ಆಕೆ ಎಂದರೆ....?
ಆಕೆ ಎಂದರೆ ಕೇವಲ ಮನೆಯ ಮಗಳಲ್ಲ
ಆಕೆ ಎಂದರೆ ಬರಿ ಮಡದಿಯಲ್ಲ
ಆಕೆ ಎಂದರೆ ಕೇವಲ ತಾಯಿಯಲ್ಲ
ಆಕೆ ಎಂದರೆ ಕೇವಲ ಪ್ರೇಯಸಿಯಲ್ಲ
ಆಕೆ ಎಂದರೆ ಬರಿ ಗೆಳತಿ ಅಲ್ಲ
ಆಕೆ ಎಂದರೆ ಕೇವಲ ಆಪ್ತಳಲ್ಲ
ಆಕೆ ಎಂದರೆ ಬರಿ ಮಾರ್ಗದರ್ಶಕಿ ಅಲ್ಲ
ಆಕೆ ಎಂದರೆ ಕೇವಲ ಕಲಾವಿದೆ ಅಲ್ಲ
ಆಕೆ ಎಂದರೆ ಬರಿ ಶಿಕ್ಷಕಿಯಲ್ಲ
ಆಕೆ ಎಂದರೆ ಕೇವಲ ಕೋಪವಲ್ಲ
ಆಕೆ ಎಂದರೆ ಬರಿ ಸ್ನೇಹವಲ್ಲ
ಆಕೆ ಎಂದರೆ ಕೇವಲ ಪ್ರೀತಿಯು ಅಲ್ಲ
ಆಕೆ ಎಂದರೆ..........................
ಅರಸುತ್ತ ಹೋದ ನನಗೆ ಕಂಡಿದ್ದು
ಅವೆಲ್ಲವುಗಳ ಹೊರತುಪಡಿಸಿದ ಆಕೆ;
ಒಂದೊಮ್ಮೆ ಅವೆಲ್ಲವುಗಳನ್ನು ತನ್ನದಾಗಿಸಿಕೊಂಡ ಆಕೆ;
ಮಗದೊಮ್ಮೆ ಅವೆಲ್ಲವುಗಳನ್ನು ಪರಿಧಿಯ
ಮರೆಯಲ್ಲಿ ಬಂಧಿಸಿ ಆಗೊಮ್ಮೆ ಇಗೊಮ್ಮೆ
ಎಲ್ಲಾ ಪಾತ್ರಗಳಲ್ಲೂ ಬಿಂಬಿಸುವವಳು ಆಕೆ;
ಈ ಆಕೆಯೇ ಈಕೆ ಅರಸಿದಷ್ಟು ಅರ್ಥಾಂಗತೆ,
ಮಂತ್ರಾಮುಗ್ಧಗೊಳಿಸುವ ಪ್ರಕೃತಿ ಒಡಳಾದ ಅಂದಗಾತಿ,
ಮಾತೃ ಹೃದಯದ ಸೂರ್ತಿಯ
ಸುಂದರ ಮಾಯಗಾತಿ ಆಕೆ;
ಆ ಆಕೆಯೇ ಈಕೆ.
ಪವಿತ್ರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ