ಕೆಲಸದ ಬದಲು ಕಲಿಕೆ (ಭಾಗ – ೩)
ದೃಶ್ಯ – ೫
(ಗಿರೀಶನು ಶಾಲೆಗೆ ಇನ್ನೂ ಬಂದಿರದ ಕಾರಣ ಶಿಕ್ಷಕಿಯು ಪೋಲಿಸ್ ಸಮೇತ ಗೌಡರ ಮನೆ ಹತ್ತಿರ ಬರುವರು. ಜೊತೆಯಲ್ಲಿ ರಾಮಪ್ಪ ಮತ್ತು ರಾ. ಹೆಂಡತಿ ಇರುವರು.)
ಶಿಕ್ಷಕಿ :- ಗೌಡರೆ, ಗೌಡರೆ ನಾವು ಶಾಲೆಯಿಂದ ಬಂದಿದ್ದೇವೆ. ಹೋರಗಡೆ ಬನ್ನಿ.
ಗೌಡ :- ಏನು ಮೇಡಂ. ಇಲ್ಲಿಗೆ ಬಂದಿದ್ದೀರಿ. ಜೋತೆಗೆ ಪೋಲಿಸ್ನವರನ್ನು ಕರೆದುಕೊಂಡು ಬಂದಿರಿ. ಏನಾದ್ರು ಕೆಲಸ ಇದೆಯೆ.
ಪೋಲಿಸ್ :- ಗೌಡರೆ ನಮಗೆ ಯಾವುದೇ ರೀತಿಯ ಕೆಲಸವಿಲ್ಲ. ರಾಮಪ್ಪನ ಮಗ ಗಿರೀಶ್ ಅವರನ್ನು ನೀವು ಕೆಲಸಕ್ಕೆ ಇಟ್ಟುಕೊಂಡಿದ್ದೀರಂತ ಅರೆಸ್ಟ್ ಮಾಡುತ್ತಿದ್ದಿವಿ.
ಗೌಡ :- ಸರ್ ನಮ್ಮದು ಅಂತಹ ತಪ್ಪು ಇಲ್ಲ. ರಾಮಪ್ಪ ಅವರು ಸಾಲ ಮಾಡಿದ್ದರು. ಅದಕ್ಕಾಗಿ ನಾವು ಅವರ ಮಗನನ್ನು ಸಾಲ ತೀರುವವರೆಗೂ ಕೆಲಸಕ್ಕೆ ಇಟ್ಟುಕೊಂಡಿದ್ದಿವಿ.
ಪೋಲಿಸ್ :- ನೋಡಿ ಗೌಡರೆ. ೧೮ ವಯಸ್ಸಿನ ಒಳಗಡೆ ಇರುವ ಮಕ್ಕಳನ್ನು ಯಾರೆ ಆದರು ಕೆಲಸಕ್ಕೆ ನಿಯೋಜಿಸಿಕೊಳ್ಳುವುದಾಗಲಿ. ಕೆಲಸಕ್ಕೆ ಬೇರೆ ಕಡೆ ಸೇರಿಸುವುದಾಗಲಿ ಮಾಡಿದರೆ, ಅವರಿಗೆ ಕಾನೂನಾತ್ಮಕವಾಗಿ ಶೀಕ್ಷೆ ನೀಡಲಾಗುತ್ತದೆ. ಇವಾಗ ನಿಮ್ಮನ್ನು ಸಹಾ ಇದೇ ಆಫಾರದದ ಅಡಿಯಲ್ಲಿ ಬಂದಿಸಲಾಗುತ್ತದೆ. ದಯವಿಟ್ಟು ಸಹಕರಿಸಿ. (ನಂತರ ಪೋಲಿಸ್ರವರು ರಾಮಪ್ಪ ಮತ್ತು ಗೌಡರನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗುವರು)
ದೃಶ್ಯ - ೬
(ರಾಮಪ್ಪನ ಹೆಂಡತಿ ಮತ್ತು ಕೆಂಚಪ್ಪನು ಕೆಲವು ಜನರ ಜೊತೆ ಮಕ್ಕಳ ರಕ್ಷಣ ಇಲಾಖೆಗೆ ಬರುವರು)
ರಾ. ಹೆಂಡತಿ :- ಮೇಡಂ, ನಮ್ಮ ಗಂಡನನ್ನು ಪೋಲಿಸ್ರವರು ಅರೇಷ್ಟೆ ಮಾಡಿದ್ದಾರೆ. ದಯವಿಟ್ಟು ಬಿಡಿಸಿಕೋಡಿ ಮೇಡಂ.
ಅಧಿಕಾರಿ :- ಎದುಕಮ್ಮ ಏನಾಯಿತು. ಅವರಿಂದ ಏಂತಹ ತಪ್ಪಾಗಿದೆ ಸ್ವಲ್ಪ ಬೀಡಿಸಿ ಹೇಳಿ.
ಕೆಂಚಪ್ಪ :- ಮೇಡಂ. ಇವರ ಗಂಡ ರಾಮಪ್ಪನವರು ನಮ್ಮ ಗೌಡರ ಹತ್ತಿರ ಅವರ ಮಗನನ್ನು ಕೆಲಸಕ್ಕೆ ಸೇರಿಸಿದ್ದರು. ಅದಕ್ಕೆ ಪೋಲಿಸ್ನವರು ಯಾವುದೋ ಕೇಸ್ನಲ್ಲಿ ಗೌಡರು ಮತ್ತೆ ರಾಮಪ್ಪನವರನ್ನು ಬಂಧಿಸಿದ್ದಾರೆ. ಮೇಡಂ.
ಅಧಿಕಾರಿ :- ಹೂ... ಇದಾ ನಿಮ್ಮ ಕೇಸ್. ಇದು ಬಾಲಾ ಕಾರ್ಮಿಕ ಅಪಾರಾದದ ಅಡಿಯಲ್ಲಿ ಬರುತ್ತದೆ. ಅಂದರೆ ೧೮ ವರ್ಷದ ಒಳಗಿನ ಮಕ್ಕಳನ್ನು ಯಾವುದೇ ರೀತಿಯಿಂದಲು ಶಾಲೆಯನ್ನು ಬಿಡಿಸಿ ಕೆಲಸಕ್ಕೆ ಕಳುಹಿಸಬಾರದು. ಹಾಗೆ ಕಳುಹಿಸಿದರೆ ಕೆಲಸಕ್ಕೆ ಸೇರಿಸಿದ ಪೊಷಕರನ್ನು ಮತ್ತು ಕೆಲಸಕ್ಕೆ ಸೇರಿಸಿಕೊಂಡವರನ್ನು ಕಾನೂನಿನ ಪ್ರಕಾರ ಶಿಕ್ಷೆ ನೀಡಲಾಗುವುದು.
ರಾ. ಹೆಂಡತಿ :- ಮೇಡಂ, ದಯವಿಟ್ಟು ಹಾಗೆ ಮಾಡಬೇಡಿ. ನಾಳೆಯಿಂದ ನಮ್ಮ ಮಗ ಶಾಲೆಗೆ ದಿನ ಹೋಗುತ್ತಾನೆ. ದಯವಿಟ್ಟು ನಮ್ಮ ಗಂಡನನ್ನು ಬಿಟ್ಟುಬೀಡಿ ಮೇಡಂ.
ಅಧಿಕಾರಿ :- ಸರಿ ಸರಿ ಕಾನೂನಿನ ವ್ಯವಸ್ಥೆಯಲ್ಲಿ ಎಷ್ಟು ಆಗುತ್ತೊ ಅಷ್ಟೂ ಸಹಾಯ ಮಾಡೋನ. ನಾವೆಲ್ಲರೂ ಕೆಲಸ ಮಾಡುವುದು ನಮ್ಮ ಸಮಾಜಕ್ಕಾಗಿ, ಪ್ರಜಾಸತ್ತಾತ್ಮಕ ಮೌಲ್ಯವನ್ನು ಅಳವಡಿಸಿಕೊಂಡು ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಪಡೆದು ಉತ್ತಮ ಸಮಾಜ ನಿರ್ಮಾಣ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಇದನ್ನು ನಾವು ಅರಿಯಬೇಕು. ಉತ್ತಮ ಸಮಾಜ ಕಟ್ಟಬೇಕೆಂದರೆ ಮಕ್ಕಳಿಗೆ ಶಿಕ್ಷಣ ನೀಡಬೇಕು. ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು. ಇದಕ್ಕಾಗಿ ನಾವೆಲ್ಲರು ಶ್ರಮಿಸೋಣ. ನಿಮ್ಮ ಮಕ್ಕಳೇ ನಿಮ್ಮ ಭವಿಷ್ಯಕ್ಕೆ ದಾರಿ. ಇಂದು ಅವರ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿ.
ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ