ಇನ್ನು ನನಗೆ...
ಇನ್ನು ನನಗೆ ಪೆನ್ನು, ಪ್ರಿಂಟು, ಫೀಸುಗಾಗಿ ಓಡಬೇಕಾಗಿಲ್ಲ.
ಇನ್ನು ನನಗೆ ಮರೆತು ಹೋದ ಪುಸ್ತಕಕ್ಕೆ ಫೈನ್ ಕಟ್ಟಬೇಕೆಂದಿಲ್ಲ.
ಇನ್ನು ನನಗೆ ಖುರ್ಚಿಗಳನ್ನು ಮೇಲೆ ಕೆಳಗೆ ಸಾಗಿಸಬೇಕೆಂದಿಲ್ಲ.
ಇನ್ನು ನನಗೆ ಸೋಮವಾರದ ಬಿತ್ತಿಗೆ ವಸ್ತು ಹುಡುಕಬೇಕೆಂದಿಲ್ಲ.
ಇನ್ನು ನನಗೆ ಸೆಮಿನಾರ್ ಗೆ ತಪ್ಪಿಸಲು ಕಾರಣ ಹುಡುಕಬೇಕೆಂದಿಲ್ಲ.
ಇನ್ನು ನನಗೆ ಹಾಜರಾತಿಯ ಬ್ಲಾಕ್ ಮೈಲಿಗೆ ಹೆದರಬೇಕೆಂದಿಲ್ಲ.
ಇನ್ನು ನನಗೆ ಟ್ರಿಪ್ಪಿಗೆ ಎಲ್ಲರನ್ನೂ ಒಪ್ಪಿಸಲು ಹರಸಹಾಸ ಮಾಡಬೇಕೆಂದಿಲ್ಲ.
ಇನ್ನು ನನಗೆ ಮಧ್ಯಾಹ್ನದ ಊಟಕ್ಕೆ ಹೋಟೆಲು ಹುಡುಕಬೇಕೆಂದಿಲ್ಲ.
ಇನ್ನು ನನಗೆ ಕಚೇರಿಯ ನೋಟಿಫಿಕೇಶನ್ ಗೆ ಹೆದರಬೇಕೆಂದಿಲ್ಲ.
ಇನ್ನು ನನಗೆ 30 ಪುಟ ಉತ್ತರ ಬರೆದು ಕೈ ನೋಯಿಸಬೇಕೆಂದಿಲ್ಲ.
ಇನ್ನು ನನಗೆ ಮರಿಸಿದ್ದಪ್ಪನ ಸನ್ಯಾಸಿ ಜೀವನ ನೋಡಬೇಕೆಂದಿಲ್ಲ.
ಇನ್ನು ನನಗೆ ಪಲ್ಲವಿಯ ಮಯೂರ ಮಾಸಿಕಕ್ಕೆ ಕಾಯಬೇಕೆಂದಿಲ್ಲ.
ಇನ್ನು ನನಗೆ ರೇಷ್ಮಾಳ ಕವಿತೆಗೆ ಕಿವಿಯಾಗಬೇಕೆಂದಿಲ್ಲ.
ಇನ್ನು ನನಗೆ ಸೌಮ್ಯಳ ಮಕ್ಕಳಾಟಿಕೆಯ ನೋಡಬೇಕೆಂದಿಲ್ಲ.
ಇನ್ನು ನನಗೆ ಪೂಜಾಳ ಸಮಯ ನಿಷ್ಠೆಯ ನೋಟ್ ಮಾಡಬೇಕೆಂದಿಲ್ಲ.
ಇನ್ನು ನನಗೆ 'ಪುಷ್ಪ' ಎಂದು ಕರೆಯಲು ಮಹೇಶನು ಜೊತೆ ಇರಬೇಕೆಂದಿಲ್ಲ.
ಇನ್ನು ಜಗದೀಶನ ಕನ್ನಡ ಕೇಳಿ ದಂಗಾಗಬೇಕೆಂದಿಲ್ಲ.
ಇನ್ನು ನನಗೆ ಜಬೀನಾಳ ಭಯವ ಕಂಡು ನಾನೂ ಭಯ ಪಡಬೇಕೆಂದಿಲ್ಲ.
ಇನ್ನು ಗಹಗಹಿಸಿ ನಗುವ ಆಶ್ರಿತಾಳ ಮುಖವ ನೋಡಬೇಕೆಂದಿಲ್ಲ.
ಇನ್ನು ಸೌಮ್ಯಳ ಎಚ್ಚರಿಕೆಯ ಮಾತನ್ನು ಕೇಳಲು ಅವಕಾಶವಿಲ್ಲ.
ಇನ್ನು ಶ್ರೇಯಸ್ಸಿನ ದೃಶ್ಯಂ ಕವಿತೆಗೆ ಕಾಯಬೇಕೆಂದಿಲ್ಲ.
ಇನ್ನು ನನಗೆ ದುಶ್ಯಂತನ ಪಾಯಸ, ಪಲಾವಿಗೆ ರುಚಿ ನೋಡಿ ಕೊಡಬೇಕೆಂದಿಲ್ಲ.
ಇನ್ನು ಅನೂಪನಿಗೆ ಹೆಣ್ಣು ಹುಡುಕಿ ಕೊಡುವ ಭಾರವಿಲ್ಲ.
ಇನ್ನು ಲಿಖಿತಾಳ ಅಪ್ಡೇಟ್ ಗಾಗಿ ಪೃಥ್ವಿ ಕೈಗೆ ಸಿಗಬೇಕೆಂದಿಲ್ಲ.
ಇನ್ನು ರಮ್ಯಾ, ಪ್ರೇಮಾಳ ಕುಂದಾಪುರ ಕನ್ನಡ ಕೇಳಬೇಕೆಂದಿಲ್ಲ.
ಇನ್ನು ನನಗೆ ಅಭಿಷೇಕನಿಗೆ ಕರೆ ಮಾಡಿ ತರಗತಿ ಆರಂಭವಾಯಿತು ಎಂದು ಎಚ್ಚರಿಸಬೇಕೆಂದಿಲ್ಲ.
ಇನ್ನು ಚೈತ್ರಾಳ ನೇರ ಮಾತಿಗೆ ಬಲಿಯಾಗಬೇಕೆಂದಿಲ್ಲ.
ಇನ್ನು ನನಗೆ ನಾಗಪ್ಪ ಸರ್ರ ಮಾನವೀಯತೆಯ ಪಾಠಕ್ಕೆ ತಲೆಯಾಡಿಸಬೇಕೆಂದಿಲ್ಲ.
ಇನ್ನು ನನಗೆ ಸೋಮಣ್ಣ ಸರ್ರ ಪ್ರೀತಿ ಕಾಳಜಿಯ ಅನುಭವಿಸಬೇಕೆಂದಿಲ್ಲ.
ಇನ್ನು ನನಗೆ ಧನಂಜಯ ಸರ್ರ ಮುಗುಳ್ನಗೆಗೆ ಸೋಲಬೇಕೆಂದಿಲ್ಲ.
ಇನ್ನು ನನಗೆ ಯಶು ಸರ್ರ ಹಾಜರಾತಿಯ ಕರೆಗೆ ಓ ಗೊಡಬೇಕೆಂದಿಲ್ಲ.
ಇನ್ನು ನನಗೆ ಜೂನಿಯರ್ಗಳ ಬಳಿ ವಿದಾಯ ಯಾವಾಗೆಂದು ಕೇಳಬೇಕೆಂದಿಲ್ಲ.
ಆದರೆ... ಆದರೆ
ಇವೆಲ್ಲವೂ ಮತ್ತೆ ಬೇಕೆಂದರೂ, ಆ ಕ್ಷಣವ ಖರೀದಿಸಲು ಸಾಧ್ಯವಿಲ್ಲ.
ಸಲೀಂ ಸುಳ್ಯ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ