ಗುರುವಾರ, ಜೂನ್ 18, 2026

೩೫ನೇ ಸಂಪುಟದ ಆಶಯ ನುಡಿ

Pro. Somanna Hongalli


ಪ್ರೊ. ಸೋಮಣ್ಣ ಹೊಂಗಳ್ಳಿ

ಡೀನರು, ಕಲಾ ನಿಕಾಯ, 

ಪ್ರಾಧ್ಯಾಪಕರು, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, 

ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ


ಆಶಯ ನುಡಿ


      ಪ್ರತಿ ವರ್ಷದಂತೆ ಈ ವರ್ಷವು ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಬಿತ್ತಿ ಬರಹಗಳನ್ನು ಕೊಟ್ಟು ತಮ್ಮ ಅನಿಸಿಕೆಗಳನ್ನು ಬರೆಯುವಂತೆ ಸಂಪಾದಕರು ವಿನಂತಿಸಿಕೊಂಡರು. ಅವರ ಉತ್ಸಾಹ, ಪ್ರೀತಿಗೆ ನಾನು ಬೆಲೆ ಕಟ್ಟಲಾರೆ.

      ದೊಡ್ಡಗಾತ್ರದ 'ಬಿತ್ತಿ ಬರಹ' ಪುಸ್ತಕವನ್ನು ಓದುತ್ತಾ ಹೋದಂತೆ ನನಗೆ ಅಚ್ಚರ್ಯವಾಯಿತು. ಒಂದೊಂದು ಸಂಚಿಕೆಯಲ್ಲಿಯೂ ಭಿನ್ನ ಭಿನ್ನವಾದ ಬರಹಗಳಿರುವುದು ವೈಶಿಷ್ಟ್ಯವೆನಿಸಿತು. ನಮ್ಮ ವಿದ್ಯಾರ್ಥಿಗಳ ಸೃಜನಶೀಲ ಶಕ್ತಿ ವೃದ್ಧಿಸಿರುವುದು ಗೋಚರಿಸಿತು. ಕತೆ, ಲೇಖನ, ಪುಸ್ತಕ, ವಿಮರ್ಶೆ, ಪ್ರಬಂಧಗಳು ಗಮನ ಸೆಳೆದವು. ನಮ್ಮ ವಿಭಾಗದ ವಿದ್ಯಾರ್ಥಿಗಳಷ್ಟೇ ಅಲ್ಲದೇ ಕ್ಯಾಂಪಸ್ಸಿನ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳು 'ಬಿತ್ತಿ ಬರಹ'ಕ್ಕೆ ಕಲೆ, ಲೇಖನ, ಕತೆ ನೀಡುವ ಮೂಲಕ ವೈವಿದ್ಯತೆಯನ್ನು ಹೆಚ್ಚಿಸಿದ್ದಾರೆ. ಮುಖ್ಯವಾಗಿ ಹದಿಹರೆಯದ ಮನಸ್ಸು, ತುಡಿಯುವ ಪರಿ ಅನನ್ಯವಾಗಿದೆ. ಸಮಾನ ಮತಾ ಪರಿವೀಕ್ಷಿಸುವ ಕ್ರಮವನ್ನು ಇಲ್ಲಿನ ಹಲವು ಲೇಖನಗಳಲ್ಲಿ ಕಾಣಿಸಬಹುದಾಗಿದೆ. ಎಳೆಯ ಮನಸ್ಸು, ಪ್ರೀತಿ, ಪ್ರೇಮಕ್ಕೆ ತುಡಿಯುವ ಬಗೆಯು ಗೋಚರಿಸುತ್ತದೆ. ಬದುಕಿನ ಅಮೂಲ್ಯ ಕ್ಷಣಗಳನ್ನು ಕಾವ್ಯವಾಗಿಸಿರುವ ಕವಿಮನಸ್ಸು ಹಲವು ಕವಿತೆಗಳಲ್ಲಿ ಆರಳಿದೆ. ಎಲ್ಲಾ ಸೃಜನಶೀಲ ಮನಸ್ಸುಗಳಿಗೆ ಹೃದಯಾರಿಸರಾಳದ ಅಭಿನಂದನೆಗಳು.

ತಮ್ಮ ವಿಶ್ವಾಸಿ          
ಪ್ರೊ. ಸೋಮಣ್ಣ ಹೊಂಗಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...