ಯಾಂತ್ರಿಕ ಬದುಕು
ಕಾಲವು ಓಡುತ್ತಿದೆ ನಿಲ್ಲದ ಬಂಡಿಯ ರೀತಿಯಲಿ
ಮಾನವ ಸಂಕುಲ ಸಿಲುಕಿದ ಮಾಯ ಜಾಲದಲಿ
ಕೈಯಲ್ಲೆ ಕಾಣುವುದು ಈಗ ಮೂರು ಲೋಕ
ಹೃದಯ ಮಾತಿಗಿಂತ ಆನ್ಸೆನ್ ಪ್ರೀತಿಯೇ ಅಧಿಕ
ನೂರಾರು ಗೆಳೆಯರಿದ್ದಾರೆ ಫೇಸ್ಟುಕ್ ಗೋಡೆಯಲಿ
ಮೌನ ಒಂಟಿತನ ತುಂಬಿದೆ ಮೂಲೆ ಮೂಲೆಯಲಿ
ಸುಳ್ಳಿನ ಸಂತೆಯ ಕಟ್ಟೆಯಲ್ಲಿ ಸತ್ಯವು ಮರೆಯಾಗಿದೆ
ಎಲ್ಲರ ಬಾಯಲ್ಲಿ ತತ್ವ, ಸಿದ್ದಾಂತಗಳು ಮಾತ್ರ ಉಳಿದಿದೆ
ಹಾಲಿನಂತೆ ಹರಿಯುವ ನದಿಯು ಈಗ ವಿಷದ ಹೊನಲು
ಕಾಂಕ್ರೀಟ್ ರೋಡುಗಳಿಂದ ಕಾಣೆಯಾಗಿದೆ ಹಸಿರು ನೆರಳು
ಅಕ್ಕ-ಪಕ್ಕ ನೆರೆಯವರ ಪರಿಚಯವೇ ಇಲ್ಲದ ಸ್ಥಿತಿ
ಇದೆ ನಮ್ಮ ಆಧುನಿಕ ಕಾಲದಲ್ಲಿ ಬದಲಾದ ಸುಸಂಸ್ಕೃತಿ
ಹಣದ ಹಿಂದೆ ಓಡಿ ಕಳೆದೆವು ನೆಮ್ಮದಿಯ ಗೂಡು
ತಂತ್ರಜ್ಞಾನದ ಬದುಕಲಿ ಮರೆತೆವು ಸಂಬಂಧದ ಬೀಡು
ಶಿಕ್ಷಣ ಪಡೆದರು ಸಂಸ್ಕಾರ ಹಾದಿ ತಪ್ಪಿ ಹೋಗಿದೆ
ಸ್ವಾರ್ಥದ ಬಾಳಲಿ ಪ್ರೀತಿ, ಮಮತೆ ಮಾಯವಾಗಿದೆ
ಇನ್ನಾದರೂ ಮರಳಲಿ ನೆಮ್ಮೆಲ್ಲರೆಡೆಗೆ ಮಾನವೀಯತೆ
ನಿಸರ್ಗದ ಜೊತೆಗೂಡಿ ಆನಂದದಿ ಬಾಳೋಣವಂತೆ
ಆಧುನಿಕತೆಯ ಅಲೆಯಲಿ ಕೊಚ್ಚಿ ಹೋಗದಿರೋಣ
ಮನುಷತ್ವವೆಂಬ ಪ್ರದೀಪವ ಮತ್ತೆ ಬೆಳಗಿಸೋಣ
ಶಿಲ್ಪ ಕೆ. ಎನ್., ಎಂ.ಎ. ದ್ವಿತೀಯ ವರ್ಷ, ಇತಿಹಾಸ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ