ಅಪ್ಪ
ಅಪ್ಪ ಎನ್ನುವುದು ಕೇವಲ ಶಬ್ದವಲ್ಲ ಅದೊಂದು ಭಾವನೆ. ಒಂದು ಕುಟುಂಬದ ಆರ್ಥಿಕ, ಸಾಮಾಜಿಕ ಮತ್ತು ಮನೆ ಭದ್ರತೆಯ ಅಡಿಪಾಯವೇ ಅಪ್ಪ. ಅಮ್ಮ ಪ್ರೀತಿಯ ಮೃದುತ್ವವಾದರೆ ಅಪ್ಪ ಆ ಪ್ರೀತಿಯನ್ನು ರಕ್ಷಿಸುವ ಕವಚ. ನಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲೂ ನಮ್ಮನ್ನು ಬೀಳದಂತೆ ಕಾಯುವ ಅದೃಶ್ಯ ಹಸ್ತವೇ ಅಪ್ಪ, ಅಪ್ಪ ಪ್ರೀತಿಯ ಕಾಯುವ ಭದ್ರಕೋಟೆ. ಅಪ್ಪ ಎಂಬುದು ಕೇವಲ ಎರಡು ಅಕ್ಷರಗಳ ಪದವಲ್ಲ ಅದೊಂದು ಅಚಲವಾದ ಭರವಸೆ.
ವನ್ಯಶ್ರೀ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ