ಸೋಮವಾರ, ಜೂನ್ 8, 2026

ಸಂಚಿಕೆ - ೨೩

ಬೆಳಕು

ಬೆಳಕು ಬರುವುದು ಬೆಳಗಿನ ಜೊತೆ 

ಹೊಸ ಕನಸುಗಳ ಮೃದುವಾದ ಹಾದಿ ಹಿಡಿದು 

ಕತ್ತಲಿನ ಮೋಡವನು ದೂರ ತಳ್ಳಿ 

ಮನದೊಳಗೆ ಆಶೆಯ ದೀಪ ಹೆಚ್ಚುತ್ತದೆ


ಸೂರ್ಯನ ಕಿರಣದ ಚಿನ್ನದ ಸ್ಪರ್ಶ 

ಭೂಮಿಗೆ ನೀಡುತ್ತದೆ ಹೊಸ ಉತ್ಸಾಹ 

ಹೂವಿನ ನಗುವಿನಂತೆ ಮಿಂಚಿ 

ಜೀವನದ ದಾರಿಯನ್ನು ಸುಂದರಗೊಳಿಸುತ್ತದೆ


ಬೆಳಕು ಎಂದರೆ ಜ್ಞಾನದ ಹೊಳೆ 

ಅಜ್ಞಾನದ ಕತ್ತಲಿಗೆ ಅಂತ್ಯ 

ಪ್ರೀತಿ ಶಾಂತಿ ನಂಬಿಕೆಯ ರೂಪವಾಗಿ 

ಮಾನವನ ಬದುಕಿಗೆ ದಾರಿ ತೋರುತ್ತದೆ


ಶ್ರೀಷ್ಮ ಎಂ. ಬಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...