ಸೋಮವಾರ, ಜೂನ್ 8, 2026

ಸಂಚಿಕೆ - ೨೩

ಬರೆಯಲೊಂದು ಸಾಲು ಇದೆ....

ಬರೆಯಲೊಂದು ಸಾಲು ಇದೆ.... 

ಬರೆಯಲೋ ಬೇಡವೋ ಎಂಬ ಆತಂಕವಿದೆ..... 

ಬರೆದರೆ ನನ್ನೊಳಿರುವ ಭಾವನೆಯ ಬಣ್ಣವನ್ನು 

ಅರಿತುಕೊಳ್ಳುವರೇ ಎಂಬ ಸಂದೇಹವಿದೆ.... 

ಬರೆಯದೆ ಭಾವನೆಗಳನ್ನು ತಲುಪಿಸುವ 

ಪರಿಯನಗೆ ಅರ್ಥವಾಗುತ್ತಿಲ್ಲವೆಂಬ 

ಬೇಸರವಿದೆ....


ಬರವಣಿಗೆಯ ಮೂಲಕವೇ ಎಲ್ಲವನ್ನೂ 

ಹೇಳುವಂತಿದ್ದರೆ ಪ್ರಭುದ್ದ ಭಾಷೆ ಮೌನದ 

ಅರ್ಥವೇನು ಎಂಬ ಪ್ರಶ್ನೆ ಇದೆ.... 

ಕಣ್ಣ ಸನ್ನೆಯ ಸೂಕ್ಷ್ಮತೆಯ ಮಾತುಗಳನ್ನು 

ಬರವಣಿಗೆಯಲ್ಲಿ ಅಚ್ಚು ಮೂಡಿಸಲು 

ಸಾಧ್ಯವೇ ಎಂಬ ಕೊಂಚ ಅಳುಕಿದೆ.... 

ಬರೆಯದೆ ಹೋದರೆ ನನ್ನ ಪ್ರೀತಿ ಅಳಿದು 

ಹೋಗುತ್ತದೆ ಎನ್ನುವ ಭೀತಿಯು ಇದೆ....


ಆದರೂ ನಾನು ಬರೆದರೂ ಬರೆಯದಿದ್ದರೂ 

ನನ್ನಲ್ಲಿ ಅಡಗಿರುವ ಭಾವನೆಯ ಸಾಲುಗಳಿಗೆ 

ಜೀವವಿದೆ ಎಂಬ ಭರವಸೆ ನನಗಿದೆ....


ಬಾಲಾಜಿ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...