ಸೋಮವಾರ, ಜೂನ್ 15, 2026

ಸಂಚಿಕೆ - ೨೪

ಪುಸ್ತಕ ಪರಿಚಯ


ನಾಯಿ ನೆರಳು ಕಾದಂಬರಿಯ ಸಣ್ಣ ತುಣುಕುಗಳು

      'ನಾಯಿ ನೆರಳು' ಈ ಕಾದಂಬರಿಯನ್ನು ಖ್ಯಾತ ಸಾಹಿತಿಯಾದ 'ಎಸ್.ಎಲ್. ಭೈರಪ್ಪ'ನವರು ಬರೆದಿದ್ದಾರೆ. ಇದು ಮೂರು ತಲೆಮಾರು ಹಾಗು ಪೂರ್ವಜನ್ಮದ ಕಥೆಯನ್ನು ಹೊಂದಿರುವ ಕಾದಂಬರಿ ಈ ನಾಯಿ ನೆರಳಾಗಿದೆ. ಈ ಒಂದು ಕಾದಂಬರಿಯು ಚಲನ ಚಿತ್ರವಾಗಿಯೂ 'ಗಿರೀಶ್ ಕಾಸರವಳ್ಳಿ' ಅವರು ನಿರ್ದೇಶಿಸಿದ್ದಾರೆ.

      ಈ ಕಾದಂಬರಿಯನ್ನು ನನಗೆ ಓದಿದಾಗ ಇದು ಒಂದು ಪೂರ್ವಜನ್ಮದ ಕಥೆಯಾಗಿರುವುದನ್ನು ಕಂಡುಬರುತ್ತದೆ. ಈ ಪೂರ್ವಜನ್ಮ ಎನ್ನುವಂಥದ್ದು ಇಂದಿಗೂ ಇದೆಯೆ. ಇದ್ದರೆ ಅದು ಎಷ್ಟರ ಮಟ್ಟಿಗೆ ಸತ್ಯವಾಗುವುದು. ಹಿಂದಿನ ಎಲ್ಲಾ ಘಟನೆಗಳನ್ನು ಎಡಬಿಡದೆ ಹೇಳಲು ಸಾಧ್ಯವಾಗುವುದೇ? ಎನ್ನುವಂಥಹ ಪ್ರಶ್ನೆಗಳು ಈ ಕಾದಂಬರಿಯನ್ನು ಓದಿದಾಗ ತಲೆಯಲ್ಲಿ ಬರುವುದು.

      ಈ ಕಾದಂಬರಿಯಲ್ಲಿ ಬರುವಂಥಹ ಕಥಾನಾಯಕನ ಹೆಸರು 'ಕ್ಷೇತ್ರಪಾಲ'. ಚಿಕ್ಕವನಿಂದಲೇ ಇವನು ತನಗೇ ಮದುವೆ ಆಗಿದೆ. ಒಂದು ಮಗುವು ಇದೆ ಎಂದು ಹೇಳುತ್ತಿದ್ದ. ಹೆಂಡತಿಯ ಹೆಸರೇನು? ಎಂದು ಕೇಳಿದರೆ 'ವೆಂಕಮ್ಮ' ಎನ್ನುತ್ತಿದ್ದ ಹಾಗೆಯೇ ಹೆಂಡತಿಯೂ ಹೇಗಿದ್ದಾಳೆ? ಎಂದು ಕೇಳಿದರೆ ಒಂದು ಕ್ಷಣವೂ ಯೋಚಿಸದೆ. ಅವರ ಚಹರೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ. ಈತನಿಗೆ ಯಾರೊಂದಿಗೂ ಸಹ ಹೆಚ್ಚಾಗಿ ಮಾತನಾಡದಿದ್ದರೂ ಸಹ ವಿಧ್ಯಭ್ಯಾಸದಲ್ಲಿ ಚಾಣಾಕ್ಷನಾಗಿದ್ದ. ಇದು ಯಾವುದೋ ದೆವ್ವ ಭೂತದ ಕಾಟವಿರಬೇಕು ಎಂದು ತಂದೆ 'ತಿರುಮಲ ಜೋಯಿಸರು' ಎಲ್ಲಾ ರೀತಿಯಲ್ಲಿನ ಪೂಜೆ ಹವನಗಳನ್ನು ಮಾಡಿಸಿದರು. ಆದರೆ ಇದ್ಯಾವುದು ಕೂಡ ಫಲಕಾರಿ ಆಗಲಿಲ್ಲ.

      ಮನೆಯಲ್ಲಿ ನಾಯಿಗಳು ಇಲ್ಲದಿದ್ದರೂ ಕ್ಷೇತ್ರಪಾಲ ಬೀದಿಯಲ್ಲಿ ಇರುವ ಒಂದು ಹೆಣ್ಣು ನಾಯಿ ತಂದು ಸಾಕಿದ. ಯಾರು ಎಷ್ಟೇ ಹೇಳಿದರೂ ಕೂಡ ಅದರ ಒಂದು ಸಹವಾಸವನ್ನು ಕ್ಷೇತ್ರಪಾಲನು ಬಿಡುತ್ತಿರಲಿಲ್ಲ. ತನಗೆ ಕೊಡುತ್ತಿರುವ ಊಟದಲ್ಲಿ ಅರ್ಧವನ್ನು ಆ ನಾಯಿಗೆ ನೀಡುತ್ತಿದ್ದ, ಕೊನೆಗೆ ಯಾವುದೋ ಒಂದು ಊರಿನ ಜಾಗಕ್ಕೆ ಹೋಗಿ ಆ ನಾಯಿಯನ್ನು ಅಪ್ಪಿಕೊಂಡು ಮಲಗುತ್ತಿದ್ದ,

      ಕ್ಷೇತ್ರಲಪಾಲನಿಗೆ ೧೬ ನೇ ವಯಸ್ಸಾದಾಗ ದೂರದ ಊರಿನಿಂದ 'ನಾಗರಾಜ ಜೋಯ್ಸ್' ಎಂಬ ಒಬ್ಬ ಬ್ರಾಹ್ಮಣರು ಅವನನ್ನು ಹುಡುಕಿಕೊಂಡು ಬಂದರು. ಅವರು ತಮ್ಮ ಪರಿಚಯವಾದಾಗ ಅಪ್ಪ-ಮಗ ಎಂದು ಒಪ್ಪಿಕೊಂಡರು. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ. ಊರಿನ ಸ್ಥಳ ಹೆಂಡತಿ. ಅಪ್ಪ, ಅಮ್ಮ ಅವರ ಜೀವನದಲ್ಲಿ ಆಗುಹೋಗಿದ ಘಟನೆ ಎಲ್ಲವನ್ನು ಅಚ್ಚುಕಟ್ಟಾಗಿ ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಿದ್ದ. ಸುಮಾರು ೧೮ ವರ್ಷಗಳ ಹಿಂದೆ ತೀರಿಹೋಗಿದ್ದ ತನ್ನ ಮಗ 'ವಿಶ್ವೇಶ್ವರಯ್ಯನೇ' ಈ ಕ್ಷೇತ್ರಪಾಲ ಎಂಬ ಹೆಸರಿನಲ್ಲಿ ಪುನಃ ಹುಟ್ಟಿದ್ದಾನೆ. ಎಂಬ ನಿರ್ದಾರಕ್ಕೆ ಜೋಯಿಸರು ಬಂದರು. ಅಲ್ಲೂ ಸಹ ಅವರು ಕೇಳಿರುವರಂಥ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ವಾಸಿಸಿ, ವಿಶ್ವೇಶ್ವರಯ್ಯ ತನ್ನ ಹೆಂಡತಿ ವೆಂಕಮ್ಮನ ಜೊತೆಗೆ ಬಾಳ ತೊಡಗಿದನು.

ಪೃಥ್ವಿ ನಾಯ್ಕ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...