ಮೊದಲು ಮಾಡಿದ ಅಡುಗೆ
ಬೆಳಿಗ್ಗೆ ೫.೩೦ ಹೊತ್ತು ಮನೇಯಂಗಳದ ಮಾಮರದ ಮೇಲಿದ್ದ ಹುಂಜಗಳ ಕೂಗು ಎಂಥ ಗಾಢ ನಿದ್ರೆಯಲ್ಲಿ ಮಲಗಿದವರನ್ನ ಎಬ್ಬಿಸುವಂತದ್ದು, ಅದೇ ಹೊತ್ತಿಗೆ ರಾಧಾಳ ಅಪ್ಪ ಎದ್ದು ಬೆಳಗಿನ ಅಭ್ಯಂಜನ ಮುಗಿಸಲು ಆಣಿಯಗುವಾಗ, ೫ರ ಹರೆಯದ ರಾಧಾ ಕೂಡ ಎದ್ದು ಅಪ್ಪನೊಂದಿಗೆ ತನ್ನ ಅಭ್ಯಂಜನ ಮುಗಿಸಿದಳು. ಅಪ್ಪನೊಂದಿಗೆ ಶಂಕರಮ್ಮನ ಹೋಟೆಲಿಗೆ ಹೋಗಿ ತಿಂಡಿ ತಿಂದು ಇತ್ತ ಮನೆಯ ಕಡೆಗೆ ಬಂದರೆ ಅತ್ತ ಅವಳಪ್ಪಾ ಕೆಲಸಕ್ಕೆ ಹೋಗಲು. ಆಕೆ ಮನೆಗೆ ಓಡೋಡಿ ಬಂದಳು.
ಆದ್ರೆ ಅಲ್ಲಿ ದಿನಾ ಬೇಗ ಎದ್ದು ಮನೆ ಅಂಗಳ ಗುಡಿಸುತ್ತಿದ್ದ ಅವಳಮ್ಮ ಇನ್ನೂ ಎದ್ದಿರಲಿಲ್ಲ. ಅಮ್ಮನಿಗೆ ಗೊತ್ತಾಗದಂತೆ ಆಕೆಗೆ ಸಹಾಯ ಮಾಡೊ ನೆಪದಲ್ಲಿ ಸದ್ದಿಲ್ಲದಂತೆ ಅಂಗಳ ಗುಡಿಸಿ ಅಮ್ಮನನ್ನು ಅಬ್ಬಿಸಲು ಮನೆಯೊಳಗೇ ಹೋಗಲು ಅವಳಮ್ಮ ಮಳ್ಕೊಂಡೆ ಇದ್ದಳು. ಆಕೆ "ಅಮ್ಮ ಎದ್ದೇಳು ನಾನೇನೋ ನಿನಗೆ ತೋರಿಸ್ಟೇಕು" ಅಂತ ಕೂಗಲು ನಿಧಾನಕ್ಕೆ ಎದ್ದು ಹೊರಬಂದು ನೋಡಲು ಅಂಗಳದಲ್ಲಿ ಅರೆಬರಿಯಾಗಿ ಗುಡಿಸಿದ ಅಂಗಳ ನೋಡಿ 'ಏನೂ ಮೇಡಂ ಅವು ಗುಡಿಸಿರೋ ಹಾಗಿದೆ" ಅಂತ ಹೇಳಿ ನಸುನಕ್ಕೆ ತಲೆ ಸವರಿದಳು. ಆಕೆ ಅಮ್ಮನಿಗೆ ಅರಾಮಿಲ್ಲದ ಹಾಗಿತ್ತು. ನಿಧಾನಕ್ಕೆ ಒಲೆಯಕಡೆ ಹೋಗಿ ಒಲೆಯ ಬೂದಿ ತೆಗೆದು ಒಲೆ ಸಾರಿಸಿ ಹಾಲು ಬಿಸಿಗೆ ಇಟ್ಟು ರಾಧಾಗೆ ನೋಡಲು ಹೇಳಿ ಒಳಗೆ ಹೋಗಿ ಮಂಚದ ಮೇಲೆ ನಿದ್ರೆಗೆ ಜಾರಿರಲು ಆಕೆ ಹಾಲು ಲೋಟಕ್ಕೆ ಹಾಕಿ ತಂದು ಕಿಟಕಿಯಲ್ಲಿಟ್ಟು ಎಬ್ಬಿಸಲು ಹೋದಾಗ ಮೈ ಬಿಸಿಯಾಗಿತ್ತು. ತನ್ನ ತಾಯಿಗೆ ಜ್ವರ ಬಂದಿರುವುದನ್ನ ಅರಿತ ಅವಳು ತಾನೇ ಅಡುಗೆ ಮಾಡುವುದಾಗಿ ನಿರ್ಧಾರಿಸಿ ಅಮ್ಮನಿಗೆ ತಿಳಿಸಿದಳು ಮತ್ತೆ ಸ್ವಲ್ಪ ಹೇಳಿಕೊಡು ಎಂದು ಹೇಳಿ ಅಡುಗೆ ಮಾಡಲು ಒಲೆ ಎದುರು ಕೂತಳು. ಎಂದೋ ಒಮ್ಮೆ ಅಮ್ಮ ಅನ್ನ ಮಾಡುವುದನ್ನು ನೋಡಿ ಹೇಗೆ ಎತ್ತ ಏನೂ ಅಂತೆಲ್ಲ ಕೇಳಿದುಂಟು; ಅದರಂತೆ ಅನ್ನ ಮಾಡಿ, ಸಾರು ಮಾಡಲು ಗೊಂದಲಕ್ಕೆ ಒಳಗಾಗಿ ತನ್ನಮ್ಮನನ್ನು ಕೇಳಿ ತಾನು ಬೇಳೆಸಾರು ಮಾಡವೇ ಅಂತ ಹೇಳಿ ತಾಯಿ ಬಳಿ ಒಂದೊಂದಾಗಿ ಕೇಳಿ ಕೊನೆಗೂ ಸಾರ್ ಮಾಡಿಬಿಟ್ಟು. ತಾನೇನೋ ಅಡುಗೆಯಲ್ಲಿ ಮೇಲುಗೈ ಸಾಧಿಸಿದವಳೋ ಎಂಬಂತೆ ತಲೆಗೆ ರೂಮಲು ಕಟ್ಟಿ ಅಡುಗೆ ಒಲೆಯ ಮಸಿ ಮೈ ಮುಖಾಕೆಲ್ಲ ಹಕ್ಕೊಂದ್ದಿಟ್ಟಿದ್ದು; ಸೌಂಟಲ್ಲಿ ಸಾರಿನ ರುಚಿ ನೋಡಲು ತಾಯಬಳಿ ಬರಲು ಮಲಗಿದ್ದ ತಾಯಿ ಅಲ್ಲಿಂದಲೇ ಈ ನಳಮಹಾರಾಣಿ ಅವತಾರ ನೋಡಿ ಮುಗುಳುನಗೆ ಬೀರಿ "ಎನ್ನಿ ನಂಗಿಂತ ಚೆನ್ನಾಗಿ ಮಾಡಿಟ್ಟಿದೀರಾ ಸಾರು ತುಂಬಾ ಚೆನ್ನಾಗಿದೆ" ಅಂತ ತನ್ನ ಮಗಳು ತುಂಬಾ ಬೆಳೆದಿಟ್ಟಿದ್ದಾಳೆ. ತನಾಗಸರೆ ಆದಳಲ್ಲ ನನ್ನ ಮಗಳು ಅಂತ ಆನಂದದ ಕಣ್ಣೀರು ಸುರಿಸಿ ಆಕೆಯನ್ನು ಬಾಚಿ ತಬ್ಬಿಕೊಂಡು ಮುತ್ತಿಡಲು: ತಾನು ಮಾಡಿದ ಮೊದಲ ಅಡುಗೆ ನೆನೆದು ತಾನು ಗೆದ್ದಿಟ್ಟೆ ಅಂತ ಆನಂದದಲ್ಲಿ ಮೈಮರೆತು ಕುಣಿದಾಡಿಬಿಟ್ಟು ತಾನು ಮಾಡಿದ ಮೊದಲ ಅಡುಗೆ ನೆನೆದು.
ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ