ ಜವಾಬ್ದಾರಿಗಳನ್ನು ಕಾಲಕ್ಕನುಗುಣವಾಗಿ ನೀಡಿ ಚಂದವಾಗಿಸಿದ್ದಾರೆ.

      ವರ್ತಮಾನದ ವಿದ್ಯಾರ್ಥಿಗಳು ಸಾಹಿತ್ಯಕ ಚಟುವಟಿಕೆಗಳಿಂದ ದೂರವಾಗುತ್ತಿದ್ದಾರೆ ಎನ್ನುವ ಆರೋಪಗಳಿಗೆ 'ಬಿತ್ತಿ' ಪತ್ರಿಕೆ ಸಮಂಜಸವಾದ ಉತ್ತರಗಳನ್ನು ನೀಡಿದೆ. ತಕ್ಷಣದ ಪ್ರತಿಕ್ರಿಯೆಗಳು, ಒತ್ತಾಯದ ಬರಹಗಳೂ ಕೂಡಾ ಪ್ರಬುದ್ಧ ಚಿಂತನೆಗಳಿಗೆ ದಾರಿತೋರಿವೆ. ಹೊಸ ತಲೆಮಾರಿನ ಬರಹಗಾರರಿಗೆ ಆಧಾರವನ್ನು, ಬರಹಗಳಿಗೆ ಬೆಚ್ಚಗಿನ ಆಸರೆಯನ್ನು ಬಿತ್ತಿ ಬಳಗ ಒದಗಿಸಿದೆ.

      ಬಿತ್ತಿ ಬೆಳೆಯುವ ಕ್ರಿಯೆಗೆ ಕಾಯಬೇಕು. ಕಾಯಿ ಹಣ್ಣಾಗುವ ಕ್ರಿಯೆಯೇ ಬಿತ್ತಿಯ ಬರಹಗಳ ಮೂಲಕ ನಿಧಾನಕ್ಕೆ, ಸಾವಧಾನದಲ್ಲಿ ಸಾಧ್ಯವಾಗಿದೆ. 'ಬಿತ್ತಿ'ಯಲ್ಲಿ ಬಿತ್ತಿದ ಅಕ್ಷರಗಳು ಸಮೃದ್ಧವಾದ ಬೆಳೆಯಾಗಲಿ, ಬೆಳೆದ ಫಸಲು ಸಹೃದಯಗಳಲ್ಲಿ ಜೀವ ಚೈತನ್ಯ ತರಲಿ. ಬಿತ್ತಿ ಬಳಗಕ್ಕೆ ಶುಭಾಶಯಗಳೊಂದಿಗೆ.

ತಮ್ಮ ವಿಶ್ವಾಸಿ       
ಡಾ. ಯಶುಕುಮಾರ್ ಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...