ನನ್ನವನು
ಕಣ್ಣ ತುಂಬಾ ನಿನ್ನ ಬಿಂಬ
ಕಾದಿರುವೆ ಕಾತರದಲಿ
ಕಲ್ಪನೆಯ ಮುಗಿಲಲ್ಲಿ
ಕೆಂದಾವರೆ ಮೊಗವಿದು
ಅಡಗಿರುವ ಮೋಡದಲಿ
ಹೊಂಬಿಸಿಲು ಹೊಂಗಿರಣ
ಮುಗೈಯ ಮನಸನು ಸೆರೆ
ಹಿಡಿದಿರುವೆ ಕಣ್ಣಿನಲ್ಲಿ
ಬೀರಿರುವ ಪದಗಳಲ್ಲಿ
ನಿನ್ನೊಲವ ಚಳಿ ಗಾಳಿ
ಮನದಲ್ಲಿ ಬೀಸುತ್ತಿದೆ ಕನಸಿನ
ಹೂಮಾಲೆ ಬಲವಾಗಿ ಪೋಣಿಸಿದೆ
ಕಣ್ಣ ತುಂಬಾ ನಿನ್ನದೇ ಬಿಂಬ
ಭವ್ಯ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ