ಸೋಮವಾರ, ಏಪ್ರಿಲ್ 27, 2026

ಸಂಚಿಕೆ - ೧೮

ನಿಸರ್ಗದಲಿ ಕಂಡವಳು

ಹಚ್ಚ ಹಸಿರಿನ ಗಿಡ ಮರಗಳ ಬನದ 

ನಡುವಿನಲಿ ಒಂದು ಪಾಳು ಬಿದ್ದ ಸಣ್ಣ ಕಟ್ಟಡ.. 

ಅದು ಬಸ್ ನಿಲ್ದಾಣವಂತೆ


ಆಗೊಂದು ಈಗೊಂದು ಎನ್ನುವಂತೆ 

ಬೆರಳೆಣಿಕೆಯಷ್ಟು ಬಸ್ಸುಗಳ ಸಂಚಾರವಿರುವ 

ಆ ದಾರಿಯಲ್ಲಿ ಅವಳ್ಯಾರೋ ನಾ ಕಾಣೆ...


ಆ ನಿಸರ್ಗಕ್ಕೆ ಪರಿಚಿತಳೇ..?


ನಿತ್ಯವೂ ಹೂವಿನ ಮೇಲೆ ದುಂಬಿಯಂತೆ 

ಕೂತು ಕಾಯುವಳು ಅವಳು, 

ಅವಳ ಸೀರೆಯಲಿ ಹೂಗಳ ಚಿತ್ತಾರ, 

ಕಾಮನಬಿಲ್ಲಿನಂತೆ ಕಣ್ಣಿನ ಕಾಡಿಗೆ


ಮಲ್ಲಿಗೆಯನು ಅಳೆದು ಮುಡಿದಿರುವಂತೆ, 

ಅವಳ ಜಡೆಯನ್ನು ಅಳೆಯುವಾಸೆ...


ಅಲ್ಲಿ ಬಿದ್ದ ತರಗೆಲೆಗಳು ಅವಳ ಮನದ 

ಕೌತುಕವನು ಹೇಳುತಿಹವು ವಿವರವಾಗಿ,


ಸೀರೆಯ ತುದಿಯನ್ನು ಬೆರಳುಗಳಿಂದ 

ಕೊಸೆಯುವಳು ತೋರುತ ಚಡಪಡಿಕೆಯ


ಕಣ್ಣುಗಳಲಿ ಮಾತನಾಡಿ, ಮೌನದ 

ಭಾಷೆಗೆ ಬ್ರಾಂಡ್ ಅಂಬಾಸಿಡಾರ್ ಎಂದು 

ತೋರುವಳು...


ಪರಶುರಾಮ್, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...