ಸೋಮವಾರ, ಜೂನ್ 1, 2026

ಸಂಚಿಕೆ - ೨೨

ಬಾನ ದಾರಿಯಲ್ಲಿ

      ಕಗ್ಗತ್ತಲು ಆವರಿಸಿದ ಭೂಮಂಡಲ ಚಂದಿರನ ಬೆಳಕಲ್ಲಿ ತನ್ನ ಪ್ರತಿಬಿಂಬವನ್ನು ಜೊತೆ ಆಗಿಸಿಕೊಂಡು ಹುಡುಕಾಟ ದಾರಿಯಲ್ಲಿ ಮುಂದುವರಿದ. ಮೆಲುವಾದ ತಂಗಾಳಿಯ ಸವಿಯುತ್ತ, ವಜ್ರದಂತೆ ಹೂಳೆಯುವ ಆಕಾಶ ಕಾಯಗಳನ್ನು ಕಣ್ಣುಂಬಿಸಿಕೊಳ್ಳುತ್ತಾ ಈ ಸೃಷ್ಟಿಯ ಕಲಾ ರೂಪವನ್ನು ಕುತೂಹಲದಿಂದ ನೋಡುತ್ತಾ ತನ್ನೊಳಗೆ ನಾನಾ ಬಗೆಯ ಗೊಂದಲಗಳು ಪ್ರಶ್ನೆಗಳು ಉತ್ತರದ ರೂಪದಲ್ಲಿ ಹಾದು ಹೋಗುತ್ತಿದ್ದವು. ಅಜ್ಜಿ ಬೆಳದಿಂಗಳ ತೋರಿಸಿ ಹೇಳಿದ ಕತೆಗಳು, ಗುಮ್ಮ ಬಂತು ಗುಮ್ಮ ಎಂದು ಹೆದರಿಸಿದ ಗಳಿಗೆಗಳು, ಚಂದಮಾಮನನ್ನು ತೋರಿಸಿ ಕೊಟ್ಟ ತುತ್ತು. ಕರೆಂಟ್ ಇಲ್ಲದಿದ್ದಾಗ ಮನೆಯ ಅಂಗಳದಲ್ಲಿ ಕೂತು ಮಾಡಿದ ಊಟ, ಪಟ್ಟಂಗಗಳೇಷ್ಟೋ ಇವೆಲ್ಲವೂ ಇಂದು ಅಂಗಳದಿಂದ ದೂರ ಸರಿದಿದೇ.

ಪೂಜಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...