ಅಮ್ಮ
ನಾ ಕಂಡ ಮಹಿಳೆಯರಲ್ಲಿ ಒಬ್ಬಳು ನನ್ನಮ್ಮ
ಹಸಿವೆಂದಾಗ ತುತ್ತು ಕೊಟ್ಟವಳು
ಮುದ್ದಾಗಿ ಕಂಡಾಗ ಮುತ್ತು ಇಟ್ಟವಳು
ತಪ್ಪು ಮಾಡಿದಾಗ ಏಟು ಕೊಟ್ಟವಳು
ಗುಮ್ಮ ಎಂದು ಹೆದರಿದಾಗ
ಬೆಚ್ಚನೆಯ ಅಪ್ಪುಗೆಯ ದೈರ್ಯ ತುಂಬಿದವಳು
ಅಪ್ಪ ಗದರಿದಾಗ ನನ್ನ ಪರ ನಿಂತವಳು
ತನಗಿಂತ ತನ್ನವರಿಗೆ ಆಯಸ್ಸು ಕೊಡು
ಎಂದು ದೇವರಲ್ಲಿ ಬೇಡಿದವಳು
ಕನಸಿನಲ್ಲಿಯೂ ನನಗೆ ಒಳಿತಾಗಲಿ
ಎಂದು ಹರಸುವವಳು
ಕಷ್ಟ ಎನ್ನುವವರಿಗೆ ಸಹಾಯ ಮಾಡುವವಳು
ನಾನೇನು ಅಲ್ಲ ಎಂದು ಹೇಳುವ ನನ್ನಮ್ಮ
ನಮಗೆಲ್ಲ ಉಸಿರಾದವಳು ಜೀವವಾದವಳು
ನಾ ಕಂಡ ಮಹಿಳೆಯರಲ್ಲಿ ಒಬ್ಬಳು ನನ್ನಮ್ಮ
ತ್ರಿವೇಣಿ ವಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ