ಸೋಮವಾರ, ಜೂನ್ 15, 2026

ಸಂಚಿಕೆ - ೨೪

ನನ್ನ ಪುಟ್ಟ ಕವನಗಳು

ಅಂಶ ಷಟ್ಟದಿ ॥ ಭಕ್ತಿಯಂ ತೋರಿಸಿ 

ಶಕ್ತಿಯಂ ನೀಡುವೆ 

ಸಕ್ಕರೆಯಂ ತಂದೆ ಅಕ್ಕರೆಯಲ್


ನೋಟದ ಕಣ್ಣಳು 

ಬೇಟಿಗೆ ಕಾದಿದೆ

ಆಟದ ಮನ್ಸು ಕಾಟವ ಕೊಟ್ಟಿದೆ


ಒಲವಿನ ಮನಗಳು 

ಕಲರವ ತಂದಿದೆ 

ದಾಳದ ಹುರುಳು ಎಲ್ಲವನೂಕಿದೆ


ಪ್ರೇಮಿಗಳು ಹೊತ್ತುಕೊಂಡು ಸಾಗುವರು, 

ನಾನೇನು ಮಾಡಲಿ ಸಿಂಗಲಯ್ಯಾ, 

ಎನ್ನ ಕಾಲೇ ನನ್ನ ಸಂಗಾತಿ, 

ದೇಹವೇ ನನ್ನ ಪ್ರೀತಿ, 

ಮನಶಕ್ತಿಯೇ ಚೇತನವಯ್ಯ.

ಯುವ ಪ್ರೇಮಿಗಳಿರೇ, ಕೇಳಿರಯ್ಯ 

ಪ್ರೇಮಿಗಳಿಗೆ ಬ್ರೇಕಪ್ ಉಂಟು, ಸಿಂಗಲ್ಸ್‌ಗಳಿಗಲ್ಲ!


ಮನದಿಚ್ಚೆಗೆ ಪ್ರೀತಿ ಮಾಡಿದೆ 

ಬಳಗದಿಚ್ಚೆಗೆ ದ್ರೋಹ ಮಾಡಿದೆ 

ಮನಸಿನ ನೋವಾ ಉಂಡು 

ಬಳಗವ ಮೆಚ್ಚಿಸಲು ಪೋಗಿ 

ನಲ್ಲನ ಹೃದಯವೇ ಹೊಡೆದೆ


ಜೀವನದೊಕ್ಕಾಲು ಬಳಗಕ್ಕೆ 

ಜೀವನದುಕ್ಕಾಲು ಕೊರಗಿಸಿದೆ 

ಜೀವ ಮೆಚ್ಚಿದವನನ್ನೊರೆದು 

ಭಾವನೆಗಳನದುಮಿಟ್ಟು 

ನವ ನಲ್ಲನೊಂದಿಗೆಗೆ ಬಾಳ್ವೆ


ಕಂ ॥  ಕಣ್ಣಾವನೆಯನ್ನೋಡದೆ 

ಮನಾವನೆಯನ್ತಿಳಿಯದೆ ನೋಯಿಸುವೇಕೆ |

ಕ್ಷಣ ಗಳಿಗೆಯಲತಿಯಾಕ 

ರ್ಷಣೆಯಲ್ಲವ ತೋರಿ ನೋಯಿಸಿದೆನೀ ಮನವಮ್ ॥

  

ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...