ಸೋಮವಾರ, ಜೂನ್ 1, 2026

ಸಂಚಿಕೆ - ೨೨

ಕೆಲಸದ ಬದಲು ಕಲಿಕೆ (ಭಾಗ – ೨)


ದೃಶ್ಯ - ೩

(ಗೌಡರ ಮನೆಯಲ್ಲಿ ಗೀರಿಶ ಕೆಲಸ ಮಾಡುತ್ತಿರುವನು. ಗೌಡರು ಮತ್ತು ಕೆಂಚಪ್ಪ ಕೂಲಿ ಹಾಳುಗಳು ಅಲ್ಲೆ ಇರುವರು. ಗೀರಿಷನು ಹೋತ್ತಿರುವ ಪುಟ್ಟಿಯು ಭಾರವಾಗಿ ಬೀಳುವನು.)


ಗೌಡ :- ಲೇ... ಗೀರಿ ನೀನು ನಿಮ್ಮ ಅಪ್ಪನ ತರ ತೂರಾಡುತಿಯಲ್ಲ. ನಿಮ್ಮ ಅಪ್ಪ ಕುಡಿದು ತೂರಾಡುತ್ತಾನ. ನೀನು ಕೆಲಸ ಮಾಡಕಾಗದೆ ತೂರಾಡುತ್ತಿಯ.

ಗಿರೀಶ :- ಕ್ಷಮಿಸಿ ಗೌಡರೆ ಪುಟ್ಟಿ ತುಂಬ ಭಾರ ಇತ್ತು.

ಗೌಡ :- ಭಾರ ಇದೆಯೆನಪ್ಪ, ನಿಮ್ಮ ಅಪ್ಪ ಮಾಡಿರೋ ಸಾಲ ಕೂಡ ತುಂಬಾ ಭಾರ ಇದೆಕನಪ್ಪ. ಹೊತ್ತುಕೊಳ್ಳೋಕೆ ಹಾಗುತ್ತಿಲ್ಲ. ತೀರಿಸಿಬೀಡಿ ಮತ್ತೆ, ಭಾರ ಅಂತೆ ಭಾರ. ನಡಿನಡಿ ಬೇಗ ಬೇಗ ಕೆಲಸ ಮಾಡು.

ಕೆಂಚಪ್ಪ :- ಇರಲಿ ಬೀಡಿ ಗೌಡರೆ ಹುಡುಗ ಇನ್ನೂ ಚಿಕ್ಕವನು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹೋಗಲಿ.

ಗೌಡ :- ಏನು ಕೆಂಚಪ್ಪ ನೀವು ಹೀಗೆ ಹೇಳುತ್ತಿರ. ಮಕ್ಕಳು ಅಂದ್ರೆ ನನಗೆ ಏನು ಕನಿಕರ ಇಲ್ವೆ. ಅದಕ್ಕಾಗಿ ಅವನನ್ನು ಒಂಟಿಯಾಗಿ ತೋಟಕ್ಕೆ ಕಲಿಸದೆ. ಮನೆ ಹತ್ತಿರ ಕೆಲಸ ಮಾಡಿಸುತ್ತಿದ್ದೀನಿ.

ಕೆಂಚಪ್ಪ :- ಗೌಡರೆ ನಿಮ್ಮ ಜಾಣೆ ನಮಗೆ ಗೋತ್ತಿಲ್ಲವೆ. ತೋಟಕ್ಕೆ ಕಳುಹಿಸಿದರೆ ಎಲ್ಲಿ ಓಡಿ ಹೋಗಿಬೀಡುತ್ತಾನೆ. ಎಂದು ಮನೆ ಹತ್ತಿರನೇ ದುಡಿಸಿಕೊಲ್ಲುತ್ತಿದ್ದಿರಿ. ಬಾರಿ ಚಾಲಾಕಿನೇ ನೀವು

ಗೌಡ :- ಸುಮ್ಮನಿರು ಕೆಂಚಪ್ಪ ನಮ್ಮ ಬಗ್ಗೆ ಗೊತ್ತಿದ್ದು ಗೋತ್ತಿದು ಮಾತಾನಾಡುತ್ತಿರಿ.

ಕೆಂಚಪ್ಪ :- ಹಾಗಲ್ಲ ಗೌಡರೆ ನಾವು ನಿಮ್ಮ ಒಳ್ಳೆಯದಕ್ಕೆ ಹೇಳುತಿದ್ದಿನಿ. ಅವನಿಗೆ ಸ್ವಲ್ಪ ಕಡಿಮೆ ಕೆಲಸ ಕೊಟ್ಟು ಬಳಿಯೋಕೆ ಬೀಡಿ, ಕುರಿ ಬಳತಷ್ಟು ಕಟುಕನಿಗೆ ಲಾಭ.

ಗೌಡ :- ಹಾಗಂತಿಯ ನೀನು ಹೇಳೋದು ಸರಿ ಇದೆ. ಸರಿ ಸರಿ.. ಇನ್ನೂ ಮೇಲೆ ನೋಡಿಕೊಂಡರೆ ಹಾಯಿತು. (ರಾಮಪ್ಪನು ಗೌಡರ ಹತ್ತಿರ ಬರುವನು.)

ರಾಮಪ್ಪ :- (ಕೈ ಜೋಡಿಸುತ್ತ) ಹಡ್ಡ ಬಿದ್ದೆ ಬುದ್ದಿ. ನನ್ನ ಮಗ ಚೆನ್ನಾಗಿ ಕೆಲಸ ಮಾಡುತ್ತಾನ ಬುದ್ದಿ.

ಗೌಡ :- ಏನು ರಾಮಪ್ಪ ಮಗನನ್ನು ನೋಡೊಕೆ ಬಂದಿಯ. ನಿಮ್ಮ ಮಗ ಏನು ಚೆನ್ನಾಗಿ ಇದ್ದನೆ ಬೀಡು. ಯಾಕೆ ಚಿಂತಿಸುತ್ತಿಯ.

ರಾಮಪ್ಪ :- ನಿಮ್ಮ ಹತ್ತಿರ ಬಿಟ್ಟ ಮೇಲೆ ನಮ್ಮ ಮಗ ಚೆನ್ನಾಗಿ ಇರುತ್ತಾನೆ ಬೀಡು ಬುದ್ದಿ, ನಾನು ಅವನ ಬಗ್ಗೆ ಚಿಂತಿಸೋ ಅವಸ್ಯಕತೆ ಏನು ಇದೆ.

ಗೌಡ :- ಹಾಗಾದರೆ ಇಲ್ಲಿಗೆ ಬಂದಿರೋ ಕಾರಣ ಆದ್ರೂ ಏನು ರಾಮಪ್ಪ.

ರಾಮಪ್ಪ :- ಏನು ಇಲ್ಲ ಬುದ್ದಿ ಸ್ವಲ್ಪ ಕಾಸು ಬೇಕಿತ್ತು. ಮನೆಯಲ್ಲಿ ತಿನ್ನೊಕೆ ಕಾಳುಕಡಿ ಏನು ಇಲ್ಲದಂಗೆ ಹಾಗಿದೆ.

ಗೌಡ :- ಅಲ್ಲ ರಾಮಪ್ಪ ಹೋದ್ ಸಲ ತಗೊಂಡಿರೋ ಸಾಲನೆ ತುಂಬ ಇದೆ. ಅದನ್ನು ತೀರಿಸೋಕೆ ನಿಮ್ಮ ಮಗ ಇನ್ನೂ ಆರು ತಿಂಗಳು ದುಡಿದರು ಸಾಲದು. ಅಂತದಲ್ಲಿ ಇವಾಗ ಮತ್ತೆ ಸಾಲ ಕೇಳುತ್ತಿದ್ದಿಯಲ್ಲ. ಏನು ನಿಮ್ಮ ಮಗ ನಿಮ್ಮ ಮನೆಗೆ ಬರೋದ ಬೇಡವೆ.

ರಾಮಪ್ಪ :- ಅಲ್ಲ ಬುದ್ದಿ ನಮ್ಮ ಮಗ ನಿಮ್ಮ ಹತ್ತಿರ ಇದ್ರೂ ನಮ್ಮ ಹತ್ತಿರ ಇದ್ರೂ ಒಂದೆ ಅಲ್ವ. ಅವನು ಚೆನ್ನಾಗಿ ಇದ್ರೆ ಸಾಕು. (ಅಲ್ಲೆ ಇರೋ ಕೆಂಚಪ್ಪನು ಗೌಡರನ್ನು ಸ್ವಲ್ಪ ಬದಿಗೆ ಕರೆಸಿಕೊಂಡು ಹೇಳುವನು)

ಕೆಂಚಪ್ಪ :- ಅಲ್ಲ ಗೌಡರೆ ಇಂತ ಅವಾಕಾಸನ ಬಿಟ್ಟುಕೊಡಬೇಡಿ. ಸ್ವಲ್ಪ ಕಾಸು ಕೋಟ್ಟು ಆ ಹುಡುಗನ ನಿಮ್ಮ ಹತ್ತಿರನೆ ಇಟ್ಟುಕೊಂಡು ಬೀಡಿ. ತಿಂಗಳಿಗೆ ಒಂದಿಷ್ಟು ಮನೆಗೆ ಏನಾದ್ರು ಕಳಿಸಿದರೆ ಹಾಯಿತು.

ಗೌಡ :- ನೀನು ಹೇಳೋದು ಸರಿ ಇದೆ ಕೆಂಚಪ್ಪ. ಇದು ಒಳ್ಳೆ ಸಮಯನೇ. (ರಾಮಪ್ಪನ ಮುಂದೆ) ನೋಡು ರಾಮಪ್ಪ ನಿಮ್ಮ ಮಗ ನಮ್ಮ ಹತ್ತಿರನೇ ಇರಲಿಬೀಡು. ಅವನದು ಒಂದು ಜೀವನ ಹಾಗುತ್ತೆ. ಬೇಕಾದ್ರೆ ತಿಂಗಳಿಗೆ ಒಂದಿಷ್ಟು ಕಾಳು-ಕಾಸು ಮನೆಗೆ ಕಳುಹಿಸುತ್ತಿನಿ. ಏನಂತಿಯ.

ರಾಮಪ್ಪ :- ನೀವು ಹೇಗೆ ಅಂತಿರ ಹಾಗೇ ಹಾಗಲಿ ಬುದ್ದಿ.

ಗೌಡ :- ಹೂ....ಸರಿ. ಕೆಂಚಪ್ಪ ಇವನಿಗೆ ಒಂದಿಷ್ಟು ಕಾಸು ಕೊಟ್ಟು ಕಳುಹಿಸಿ.

ಕೆಂಚಪ್ಪ :- ಸರಿ ಗೌಡರೆ.


ದೃಶ್ಯ - ೪ 


(ಶಿಕ್ಷಕಿಯು ರಾಮಪ್ಪನ ಮನೆ ಹೂಡಿಕೊಂಡು ಬರುತ್ತಾರೆ.)

ಶಿಕ್ಷಕಿ :- ಹಿರಿಯರೆ ನಮಸ್ಕರ, ಗೀರಿಶ್ ಅವರ ತಂದೆ ರಾಮಪ್ಪನ ಮನೆ ಯಾವ ಕಡೆ ಇದೆ? ಅವರು ಮನೆಯಲ್ಲಿ ಇದ್ದರೆಯೆ? (ಎಂದು ಅಲ್ಲಿ ದಾರಿಯಲ್ಲಿ ಇರುವವರನ್ನು ವಿಚಾರಿಸುತ್ತಾರೆ)

ಸ್ಥಳಿಯರು :- ನಮಸ್ಕರ ಮೆಡಂ, ಹೋ ರಾಮಪ್ಪನ ಮನೆ ಬೆಕಾಗಿತ್ತೆ. ಇಲ್ಲೆ ಎರಡು ಮನೆ ದಾಟಿ ಒಂದು ಬಾವಿ ಇದೆ ಅಲ್ವ ಮೇಡಂ, ಅದರ ಪಕ್ಕದಲ್ಲಿ ಒಂದು ಬೀದಿ ಇದೆ ನೋಡಿ ಮೇಡಂ, ಆ ಬೀದಿಯ ಕೊನೆಗೆ ಒಂದು ಒಂಟಿ ಮನೆ ಕಾಣಿಸುತ್ತೆ ಮೇಡಂ ಅದೆ ಅವರ ಮನೆ. ಅವನು ಮನೆಯಲ್ಲಿ ಇರುತ್ತನೆ ಹೋಗಿ ಮೇಡಂ. ಅವನು ದೊಡ್ಡ ಕುಡುಕ ಅವನು ಯಾವ ಕೆಲಸಕ್ಕು ಹೊಗಲ್ಲ. ಹೆಂಡತಿ ಮಕ್ಕಳಿಂದ ದುಡಿಸಿಕೊಂಡು ಕುಡಿದುಕೊಂಡು ಎಲ್ಲೆಂದರಲ್ಲಿ ಬಿದ್ದಿರುತ್ತನೆ ಬಡ್ಡಿನನ್ನಗ...(ಶಿಕ್ಷಕಿಯು ಅವರಿವರನ್ನು ಕೇಳಿಕೊಂಡು ರಾಮಪ್ಪನ ಮನೆಗೆ ಬರುವರು)

ಶಿಕ್ಷಕಿ :- ರಾಮಪ್ಪ.... ರಾಮಪ್ಪ.... (ಎಂದು ಕೂಗುವರು)

ರಾಮಪ್ಪ :- ನಮಸ್ಕರ ಮೇಡಂ, ಏನು ಮೇಡಂ ನಮ್ಮ ಮನೆ ಕಡೆ ಬಂದಿದ್ದಿರಿ.

ಶಿಕ್ಷಕಿ :- ಏನು ರಾಮಪ್ಪ, ಶಾಲೆ ಪ್ರಾರಂಭದಿಂದ ನಿಮ್ಮ ಮಗ ಗೀರಿಶ ಶಾಲೆಗೆ ಬಂದಿಲ್ಲ. ಆರೋಗ್ಯ ಸರಿ ಇದೆಯೋ ಇಲ್ಲೊ

ರಾ. ಹೆಂಡತಿ :- ಇಲ್ಲ ಮೇಡಂ ಅವನು ಊರಿಗೆ ಹೋಗಿದ್ದಾನೆ. ಸ್ವಲ್ಪ ದಿನ ಬಿಟ್ಟು ಬರುತ್ತಾನೆ.

ಶಿಕ್ಷಕಿ :- ಸುಳ್ಳು ಹೇಳಬೇಡಮ್ಮ. ರಾಮಪ್ಪ ನಮಗೆ ಎಲ್ಲ ವಿಷಯ ಗೊತ್ತಿದೆ. ನಿಮ್ಮ ಮಗನನ್ನು ಶಾಲೆಯಿಂದ ಬೀಡಿಸಿ ಗೌಡರ ಹತ್ತಿರ, ಕೆಲಸಕ್ಕೆ ಹಚ್ಚಿರ. ನಾಳೆಯಿಂದ ನಿಮ್ಮ ಮಗ ಶಾಲೆಗೆ ಬರದಿದ್ದರೆ, ನಾವು ಪೋಲಿಸ್ ಸಮೇತ ಇಲ್ಲಿಗೆ ಬರುತ್ತೇವೆ.

ರಾ. ಹೆಂಡತಿ :- ಹಾಗೆಲ್ಲ ಮಾಡಬೇಡಿ ಮೇಡಂ. ನಾಳೆಯಿಂದ ನಮ್ಮ ಮಗ ಶಾಲೆಗೆ ಬರುತ್ತಾನೆ. (ಶಿಕ್ಷಕಿಯು ಶಾಲೆಗೆ ತೇರಳುವರು)

ರಾಮಪ್ಪ :- ಇವರಂತು ನಮ್ಮ ಮಗನಿಗೆ ಏನು ಹಣ ಕೋಡುತ್ತಾರ.

ರಾ. ಹೆಂಡತಿ :- ಏನ್ . ನಮ್ಮ ಮಗನ ಇವಾಗಾದ್ರು ಶಾಲೆಗೆ ಕಳುಹಿಸಿ ಇಲ್ಲದಿದ್ರೆ ಪೋಲಿಸ್ ಬಂದ್ರೆ ಏನು ಮಾಡ್ತಿರ.

ರಾಮಪ್ಪ :- ಏ..... ನೋಡಿನ್ ಬೀಡೆ. ಇವರು ಏನು ಮಾಡುತ್ತಾರಂತ.

ಮುಂದುವರೆಯುವುದು.......


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...