ಸೋಮವಾರ, ಜೂನ್ 8, 2026

ಸಂಚಿಕೆ - ೨೩

ದೇವಮಂದಿರದಲ್ಲಿ ಕಂಡ ದೇವತೆ...

ದೇವಮಂದಿರದಲ್ಲಿ ಬೆಳಗುತ್ತಿತ್ತು ಆರ್ಥಿ 

ದೇವತೆಯಂತೆ ಕಂಡಳು ಒಬ್ಬಳು ಕೀರ್ತಿ 

ನನ್ನ ಕಣೋವೆಲ್ಲ ಅವಳ ಮೇಲೆ ಬಿತ್ತು ಪೂರ್ತಿ 

ಅವಳು ಮಾತ್ರ ಕಾಣುತ್ತಿದ್ದಳು ದೇವತೆಯ ರೀತಿ 

ಎಷ್ಟು ನೋಡಿದರು ಮತ್ತೆ ಮತ್ತೆ ನೋಡುವಂತಹ ದೇವತೆ 

ಅಷ್ಟು ಅದ್ಭುತ ಈ ಕನಕವತಿ 

ಯಾವ ಅಮೃತದ ಸುದೆಯಲ್ಲಿ ಬೆಳೆದುನಿಂತಳು ಈ ಪುಷ್ಪವತಿ 

ಅ ಅಮೃತದ ಬಳ್ಳಿಯಂತೆ ಬಳುಕುತಿಹಳು ರತಿ 

ಈ ಕನ್ನಡದ ಸಿರಿಸಂಪತ್ತಿನ ಒಡತಿ 

ಭಾರತೀಯ ಸಂಸ್ಕೃತಿಗೆ ಇವಳೊಂದು ಸ್ಫೂರ್ತಿ 

ಇವಳ ನಡೆನುಡಿಯ ರೂಪವೊ 

ಸ್ತ್ರೀ ಸಂಕುಲಕ್ಕೆ ಆದರ್ಶ ದೀಪವು 

ಯಾರ ಹೃದಯಂಗಳಕೆ ಸೇರುವಳೊ ಈ ಕನ್ನಡತಿ 

ಅವರ ಪ್ರೇಮಮಂದಿರಕೆ ಹಚ್ಚುವಳು ಪ್ರೀತಿಯ ಜ್ಯೋತಿ.


ಮಹೇಶ್ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...