ಮೊದಲ ಮಳೆಯ ಮೊದಲ ಕವಿತೆ
ಮೈಗೆಲ್ಲಾ ತಂಗಾಳಿಯ ಚುಂಬನ
ಬಾನಿನಂಚಿನಲ್ಲಿ ಕವಿದ ಮೋಡಗಳ ತೋರಣ
ಮಳೆಯ ಹನಿಯ ಸ್ಪರ್ಶದಿ
ಜೀವನವೇ ಪಾವನ
ಬಿಸಿಲಿನ ಬೇಗೆಯಲ್ಲಿ
ಒಣಗಿ ಹೋಗಿದ್ದ ಧರೆಗೆ
ಇಂದು ವರುಣನ ಹೊಸತನ
ಮುಗಿಲ ನೋಡುತ್ತಿದೆ ಕಾನನ
ರಭಸದಿ ಬೀಸುವ ಗಾಳಿಗೆ
ಮರಗಿಡಗಳ ಒಲವಿನ ನರ್ತನ
ಇಳೆಗೆ ಬಿದ್ದ ಹನಿಗೆ
ಇಂದೊಂದು ಹೊಸತನದ ನರ್ತನ
ಮೌನವಾಗಿದ್ದ ಈ ಹೊತ್ತಿಗೆ
ಗುಡುಗು ಸಿಡಿಲಿನ ಆಹ್ವಾನ
ಮನವು ಬೆದರಿದಾಗ
ಎನ್ನ ಕವಿತೆಗೆ ತಲ್ಲಣ
ಹರಿವ ನೀರಿಗೆ ನಾ ಎಲ್ಲಿ ಸೇರುವೆ
ಎಂಬ ಆತುರದ ಈ ಕ್ಷಣ
ಮೈ ತಣಿಸುವ ಈ ಹೊತ್ತಿನಲ್ಲಿ
ಬೆರತ ಆನಂದದ ದಿನ
ದಿವ್ಯಶ್ರೀ ಎ., ಎಂ.ಎ ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ