ಸೋಮವಾರ, ಏಪ್ರಿಲ್ 20, 2026

ಸಂಚಿಕೆ - ೧೭

ಪುಷ್ಪನ ಬರಹಗಳು....

ನಾನು ಗೆಲ್ಲೊವರಿಗು ಮಾತ್ರ ಎಲ್ಲರೊಳಗೆ ನಾನು ಒಬ್ಬ 

ಗೆದ್ದ ಮೇಲೆ ಎಲ್ಲರೆದುರು ನಿಂತುಕೊಳೊದೆ ನಾನು ಒಬ್ಬ


ಓ ಹೃದಯವೆ ನಿನ್ನ... 

ಸಮಯ ಸಾಧನೆ ಕಡೆಗೆ ಇರಲಿ 

ಸಾಯುವ ತನಕ ನಿನ್ನಲ್ಲಿ ಸಹೋದರತೆ ತುಂಬಿರಲಿ 

ಸಲು ನಿನ್ನ ನೆನಪು ಸಾಲುಗಟ್ಟಲೆ ಉಳಿಯಲಿ.


ಸಂತೋಷವಾಗಿರೊದನ್ನ ನಾವು ಹುಡುಕ್ತ ಹೋದ್ರೆ 

ಸಕ್ಸಸ್ ಅನ್ನೋದು ಸಿಗಲ್ಲ 

ಸಕ್ಸಸ್‌ನ ಹುಡುಕ್ತ ಹೋದ್ರೆ 

ಸಂತೋಷ ಅನ್ನೋದು ತಾನಾಗೆ ಬಂದು ನಮ್ಮನ್ನ ಎಗಲೇರುತ್ತೆ.


ನಾವು ವೇದಿಕೆಯನ್ನ ಬಳಸಿಕೊಳ್ಳದೆ ಇರಬಹುದು 

ಆದರೆ ವೇದಿಕೆಯೆ ನಮ್ಮನ್ನ ಬಳಸಿಕೊಳ್ಳುವಂತೆ ಆಗಬೇಕು...


ತುಕಾಲಿ ಜನರ ಚಿಂತೆ ಬಿಟ್ಟು ಬಿಡು ಮಚ್ಚ 

ತುತ್ತು ಕೊಟ್ಟವರನ್ನ ಒಮ್ಮೆ ನೆನೆದು ಬಿಡೊ ಹುಚ್ಚ 

ತುಗೊ ಉಯ್ಯಾಲೆಯಲ್ಲಿ ಸುಖವಿದ್ದರು 

ನೆಮ್ಮದಿ ಸಿಗೊದು ನೆಲದ ಆಸಿಗೆಯಲ್ಲೇ.


ಹವ್ಯಾಸಗಳಿಂದ ವ್ಯಕ್ತಿನ ಅಳಿಯೋದಕ್ಕಿಂತ 

ವ್ಯಕ್ತಿತ್ವದಿಂದ ವ್ಯಕ್ತಿನ ಅಳಿಯೋದು ಉತ್ತಮ 

ಏಕೆಂದರೆ 

ಹವ್ಯಾಸಕ್ಕಿಂತ ಅನುಭವ ದೊಡ್ಡದು 

ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು.


ಆಸೆ ತೋರಿಸಿದವಳು ನಮ್ಮನ್ನ ಅಳಿಸಿ ಹೋಗಬಹುದು 

ಅರಸಿ ಬಂದವಳು ನಮ್ಮನ್ನ ಮೆರೆಸಿ ಹೋಗಬಹುದು


ಪುಷ್ಪನ ಹುಡುಕೊಂಡು ದುಂಬಿಗಳು ಬರಬೇಕೆ ವಿನಃ 

ದುಂಬಿಗಳನ್ನ ಹುಡುಕೊಂಡು ಪುಷ್ಪ ಹೋಗಲ್ಲ.


ಮಹೇಶ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...