ಯುದ್ಧವೆಂದರೆ
ತಿಳಿದಿದೆಯೇ ನಿಮಗೆ ಯುದ್ಧವೆಂದರೆ
ಹಾ ಸದಾ ಹಿಂಸೆ ಕ್ರೂರತೆ ದಬ್ಬಾಳಿಕೆಯೆ
ಹೌದು ಪ್ರಸ್ತುತ ಜಗತ್ತಿನ ಯುದ್ಧವಿದು
ಹಸಿವಿನ ಯುದ್ಧಗಳವು
ರಕ್ತವೊ ಒಡೆತನವೊ ಜಗದಿಡಿತವೊ
ಗರ್ವವೊ ಶ್ರೇಷ್ಠತೆಯ ಬಲ ಪ್ರದರ್ಶನವೊ
ಯಾಕೆ ಯುದ್ಧ ಶಾಂತಿಯದಲ್ಲ
ಯಾಕೆ ವಿಶ್ವ ಏಕತೆಯಲ್ಲ
ಭೂಮಿಯಲ್ಲಿ ಇರುವವರು ಮನುಜರಲ್ಲವೆ
ಶಾಂತಿ ಸಹೃದಯತೆ ಗ್ರಂಥಕ್ಕೆ ಸೀಮಿತವೆ
ನಿಜಯುದ್ಧ ಆಗಬೇಕಿರುವುದು
ಜಗದ ಹಸಿವು ನೀಗಿಸುವಲ್ಲಿ
ಜಗದ ಶಾಂತಿ ಕಾಪಾಡುವಲ್ಲಿ
ಅನಾಥರು ಅದಮರ ಆರೈಕೆಯಲ್ಲಿ
ತನ್ನದೇ ಶ್ರೇಷ್ಠವೆಂಬ ಭಾವ ಕಳೆದು
ಸಮಾನತೆ ಏಕತೆ ಮೂಡಿಸುವಲ್ಲಿ
ಬಾಯಾರಿದವರಿಗೆ ನೀರೆರೆಯುವಲ್ಲಿ
ನೆಮ್ಮದಿಯ ನೆಲೆಯಲ್ಲಿ ಪ್ರಜೆಗಳನ್ನು ಬದುಕಿಸುವಲ್ಲಿ
ವಿಶ್ವ ನನ್ನದು ವಸುಧೈವ ಕುಟುಂಬ ಎನ್ನುವಲ್ಲಿ
ಸತ್ಯ ಶೋಧನೆ ವೈಜ್ಞಾನಿಕ ಸಾಧನೆಯಲ್ಲಿ
ಇದು ಅತ್ಯೋನ್ನತಿಯ ಮನದ ಯುದ್ಧ
ಇದೇ ಅಲ್ಲವೇ ನಿಜವಾದ ಯುದ್ಧವೆಂದರೆ?
ಮರಿಸಿದ್ದಪ್ಪ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ