ಗೆಳೆಯರೆಂದರೆ ಯಾರು?
ಗೆಳೆಯರೆಂದರೆ ಯಾರು?
ನಮ್ಮೊಳಗಿನ ಅಂತರಂಗವನು
ತಿಳಿಯಬಲ್ಲವರು
ಸುಖ ದುಃಖದಿ ಧೈರ್ಯದಿಂದಲಿ
ನಮ್ಮೊಂದಿಗೆ ನಿಲ್ಲಬಲ್ಲವರು
ಗೆಳೆಯರೆಂದರೆ ಯಾರು?
ಸದಾ ಸನ್ಮಾರ್ಗದಾರಿಯನು
ತೋರಬಲ್ಲವರು
ಕೊನೆಗೆ ಸಂಬಂಧವನು ದಾಟಿ
ಬಂಧವನು ಮೀಟಿ ನಿಲ್ಲುವವರು
ಗೆಳೆಯರೆಂದರೆ ಯಾರು?
ನಿಸ್ವಾರ್ಥ ಭಾವದಿ ಹೊಂದಿಕೊಳ್ಳುವವರು
ಪ್ರೀತಿ-ಪ್ರೇಮವ ಹಂಚಿ ಬಾಳುವವರು
ಸರಿ-ತಪ್ಪುಗಳ ಗುರುತಿಸುವವರು
ಹಿರಿಯರ-ಗುರುಗಳ ಸ್ಥಾನದಲ್ಲಿ ನಿಲ್ಲಬಲ್ಲವರು
ಗೆಳೆಯರೆಂದರೆ ಯಾರು?
ಅವರವರ ಭಾವನೆಗಳಿಗೆ ಸರಿಹೊಂದುವವರು
ಅವರವರ ಮಿತಿಗಳಿಗೆ ಎಟಕುವವರು
ಅವರವರ ಯೋಗ್ಯತೆಯ ನಿರ್ಧರಿಸಬಲ್ಲವರು
ನಿಜಕ್ಕೂ ಗೆಳೆಯರೆಂದರೆ ಯಾರು?
ದುಶ್ಯಂತ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ