ಸ್ತ್ರೀವಾದ
ಈ ವಿಷಯದ ಕುರಿತು ನಮ್ಮ ವಿಭಾಗದಲ್ಲಿ ಶುಕ್ರವಾರದಂದು 'ಪರ' ಮತ್ತು 'ವಿರೋಧ' ಎಂಬ ಚರ್ಚೆ ನಡೆದಿತ್ತು. ಅದರಲ್ಲಿ ನಾನು ಸ್ತ್ರೀವಾದದ ಪರವಾಗಿ ಭಾಗವಹಿಸಿದ್ದೆ. ಚರ್ಚೆ ಬಹಳ ಸೊಗಸಾಗಿ ಯಾವುದೇ ವೈರುತ್ವ ಭಾವಗಳಿಲ್ಲದಂತೆ ನಡೆಯಿತು. ಎರಡು ತಂಡಗಳಿದ್ದು ಪರ ಮತ್ತು ವಿರೋಧ ವಿಚಾರಗಳು ಪರಸ್ಪರ ರಸಮಯವಾಗಿ ಚರ್ಚೆಗೊಳಗಾದವು. ಅಲ್ಲಿ ನಾನು ಗಮನಿಸಿ ತಿಳಿಸಬೇಕಾದ ಕೆಲವು ಅಭಿಪ್ರಾಯಗಳು ಈ ಬರವಣಿಗೆಯಾಗಿದೆ.
ಮೊದಲು 'ಸ್ತ್ರೀವಾದ'ದಲ್ಲಿ ಪರ ಮತ್ತು ವಿರೋಧ ಎಂದು ಪ್ರಾರಂಭವಾಯಿತು ಚರ್ಚೆ. 'ಸ್ತ್ರೀವಾದ' ಎಂದರೆ ನಮಗೆ ತಿಳಿದಂತೆ 'ಸ್ತ್ರೀ' ಹಿಂದಿನಿಂದಲೂ ಇಲ್ಲಿಯವರೆಗೂ ಏನು ಅನುಭವಿಸುತ್ತಿದ್ದಾಳೆ. ಯಾವುದರಿಂದ ವಂಚಿತಳಾಗಿದ್ದಾಳೆ. ಶಿಕ್ಷಣ. ಸಮಾನತೆ. ಲಿಂಗ ತಾರತಮ್ಯ ಮತ್ತು ಅವಳ ಕೆಲವು ಪ್ರಮುಖ ಹಕ್ಕುಗಳು ಇತ್ಯಾದಿ. ಇವುಗಳೆಲ್ಲವನ್ನೂ ಅವಳಿಗೆ ದಕ್ಕುವಂತೆ ಮಾಡುವುದಕ್ಕಾಗಿ ಇವುಗಳನ್ನು ಎತ್ತಿ ಹಿಡಿದು ಪುರುಷ ಮತ್ತು ಸ್ತ್ರೀಯರು ನಡೆಸಿದ ಒಂದು ಚಳುವಳಿಯೇ 'ಸ್ತ್ರೀವಾದ' ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದ್ದು ಇದು ಲಿಂಗಸೂಚಿಯಾದದ್ದಲ್ಲಾ. ಬದಲಾಗಿ ಇದೊಂದು ಪುರುಷ ಮತ್ತು ಸ್ತ್ರೀ ಎಂಬ ಇಬ್ಬರೂ ಸೇರಿ ಹೋರಾಟ ನಡೆಸಿ ಬೆಳೆಸಿದ್ದು ನಮ್ಮ ಚರ್ಚೆ ಪ್ರಾರಂಭಗೊಂಡಿತು ಮೊದಲಿಗೆ ಪರ ಮತ್ತು ವಿರೋಧದಲ್ಲಿ ಇಬ್ಬರು ವಿಷಯ ಎತ್ತಿ ಕೊಡಬೇಕಿತ್ತು. ಹೀಗೆ ವಿರೋಧದಲ್ಲಿ ನಮ್ಮ ತರಗತಿಯ ವಿದ್ಯಾರ್ಥಿ ವಿಷಯ ಎತ್ತಿಕೊಟ್ಟ 'ಸ್ತ್ರೀವಾದ'ದ ಕುರಿತು ಮಾತನಾಡಿ "ಸ್ತ್ರೀ ದುರ್ಬಲಳು ಯಾರಾದರೂ ಪುರುಷ ಅವಳ ಮೇಲೆ ದಾಳಿ ಮಾಡಿದರೆ ಅವಳಿಂದ ಎದುರಿಸಲು ಸಾಧ್ಯವಿಲ್ಲ" ಎಂದು 'ಸ್ತ್ರೀವಾದ'ದವನ್ನು ಪುರುಷ ಮತ್ತು ಸ್ತ್ರೀಯರ ಶಕ್ತಿಗಳ ಪ್ರಾವಲ್ಯದ ವಿಷಯವನ್ನಾಗಿ 'ಮುಖ್ಯ ವಿಷಯದ ಅಡಿಪಾಯವನ್ನೇ ತಪ್ಪಿಸಿದರು. ಹೀಗೆ ಚರ್ಚೆ ನಡೆದು ಮತ್ತೊಬ್ಬರು 'ಸ್ತ್ರೀವಾದ' ಎಂಬ ಕಲ್ಪನೆಯೇ ನನ್ನ ಪ್ರಕಾರ ತಪ್ಪು ಎಂದರು. ಇನ್ನೊಬ್ಬರು 'ಸ್ತ್ರೀ'ಯ 'ಮುಟ್ಟಿನ' ವಿಷಯದಲ್ಲಿ ಸರಕಾರ ಅವರಿಗೆ 'ಒಂದು ದಿನ'ದ ರಜೆ ನೀಡಿದ್ದು ಅದು 'ಸ್ತ್ರೀ'ಯ ದೌರ್ಬಲ್ಯಕ್ಕಾಗಿ ಎಂದರು ಹೀಗೆ ಚರ್ಚೆ ನಡೆಯಿತು.
ನಾನು ಗಮನಿಸಿದ ಈ ಮೂರು ವಿಷಯ ಮತ್ತು ಎಲ್ಲರೂ ಹೇಳಿದ ಕೆಲವು ಅತ್ತೆ, ಮಾವ, ಸೊಸೆ, ಗಂಡ ಎಂಬ ಉದಾಹರಣೆಗಳ ವಿಚಾರಗಳಿಗೆ ನನ್ನ ವಿಚಾರಗಳು ಹೀಗಿವೆ. ಮೊದಲನೆಯದಾಗಿ "ಪುರುಷ ಮತ್ತು ಸ್ತ್ರೀಯ ನಡುವೆ ಗೆಲ್ಲುವುದು ಪುರುಷ" ಎಂಬುದು ತಪ್ಪು ಕಲ್ಪನೆ ಅದಕ್ಕೆ ಸಾಕ್ಷೀಯಾಗಿ ಅದೆಷ್ಟೋ ವಿಚಾರಗಳನ್ನು ನಾವು ಇಂದಿಗೂ ಕಾಣುತ್ತಿದ್ದೇವೆ (ರಾಣಿ ಅಬ್ಬಕ್ಕ, ರಾಣಿ ಚನ್ನ ಭೈರಾದೇವಿ, ಕಿತ್ತುರು ಚನ್ನಮ್ಮ) ಮತ್ತೆ ಸ್ತ್ರೀವಾದ ಎಂಬ ಕಲ್ಪನೆ ತಪ್ಪಲ್ಲ ಅದು ತಪ್ಪಾಗಿದ್ದರೆ ಸ್ತ್ರೀವಾದ ಎಂದು ಪ್ರಾರಂಭವಾಗಿ ಇಂದೂ ಅದು ಒಂದು ಸಾಹಿತ್ಯವಾಗಿ ಬೆಳೆದು ನಿಂತಿದ್ದನ್ನು ನಾವು ಕಾಣುತ್ತೇವೆ(ಎಚ್.ಎಸ್. ಶ್ರೀಮತಿ, ಜಿ.ಎಸ್. ಶಿವರುದ್ರಪ್ಪ, ಅಕ್ಕಮಹಾದೇವಿ). ಅಷ್ಟಲ್ಲದೇ ಸ್ತ್ರೀವಾದ ಎಂಬ ಕಲ್ಪನೆಯೇ ತಪ್ಪು ಎಂದು ಹೇಳಿದವರೇ ಅದು ಒಂದು ವಿಷಯ ಎಂದು ಚರ್ಚೆಗೆ ಇಳಿದಿದ್ದರು. ಅದು ತಪ್ಪು ಕಲ್ಪನೆ ಎಂದಾದರೆ ಚರ್ಚೆಗೆ ಬದಲು ಅವರು 'ಮನೆಗೆ' ಹೋಗಬೇಕಿತ್ತು. ಇನ್ನೂ ಸ್ತ್ರೀಯ ಮುಟ್ಟಿನ ರಜೆ ಸರಕಾರ ಅವಳು ದುರ್ಬಲಳು ಎಂದು ನೀಡಿದ್ದಲ್ಲಾ ಬದಲಾಗಿ ಮಾನವೀಯತೆಯಿಂದ ಮತ್ತು ಅದು ಅವಳ ಹಕ್ಕು ಎಂದು ನೀಡಿದ್ದು ಹಾಗೇ ಅವಳು ದುರ್ಬಲಳು ಎಂದು ನೀಡಿದ್ದರೆ ಸರಕಾರ ಅವಳನ್ನೂ ಯಾವ ಕೆಲಸಗಳಿಗೂ ಕರೆಯುತ್ತಿರಲಿಲ್ಲ. ಅಷ್ಟೇ ಯಾಕೆ ಅದೇ ಸ್ತ್ರೀಯೇ ಇಂದು ಪುರುಷ ಸಮಾನವಾಗಿ ಅದೇ ಮುಟ್ಟಿನ ಸಮಯದಲ್ಲೂ ದೇಶದ ಗಡಿ ಕಾಯುತ್ತಿಲ್ಲವೇ? ಇತರೆ ಕ್ಷೇತ್ರಗಳಲ್ಲೂ ಇಲ್ಲವೆ? ಎಲ್ಲ ಕಡೆಗಳಲ್ಲೂ ಇದ್ದಾಳೆ. ಯಾವುದೇ ಪರಿಸ್ಥಿತಿಯಲ್ಲಿದ್ದರೂ ಸ್ತ್ರೀ ಎಂದು ಸ್ತ್ರೀಯೇ ಅವಳಂತೆ ಎಂದಿಗೂ ಬೇರೆ ಯಾರಿಗೂ ಬದುಕಲೂ ಸಾಧ್ಯವಿಲ್ಲ,
ಸ್ತ್ರೀವಾದ ಎಂಬುದು ನಿಮ್ಮ ವಿಚಾರಗಳಂತೆ ಅಲ್ಲ. ಬದಲಾಗಿ ಅದೊಂದು ಮಾನವೀಯತೆ ದೃಷ್ಟಿಯಿಂದ ಪುರುಷ ಮತ್ತು ಸ್ತ್ರೀಯರು ಇಬ್ಬರಿಂದಲೂ ರಚನೆಯಾದದ್ದು ಇಲ್ಲಿ ಯಾವ ಲಿಂಗಸೂಚಿಗಳು ಬರುವುದಿಲ್ಲ. ಯಾವ ಹೆಚ್ಚು ಕಡಿಮೆ ಎಂಬ ವಿಚಾರಗಳು ಬರುವುದಿಲ್ಲ. ಮನುಷ್ಯರು ಎಂದು ತಿಳಿದುಕೊಂಡವರಿಗೆಲ್ಲರಿಗೂ ಇದು ಒಂದು ನ್ಯಾಯಯುತವಾದ ಪರಿಕಲ್ಪನೆ ಮತ್ತು ಎಲ್ಲರೂ ಒಪ್ಪುವ ಒಂದು ಹೋರಾಟದ ಫಲವಾಗಿದೆ. ಈ ಸ್ತ್ರೀವಾದ ಹಾಗೇ ನಮ್ಮ ವಿಭಾಗದಲ್ಲಿ ಈ ಚರ್ಚೆ ಬಹಳ ಚೆನ್ನಾಗಿ ನಡೆಯಿತು. ಇನ್ನಷ್ಟು ಇಂತಹ ವಿಷಯಗಳ ಚರ್ಚೆಗಳು ನಮ್ಮ ವಿಭಾಗದಲ್ಲಿ ಹೆಚ್ಚು ಹೆಚ್ಚು ನಡೆಯುತ್ತಿರಲಿ.
ಸುಜಾತಾ ಗಿ. ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ