ಸೋಮವಾರ, ಏಪ್ರಿಲ್ 20, 2026

ಸಂಚಿಕೆ - ೧೭

ದೃಶ್ಯಂ - ೩

ಮಂಗಳೂರು ವಿಶ್ವವಿದ್ಯಾನಿಲಯಗಳು, ವಿವಿಧ ಡಿಪಾರ್ಟೆಂಟ್‌ಗಳು, ವಿದ್ಯಾರ್ಥಿನಿಯರುಗಳು, ವಿದ್ಯಾರ್ಥಿಗಳು. 

ಅಂದಗಳು, ಚಂದಗಳು, ಕಾಳುಹಾಕುವ ಹುಡುಗರುಗಳು, ಸ್ವಯಂಘೋಷಿತ ಸುಂದರಿಗಳು.

ಕಾಡು ತುಂಬಿದ ವಾತಾವರಣಗಳು, ಡಿಗ್ರಿವರೆಗೆ ಗರ್ಲ್ ಫ್ರೆಂಡುಗಳು, ಎಂ.ಎ ಯವರಿಗೆ ಒನ್ ಸೈಡ್ ಲವ್‌ಗಳು.

ಕಾರ್ಯಕ್ರಮಗಳು ವಿದ್ಯಾರ್ಥಿಗಳೇ ಕಾರ್ಯಕರ್ತರುಗಳು, ವರ್ಷ ವಿಡಿ ಪ್ರೋಗ್ರಾಂಗಳು 

ಕೊನೆಯಲ್ಲಿ ಅಸೈಸ್ಟೆಂಟ್ ಸೆಮಿನಾರ್ಗಳ ಕಿತಾಪತಿಗಳು.

ವಿಶ್ವವಿದ್ಯಾನಿಲಯದ ಫೀಸ್‌ಗಳು, ಸಾಲಕ್ಕೆ ಕ್ಯೂನಿಂತ ಆರ್ಥಿಕ ಆಶಕ್ತರುಗಳು.

ಸ್ಟ್ಯಾಂಪ್‌ಗಳು, ರೇಟ್ ನೋಡಿ ಕಂಗಾಲಾದ ರಾಧಾಕೃಷ್ಣನ್‌ಗಳು. 

ಜಿ.ಟಿ ಲೈಟುಗಳು, ಮಿಂಚುಹುಳಗಳಂತೆ ತುಂಬಿಕೊಳ್ಳುವ ನಾರಿಶಕ್ತಿಗಳು. 

ಹಾಸ್ಟೆಲ್ ಲೈಫುಗಳು, ನೀರು ಮಿಶ್ರಿತ ಸಾರುಗಳು, ತಲೆ ಕೂದಲು ಉದುರುವ ಸಮಸ್ಯೆಗಳು. 

ಪ್ರವಾಸದ ಜಟಾಪಟಿಗಳು, ಪ್ರಥಮ ಹಾಗೂ ದ್ವಿತೀಯ ವರ್ಷದವರ ಪೈಪೋಟಿಗಳು. 

ಎಕನಾಮಿಕ್ಸ್ ಎಲೆಕ್ಟಿವ್ ಕ್ಲಾಸುಗಳು. ಮಾತು ಕೇಳಿ ಹಾರಿಬಿಟ್ಟ ಅಮಾಯಕ ಹುಡುಗರುಗಳು.


ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...