ಪುಟ್ಟ ಜೀವ
ರತ್ನಳು ಪೇಟೆಗೆಂದು ಮನೆಯಿಂದ ಸ್ವಲ್ಪ ದೂರ ನಡೆದುಕೊಂಡು ಹೋಗುವಾಗ ತೆಂಗಿನ ಮರದಿಂದ ಏನೋ ಬಿದ್ದದನ್ನು ಗಮನಿಸಿದಳು. ಅದು ಏನು ಎಂದು ನೋಡಲು ರತ್ನ ಓಡಿಕೊಂಡು ಹೋಗಿ ತೆಂಗಿನ ಮರದ ಬುಡಕ್ಕೆ ಬಗ್ಗಿ ನೋಡಿದಳು. ಆದರೆ ಏನು ಕಾಣಿಸಲಿಲ್ಲ. ಏನೋ ಬಿದ್ದದನ್ನು ನೋಡಿದೆ ಹೌದು ಆದರೆ ಈಗ ಕಾಣಿಸುತ್ತಿಲ್ಲ ಎಂದು ಹುಡುಕಲು ಪ್ರಾರಂಭಿಸಿದಳು. ಆಗ ತೆಂಗಿನ ಮರದ ಹತ್ತಿರ ಹುಲ್ಲಿನ ಪೊದೆಯಿಂದ ಯಾವುದೋ ಮರಿಯು ಕೂಗುತ್ತಿದ್ದ ಶಬ್ದವು ರತ್ನಳಿಗೆ ಕೇಳಿಸಿತ್ತು. ರತ್ನಳು ಆ ಪೊದೆಯಿಂದ ಬಂದ ಶಬ್ದವನ್ನು ಹಿಂಬಾಲಿಸಿಕೊಂಡು ಹೋಗಿ ನೋಡಿದಾಗ ಕಣ್ಣು ತೆರೆಯದ ಪುಟ್ಟ ಜೀವ, ಮೇಲಿನಿಂದ ಬಿದ್ದ ರಭಸದಿಂದ ಹೆದರಿಕೊಂಡು ಅಳಿಲಿನ ಮರಿಯು ತನ್ನ ಗೂಡಿನಿಂದ ಕೆಳಗೆ ಬಿದ್ದಿತ್ತು. ಅದನ್ನು ಎತ್ತಿ ಆಚೆ ಎಲ್ಲಿಯಾದರೂ ಬಿಟ್ಟು ಹೋಗುವ ಎಂದರೆ ಬಕಪಕ್ಷಿಗಳಂತೆ ಕಾಯುತ್ತಿರುವ ಗಿಡುಗಗಳು. ಈ ಮರಿಯನ್ನು ತಿಂದುಬಿಡುತ್ತದೆಂದು ಒಂದು ಉಪಾಯ ಮಾಡಿದಳು. ತಾನು ಪೇಟೆಗೆ ಮತ್ತೆ ಹೋದರೆ ಆಯ್ತು ಎಂದುಕೊಂಡು ಅಳಿಲಿನ ಮರಿಯನ್ನು ಎತ್ತಿಕೊಂಡು ಮನೆ ದಾರಿ ಹಿಡಿದಳು. ಆಕೆ ಮನೆಗೆ ತಲುಪಿದ ನಂತರ ಆ ಪುಟ್ಟ ಜೀವಕ್ಕೆ ಆರೈಕೆ ಮಾಡಿ, ಅದಕ್ಕೊಂದು ಮನೆಯಲ್ಲಿ ಇದ್ದ ಸಣ್ಣ ಬುಟ್ಟಿಯನ್ನು ತಂದು ಆ ಬುಟ್ಟಿಗೆ ಬಟ್ಟೆಯನ್ನು ಹಾಸಿ ಅದರಲ್ಲಿ ಅಳಿಲು ಮರಿಯನ್ನು ಮಲಗಿಸಿ ರತ್ನಳು ಪೇಟೆಗೆ ಹೋದಳು. ರತ್ನಳು ಪೇಟೆಯಿಂದ ಮನೆಗೆ ವಾಪಸ್ಸು ಬರುವಾಗ ತನಗೆ ಬೇಕಾದ ವಸ್ತುಗಳು ಹಾಗೆಯೇ ಅಳಿಲು ಮರಿಗೆ ಬೇಕಾದಂತಹ ವಸ್ತುವನ್ನು ತಂದಳು. ಅವಳು ಆ ಮರಿಗೆ ಹಾಲನ್ನು ಬಿಸಿ ಮಾಡಿ ಇಂಜೆಕ್ಷನ್ ಟ್ಯೂಬ್ ನಲ್ಲಿ ಅದಕ್ಕೆ ಹಾಲು ಕುಡಿಸಿದಳು.
ದಿನಗಳು ಕಳೆದಂತೆ ಆ ಅಳಿಲು ಮರಿ ಕಣ್ಣು ಬಿಟ್ಟುಕೊಂಡು ಎಲ್ಲಂದರಲ್ಲಿ ನೋಡತ್ತ, ಎದ್ದು ಓಡಾಡಲು ಪ್ರಯತ್ನಪಟ್ಟಿತ್ತು. ರತ್ನ ಅಳಿಲಿನ ಚೇತರಿಕೆ ನೋಡಿ ತುಂಬಾ ಖುಷಿ ಪಟ್ಟಳು. ರತ್ನಳು ಅದಕ್ಕೆ ಒಂದು ಹೆಸರು ಇಡಬೇಕಲ್ಲ ಎಂದು ಎನ್ನಿಸಿತ್ತು. ಆದರೆ ಯಾವುದು ಹೆಸರು ಇಡುವುದೆಂದು ಗೊತ್ತಾಗಲಿಲ್ಲ. ಕೊನೆಗೆ ರತ್ನಳಿಗೆ ಒಂದು ಹೆಸರು ಹೊಳೆಯಿತು ಮಿಂಕ್ ಎಂದು ಇಟ್ಟಳು. ರತ್ನಳಿಗೆ ತನ್ನ ದೈನಂದಿನ ಬೆಳಿಗ್ಗೆ ಕೆಲಸದ ಜೊತೆಗೆ ಮಿಂಕ್ಗೆ ತಿಂಡಿ-ಹಾಲು ಹಾಕಿ, ರತ್ನಳು ಕಾಲೇಜಿಗೆ ಹೋಗುತ್ತಿದ್ದಳು. ಮಿಂಕ್ ದಿನವಿಡೀ ತನ್ನ ಗೂಡಿನ ಹಾಸಿಗೆ ಮೇಲೆ ಮಲಗಿಕೊಂಡು ತಿಂದುಕೊಂಡು ಇರುತ್ತಿತ್ತು. ರತ್ನಳು ಕಾಲೇಜಿನಿಂದ ಬಂದ ತಕ್ಷಣ ಅವಳ ಬಳಿ ಓಡಿಕೊಂಡು ಹೋಗಿ ಅವಳ ಜೊತೆ ಆಟವಾಡುತ್ತಿತ್ತು. ಮಿಂಕ್ ಅವಳನ್ನು ತುಂಬಾ ಹಚ್ಚಿಕೊಂಡಿತ್ತು, ಈಗ ಮಿಂಕ್ ಓಡಾಡಲು ಪ್ರಾರಂಭಿಸಿತ್ತು. ಒಂದು ಕಡೆ ಇದ್ದಲ್ಲಿ ಮಿಂಕ್ ಕಣ್ಣು ಮಿಟಕಿಸುವುದರಲ್ಲಿ ಮತ್ತೊಂದು ಕಡೆಯಲ್ಲಿ ಇರುತ್ತಿತ್ತು. ಹೀಗೆ ಮನೆ ತುಂಬಾ ಓಡಾಡಿ ಆಟವಾಡುತ್ತಿತ್ತು.
ರತ್ನಳಿಗೆ ಪರೀಕ್ಷೆ ಇರುವುದರಿಂದ ಓದಿ ಮಲಗುವಾಗ ತಡರಾತ್ರಿಯಾಯಿತು. ಆದರಿಂದ ಮರುದಿನ ಬೆಳ್ಳಿಗೆ ಎದ್ದದ್ದು ತಡವಾಯಿತು. ಹಾಗಾಗಿ ತನ್ನ ದೈನಂದಿನ ಕೆಲಸ ಮುಗಿಸಿ, ಮಿಂಕ್ಗೆ ತಿಂಡಿ-ಹಾಲು ಹಾಕಿ. ಅವಸರ ಅವಸರದಿಂದ ಕಾಲೇಜು ಪುಸ್ತಕಗಳನ್ನು ಬ್ಯಾಗ್ಗೆ ತುಂಬಿಸಿಕೊಂಡು, ಕಾಲಿಗೆ ಚಪ್ಪಲಿಯನ್ನು ತುರುಕಿಸಿಕೊಂಡು ಹೊರಟಳು. ಮದ್ಯ ದಾರಿ ತಲುಪುವಾಗ ಕಾಲೇಜಿನ ಗುರುತಿನ ಚೀಟಿ ಮನೆಯಲ್ಲಿಯೇ ಬಿಟ್ಟು ಬಂದದು ನೆನಪಿಗೆ ಬಂತು. ಆ ಗುರುತಿನ ಚೀಟಿ ಇಲ್ಲದಿದ್ದರೆ ಕಾಲೇಜಿನ ಒಳಗೆ ಸೇರಿಸುವುದಿಲ್ಲ. ಸೇರಿಸದಿದ್ದರೆ ಪರೀಕ್ಷೆ ಬರೆಯಲು ಬಿಡುವುದಿಲ್ಲ. ಅದಕ್ಕೆ ರತ್ನ ತಡವಾದರು ಪರವಾಗಿಲ್ಲ ಗುರುತಿನ ಚೀಟಿ ಮನೆಯಿಂದ ತಂದು ಬರುತ್ತೇನೆಂದು ಅವಸರದಿಂದ ಓಡಿಕೊಂಡು ಹೋದಳು.
ರತ್ನ ಮನೆಗೆ ತಲುಪಿ, ಮನೆಯ ಬಾಗಿಲ ಬೀಗ ತೆಗೆದು ಇನ್ನು ಆ ಗುರುತಿನ ಚೀಟಿ ಎಲ್ಲಿ ಇಟ್ಟಿದ್ದೀನಿ ಎಂದು ನೆನಪಿಸುತ್ತಾ ಹುಡುಕಲು ಪ್ರಾರಂಭಿಸಿದಳು. ಕೊನೆಗೂ ಗುರುತಿನ ಚೀಟಿ ಸಿಕ್ಕಿತೆಂದು ಅವಸರದಲ್ಲಿ ಮನೆಯಿಂದ ಹೊರಗಡೆ ಬರುವಾಗ ಆಕೆಯ ಕಾಲಿನ ಬಳಿ ಬಂದಿದ ಪುಟ್ಟ ಜೀವವನ್ನು ನೋಡದೇ ತುಳಿದಳು. ಮಿಂಕ್ಗೆ ರತ್ನಳ ಭಾರವನ್ನು ಸಹಿಸುವಷ್ಟು ಶಕ್ತಿಯನ್ನು ಹೊಂದಿರದ ಮಿಂಕ್ವು ಅಲ್ಲೇ ರಕ್ತ ವಾಂತಿ ಮಾಡಿ ಆ ಪುಟ್ಟ ಜೀವವು ತನ ಉಸಿರನ್ನು ನಿಲ್ಲಿಸಿತ್ತು. ಅದನ್ನು ಗಮನಿಸದೆ ರತ್ನಳು ಮನೆಯ ಹೊರಗಡೆ ಬಂದು ಚಪ್ಪಲಿ ಹಾಕುವಾಗ ಪಾದದಲ್ಲಿ ರಕ್ತ ನೋಡಿ ಎಲ್ಲಿಂದ ರಕ್ತ ಬಂತು. ನನಗೆ ಏನೂ ಕೂಡ ಗಾಯವಾಗಲಿಲ್ಲ. ಆದರೂ ಎಲ್ಲಿಂದ ಬಂತು ರಕ್ತ ಎಂದು ಯೋಚಿಸುತ್ತಾ ಮತ್ತೆ ಮನೆಯ ಬಾಗಿಲು ತೆರೆದಳು. ಆಗ ಮಿಂಕ್ವು ರಕ್ತದ ಹಾಸಿಗೆಯಲ್ಲಿ ಮಲಗಿತ್ತು. ಅದನ್ನು ಬಂದು ರತ್ನಳು ಎತ್ತಿ ನೀರು ಕುಡಿಸಿದಳು. ಆದರೆ ಏನೂ ಪ್ರಯೋಜನವಾಗಿಲ್ಲ. ಮಿಂಕ್ವಿನ ಪುಟ್ಟ ಜೀವ ಹೋಗಿಯಾಗಿತ್ತು. ರತ್ನಳು ತನ್ನಗೆ ಇದ್ದ ಪರೀಕ್ಷೆಯ ದೆಸೆಯಿಂದ ತನ್ನ ಮಿಂಕ್ವನ್ನು ಕಳೆದುಕೊಂಡೆನೆಂದು ಕೂಗಿ ಮಿಂಕ್ನ್ನು ಮಣ್ಣಿನಲ್ಲಿ ಹೂತು ಹಾಕಿದಳು.
ಪಲ್ಲವಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ