ಕಲ್ಪನೆಯ ಛಾಯೆ
ಬರಿಗಣ್ಣಿಗೆ ಕಾಣದ ಲೋಕವ ಸೃಷ್ಟಿಸಿ
ಮನದ ಕತ್ತಲಿಗೆ ಬೆಳಕನು ಹರಿಸಿ
ಹಾರುವ ರೆಕ್ಕೆಯ ಆಸೆಯ ಮೂಡಿಸಿ
ನಡೆವನು ಮನುಜ ಕಲ್ಪನೆ ಆಲಿಸಿ
ಕೋಪದ ರೌದ್ರಕೆ ಕೆಂಪು ಬಣ್ಣ
ಶಾಂತಿಯ ಹುಡುಕುವ ಬಿಳಿಯ ಕಣ್ಣ
ಭಾವನೆಗಳೆಲ್ಲಾ ಕಲ್ಪನೆಯ ನೆರಳು
ಜೀವನವೆಂಬುದು ಇವುಗಳ ಹರಳು
ನೆನ್ನೆಯ ನೆನಪಿನ ನೆರಳನು ಹಿಡಿದು
ನಾಳೆಯ ಆಸೆಯ ಗೋಡೆಯ ಕಡಿದು
ಇಂದಿನ ಕ್ಷಣದಲಿ ಹೊಸತನ ತರುವ
ಕಲ್ಪನೆ ಮನುಷ್ಯನ ಜೊತೆಗೇ ಇರುವೆ
ಸಾಗದ ಹಡಗನು ಮುಗಿಲಲಿ ನಡೆಸಿ
ಮೌನದ ಕಾವ್ಯವ ಜಗಕೆ ಉಣಿಸಿ
ಮನುಷ್ಯನ ಕಲ್ಪನೆ ಸಾಗುತಲಿದೆ
ಅವನದೇ ಬದುಕಿಗೆ ಛಾಯೆಯಾಗಿದೆ
ಆಶ್ರಿತಾ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ