ಸೋಮವಾರ, ಜೂನ್ 1, 2026

ಸಂಚಿಕೆ - ೨೨

ಹಳೆಯ ಪುಸ್ತಕ

ಹಿರಿದಾದ ಗ್ರಂಥಾಲಯದಲ್ಲಿ 

ಇರುವುದೊಂದು ಹಳೆಯ ಪುಸ್ತಕ 

ಅದನು ಮುಟ್ಟಿ ನೋಡುವವರಿಲ್ಲ 

ಹತ್ತಿರ ಸುಳಿಯುವವರೂ ಇಲ್ಲ 

ಕರೆಯುತಿದೆಯದರ ಸಾರ ತಿಳಿಸಲು 

ಆದರೆ ಹೋಗಿ ನೋಡುವವರೆ ಇಲ್ಲ


ಗ್ರಂಥಾಲಯದ ಮೂಲೆಯಲೊಂದು ಮೇಜು 

ಅದು ತಲೆಮಾರುಗಳನ್ನು ಕಂಡಿದೆ 

ಅದರ ಮೇಲೊಂದು ಪುಸ್ತಕ 

ಹಲವರ ಜೀವನದ ಅನುಭವ ಅದಕಿದೆ 

ಆದರೆ ಹೇಳದೆ ಮೌನವಾಗಿ ಏಕಾಂಗಿಯಾಗಿದೆ


ಮೇಜಿನ ಭಾಗ ಅಲ್ಲಲ್ಲಿ ಚದುರಿ ಸುಕ್ಕು ಸುಕ್ಕಾಗಿದೆ 

ಪುಸ್ತಕದ ಬಣ್ಣ ಹಳದಿಗೆ ತಿರುಗಿದೆ 

ಅದರ ಮೇಲಿನ ದೂಳೆ ಹೇಳುತಿದೆ 

ಅದು ತೆರೆದ ನೋವಿನ ಕಾಲವನ್ನು 

ಕೆಲವೆಡೆ ಹುಳುತಿಂದ ಆಳ ರಂಧ್ರಗಳಿವೆ 

ಕೆಲವು ಪುಟಗಳು ಸವೆದು ಬೇರಾಗಿವೆ 

ಹೊಂದಿಕೆಯ ದಾರವರಿದು ಹಿಂದುಮುಂದಾಗಿವೆ 

ಆದರೂ ಅದರ ಅನುಭವದ ಸಾರ 

ಅದರೊಳಗೆ ಅಲ್ಲಲ್ಲಿ ನಿಚ್ಚಳವಾಗಿದೆ


ನಾತೆಗೆದರೂ ಮೇಲ್ನೋಟವಾಯಿಸಿದೆ ವಿನಃ 

ಆಳಾವಾಗಿ ಓದಲಾಗಲಿಲ್ಲವದನು 

ಬಾಲ್ಯದ ತುಂಟತನವಿದೆಯದರೊಳು 

ಪ್ರೌಢತೆಯ ಗೆಳೆತನದ ಸಿಹಿ ಇದೆ 

ಯೌವನದ ಪ್ರೀತಿ ಪ್ರೇಮದ ಕಥೆಯಿದೆ 

ವಯಸ್ಕರ ಸುಖದುಃಖ್ಯದ ವ್ಯತೆ ಇದೆ 

ವೀರ ರೌದ್ರ ಹಾಸ್ಯ ಶೃಂಗಾರಗಳೆಂಬ ನವರಸಗಳಿವೆ


ಆದರೂ ಅದನು ಯಾರೂ ಮುಟ್ಟರು ಏಕೆ 

ಅದರ ಬಾಹ್ಯ ಆಕೃತಿಯ ಕಂಡೊ ಇಲ್ಲ 

ಹಳತರಲ್ಲಿ ಜೀವನದ ಸೋಗಡಿಲ್ಲವೆಂದೊ 

ನೀವೂ ಕಂಡಿರುವಿರಾ ಇಂಥ ಪುಸ್ತಕವನ್ನಾ?


ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...