ಸೋಮವಾರ, ಏಪ್ರಿಲ್ 20, 2026

ಸಂಚಿಕೆ - ೧೭

ಇಲಿಯ ದ್ವೇಷ

      ಸುತ್ತಲು ಹಚ್ಚ ಹಸಿರಿನಿಂದ ಕಂಗೊಳಿಸುವ ಗಿಡ ಮರಗಳು, ಗಗನ ಚುಂಬಿಸುವಂತಹ ಬೆಟ್ಟಗುಡ್ಡ, ವರ್ಷವಿಡೀ ಹರಿವ ನೀರಿನ ಶಬ್ದ ಇವುಗಳ ಮಧ್ಯೆ 'ಮಂಗಳ ಪುರ'ವೆಂಬ ಊರು. ಈ ಊರಿನ ಜನರೆಲ್ಲರೂ ಸಹೋದರ-ಸಹೋದರಿ ಭಾವದಿಂದ ಜೀವಿಸುತ್ತಿದ್ದರು. ಈ ಊರಿನಲ್ಲಿ 'ಮೀನಾಕ್ಷಿ' ಎಂಬ ಒಬ್ಬ ಮಹಿಳೆಯಿದ್ದಳು. ಮದುವೆಯಾಗಿ ಒಂದು ವರ್ಷದೊಳಗೆ ಆಕೆ ಗಂಡ ತೀರಿಹೋದ. ಹಾಗಾಗಿ ಆಕೆ ಒಬ್ಬಂಟಿಯಾಗಿ ಇರುತ್ತಿದ್ದಳು. ಒಬ್ಬಂಟಿಯಾಗಿದ್ದ ಮೀನಾಕ್ಷಿ ತನ್ನ ಜೀವನ ನಡೆಯಲು ಒಂದು ಸಿಹಿ ತಿಂಡಿಗಳ ಅಂಗಡಿಯನ್ನು ಇಟ್ಟಿದ್ದಳು. ಮೀನಾಕ್ಷಿ ಮಾಡುತ್ತಿದ್ದ ತಿಂಡಿ ತಿನ್ನಿಸುಗಳು ಮಂಗಳ ಪುರದ ಜನರಿಗೆ ತುಂಬಾ ಪ್ರಿಯವಾಗಿತ್ತು.

   ಮೀನಾಕ್ಷಿ ತಿಂಡಿಗಳನ್ನು ತಯಾರಿಸಿ ಡಬ್ಬಿಯಲ್ಲಿ ಇಟ್ಟಿರುತ್ತಿದ್ದಳು. ಒಂದು ದಿನ ಇಟ್ಟಂತಹ ತಿಂಡಿಗಳು ಕಾಣೆಯಾಗುತ್ತಿದ್ದನು. ಮೀನಾಕ್ಷಿ ಗಮನಿಸಿದಳು. ಯಾಕೆ ಹೀಗೆ ತಿಂಡಿಗಳು ಕಾಣೆಯಾಗುತ್ತಿದೆ ಎಂದು ತಿಳಿಯಲಿಲ್ಲ. ಈ ಕಣ್ಣಾಮುಚ್ಚಾಲೆ ಆಟವನ್ನು ಕಂಡು ಹಿಡಿಯ ಬೇಕೆಂದು ರಾತ್ರಿ ನಿದ್ದೆ ಮಾಡದೆ ಜಾಗರಣೆ ಕುಳಿತಳು. ಆಕೆಯ ನಿದ್ದೆಯನ್ನು ತಡೆ ಹಿಡಿಯಲು ಸಾಧ್ಯಯವಾಗದೆ ಮೀನಾಕ್ಷಿ ನಿದ್ರೆಗೆ ಜಾರಿದಳು. ಆಗ ಪಾತ್ರೆಗಳ ಶಬ್ದದಿಂದ ಎಚ್ಚರವಾದ ಮೀನಾಕ್ಷಿ, ಎಲ್ಲಿಂದ ಶಬ್ದ ಬಂದದ್ದು ನೋಡಿದಾಗ ಇಲಿಗಳು ತಿಂಡಿಗಳನ್ನು ತಿನ್ನುತ್ತಿದ್ದವು. ಆಕೆಯ ಸಮಸ್ಯೆಗೆ ಕಾರಣವೇನೆಂದು ತಿಳಿದು ಇದಕ್ಕೆ ಈಗ ಪರಿಹಾರ ಕಂಡುಹಿಡಿಯಬೇಕೆಂದು ಯೋಚಿಸುತ್ತಾ ನಿದ್ರೆಯನ್ನು ಮಾಡಿದಳು. ಮರುದಿನ ಬೆಳಿಗ್ಗೆ ಎದ್ದು ತನ್ನ ದೈನಂದಿನ ಕೆಲಸ ಮುಗಿಸಿದಳು. ಇವತ್ತು ಆಕೆಗೆ ಸಂತೆಗೆ ಹೋಗಲು ಇದ್ದಿದ್ದರಿಂದ ಅಂಗಡಿಯನ್ನು ತೆರೆಯಲಿಲ್ಲ ಹಾಗೆಯೇ ಇಲಿಗಳಿಂದ ಮುಕ್ತಿ ಸಿಗಲು ಸಂತೆಯಿಂದ ಇಲಿಗಳನ್ನು ಹಿಡಿಯುವ ಗೂಡನ್ನು ತಂದಳು. ಆ ಗೂಡಿನ ಒಳಗಡೆ ಒಂದು ಸಣ್ಣ ಕೊಕ್ಕೆ ಇದ್ದು ಅದಕ್ಕೆ ಮದ್ದು ಬೆರೆಸಿದಂತಹ ತಿಂಡಿಯನ್ನು ಅಂಟಿಸಿದಳು.

      ಡಬ್ಬದಲ್ಲಿರುವ ತಿಂಡಿಗಳನ್ನು ತಿನ್ನಲು ಇಲಿಗಳು ಬಂದೇ ಬರುತ್ತದೆ ಎಂಬುವುದು ಮೀನಾಕ್ಷಿ ತಿಳಿದಿದ್ದಳು. ಹಾಗಾಗಿ ಆ ಗೂಡನ್ನು ಕೊಂಡು ಹೋಗಿ ತಿಂಡಿಗಳ ಡಬ್ಬದ ಬಳಿಯೇ ಇಟ್ಟಳು. ಆ ಗೂಡಿನಲ್ಲಿರುವ ತಿಂಡಿಯನ್ನು ತಿನ್ನುವ ಅವಸರದಲ್ಲಿ ಎಳೆಯುವಾಗ ಗೂಡಿನ ಬಾಗಿಲು ಮುಚ್ಚುತ್ತದೆ. ತಿಂಡಿಯನ್ನು ತಿಂದ ಇಲಿಯು ಸತ್ತು ಹೋಗುತ್ತದೆ. ಈ ರೀತಿಯಾಗಿ ಉಪಾಯ ಮಾಡಿದಳು. ಆಕೆಯು ಮಾಡಿದಂತಹ ಉಪಾಯ ಫಲಿಸಿತ್ತು. ಹೀಗೆ ನಾಲೈದು ದಿನ ಹೀಗೆಯೇ ನಡೀತಾ ಹೋಯ್ತು.

      ಹೀಗೆ ಒಂದು ದಿನ ರಾತ್ರಿ ಗಾಢವಾದ ನಿದ್ರೆಯಲ್ಲಿ ಇದ್ದಂತಹ ಮೀನಾಕ್ಷಿಯ ಕೈಗಳಿಗೆ ಏನೋ ಕಚ್ಚಿದಂತೆ ಆಯಿತು. ಮೀನಾಕ್ಷಿ ನಿದ್ರೆಯಿಂದ ಎದ್ದು ನೋಡುವಾಗ ಆಕೆ ಕೈಯ ಬೆರಳನ್ನು ಇಲಿಗಳು ತಿಂದಿದ್ದವು. ಇದನ್ನು ನೋಡಿ ಅಚ್ಚರಿಯದಳು ಆದರೆ ಮೀನಾಕ್ಷಿ ತನ್ನ ಕೈಗಳ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಯಾಕೆಂದರೆ ಇನ್ನೂ ಇಲಿಗಳ ಕಾಟ ಎಷ್ಟು ದಿನ ಸ್ವಲ್ಪ ದಿನದಲ್ಲಿ ಅವುಗಳ ಕಾಟ ಕಡಿಮೆ ಆಗುತ್ತದೆ ಎಂದು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆಕೆ ಮರುದಿನ ಎದ್ದು ತನ್ನ ದೈನಂದಿನ ಕೆಲಸವನ್ನು ಮುಗಿಸಿ ಅಂಗಡಿಯನ್ನು ತೆರೆದಳು. ಅಂಗಡಿಗೆ ಬಂದಂತಹ ಗ್ರಾಹಕರಿಗೆ ಬೇಕಾದ ತಿಂಡಿಗಳನ್ನು ಕೊಡುವ ಕಾರ್ಯದಲ್ಲಿ ನಿರತಳಾದಳು. ದಿನವಿಡೀ ಕೆಲಸ ಮಾಡಿ ಸುಸ್ತಾಗಿದ್ದ ಮೀನಾಕ್ಷಿಯು ಊಟ ಮುಗಿಸಿ ಮಲಗಲು ಸಿದ್ದಳಾದಳು. ಸುಸ್ತಾಗಿದ್ದ ಕಾರಣ ಗಾಢವಾದ ನಿದ್ದೆ ಮಾಡುತ್ತಿದ ಮೀನಾಕ್ಷಿಯನ್ನು ತಿಂಡಿ ತಿನ್ನಲು ಬಂದಂತಹ ಇಲಿಯು ನೋಡಿ ತನ್ನ ಕುಟುಂಬದ ಬಲಿ ಪಡೆದುಕೊಂಡಂತಹ ಈ ಹೆಂಗಸು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವಳು. ಇವಳಿಗೆ ಸರಿಯಾದ ಪಾಠ ಕಲಿಸಬೇಕೆಂದು ಇಲಿಯು ಆಕೆಯನ್ನು ತಿಂದುಬಿಟ್ಟಿತ್ತು.

      ಮರುದಿನ ಬೆಳಿಗ್ಗೆ ಎಷ್ಟು ಹೊತ್ತಾದರೂ ಅಂಗಡಿಯನ್ನು ತೆರೆಯದಿದ್ದನ್ನು ನೋಡಿ ಊರಿನ ಜನರು ಮೀನಾಕ್ಷಿ ಎಲ್ಲಿ ಹೋದಳು. ಇನ್ನು ಕೂಡ ಎದ್ದಿಲ್ಲವೆಂದು ಕಾಣಬೇಕು, ಎಂದು ಮನೆಯ ಬಾಗಿಲು ತಟ್ಟಿದರು. ಆದರೆ ಎಷ್ಟೇ ಬಾಗಿಲು ತಟ್ಟಿದರು ಕೂಡ ಬಾಗಿಲು ತೆರೆಯಲಿಲ್ಲ. ಕೊನೆಗೆ ಮನೆಯ ಬಾಗಿಲನ್ನು ಹೊಡೆದು ಮನೆಯ ಒಳಗೆ ಹೋಗಿ ನೋಡಿದಾಗ ಯಾರು ಇರಲಿಲ್ಲ ಆದರೆ ಇಲಿ ಮಾತ್ರ ತಿಂಡಿಯನ್ನು ತಿನ್ನುತ್ತಿತ್ತು. ಅಲ್ಲಿ ಮೀನಾಕ್ಷಿ ಸುಲಿವು ಇರಲಿಲ್ಲ; ಆದರೆ ಅಲ್ಲಿಯೊಂದು ಹಸ್ತಿಪಂಜರ ಇದ್ದೀತು ಅದನ್ನು ನೋಡಿ ಜನರು ಅಚ್ಚರಿಗೊಂಡು ಮೀನಾಕ್ಷಿಯನ್ನು ಹುಡುಕಿದರು. ಆದರೆ ಆಕೆಯ ಸುಳಿವು ಮಾತ್ರ ಇರಲಿಲ್ಲ. ಊರಿನ ಜನರಿಗೆ ಮಾತ್ರ ಮೀನಾಕ್ಷಿ ಎಲ್ಲಿ ಹೋದಳು ಎಂಬ ಪ್ರಶ್ನೆ ಮಾತ್ರ ಕಾಡುತ್ತಿತ್ತು.

ಪಲ್ಲವಿ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...