ಅಖಂಡವಾದ ಶಕ್ತಿ ಈ ಪ್ರಕೃತಿ
ನಿಸರ್ಗದ ಮಡಿಲಿನಲ್ಲೆ ಆನಂದ
ಅದನೆಂದು ಬಣ್ಣಿಸಲಿ ಆ ಮಹಾದಾನಂದ
ತಂಪಾದ ವಾಯು ಸೋಕಿದಾಗ
ಪುಳಕಿತಗೊಂಡ ಈ ಕಂದಾ
ಹಕ್ಕಿಗಳ ಚಿಲಿಪಿಲಿ ಕೂಗುಗಳೇ
ನಾನಾ ಸುಮಧುರಾನಂದ.
ಹಿಂದೆ ಶಾಲೆಗೆ ಹೋಗುತ್ತಿದ್ದಾಗ
ದಟ್ಟ ಕಾಡುಗಳು ಹೆಚ್ಚಿದ್ದು
ಇಂದೇಕೊ ಆ ಸ್ಥಳಗಳು
ಮಾಯವಾದಂತಿದೆ
ನಾ ತಿರುಗಿದ ಸ್ಥಳದಲ್ಲಿ
ವಿಭಿನ್ನ ರೀತಿಯ ಹೂ ಹಣ್ಣು ತಿಂದು
ಸಂತೋಷಗೊಂಡ ಆ ದಿನಗಳು
ಇಂದು ಬರೀ ನೆನಪಷ್ಟೆ
ಅಭಿವೃದ್ಧಿಯ ನೆಪದಲ್ಲಿ
ಕಾಡುಗಳನ್ನು ಕಡಿದು ಸಂಭ್ರಮಿಸಿ,
ಶೀಘ್ರಗತಿಯ ಪ್ರಗತಿಯ ಮೊರೆಗೆ ಹೋದ
ಈ ಮಾನವ ಪ್ರಕೃತಿಯ ನಾಶವು
ನನ್ನ ನಾಶ ಎಂದರಿಯದಾದ ಈ ಬುದ್ದಿಜೀವಿ
ಅಖಂಡವಾದ ಶಕ್ತಿ ಇರುವ ಪ್ರಕೃತಿ
ಅತಿ ಸೌಮ್ಯವಾಗಿ ವರ್ತಿಸುವುದು
ಅದೇ ಮಾನವ ತನಗೆ ಅತಿ ಶಕ್ತಿ ಇದೆ
ಎಂದು ಅತೀ ಕ್ರೂರಿಯಾಗಿ ವರ್ತಿಸುತ್ತಿದ್ದಾನೆ
ನಿಸರ್ಗವು ಮುನಿಸಿಕೊಂಡರೆ
ಯಾವ ವಿಜ್ಞಾನವು ವಿಜ್ಞಾನಿಯು ತಡೆಯಲು ಸಾಧ್ಯವಿಲ್ಲ
ಪ್ರಕೃತಿಯೊಂದಿಗೆ ನಾವು... ನಮ್ಮೊಂದಿಗೆ ಪ್ರಕೃತಿ
ಪ್ರಕೃತಿಯನ್ನು ಗೌರವಿಸುತ್ತಾ ಪ್ರೀತಿಸುತ್ತಾ
ಗಿಡಮರಗಳನ್ನ ಬೆಳೆಸುತ್ತಾ
ಪ್ರಕೃತಿಯೊಂದಿಗೆ ಜೀವಿಸೋಣ
ಸೌಮ್ಯ ಟಿ.ಎಸ್, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ