ಸೋಮವಾರ, ಏಪ್ರಿಲ್ 27, 2026

ಸಂಚಿಕೆ - ೧೮

ನಾ ಕೊಟ್ಟ ಗುಲಾಬಿ.....

ಚಿತ್ರ ರಚನೆ :- ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ


ಓ ನನ್ನ ನಲ್ಲೇ ನಾ ನೆಚ್ಚಿದೆ ನಿನ್ನೊಳಗಿನ ಪ್ರೇಮವ 

ಮೆಚ್ಚಿ ತೆಗೆದುಕೋ ಈ ಗುಲಾಬಿ ಹೂವ್ವ 

ಬಾರವೆನ್ನದಿರು ಈ ನನ್ನ ಪ್ರೇಮವ 

ಬಾರವೆಂದರೆ ಕರಗಿ ಕೊರಗುವುದು ಈ ಕರುಣಾ ಜೀವವ 

ಮನಸಿಟ್ಟು ನೋಡು ನನ್ನ ಅಂತರಾಳದ ಪುಟವ 

ತೆಗೆದುಕೋ ಈ ನನ್ನ ಗುಲಾಬಿ ಹೂವ್ವ 

ಮನ ಬಿಚ್ಚಿ ಹೇಳು ನಿನ್ನೊಳಗಿನ ನೋ.....


ನಾ ಮನ ಬಿಚ್ಚಿ ಹೇಳುವೆ ನನ್ನೊಳಗಿನ ಪ್ರೇಮವ 

ಹೃದಯ ಮುಟ್ಟಿತು ನೀ ಬರೆದ ಕವನವ 

ಮೆಚ್ಚಿ ಬಂದಿರುವೆ ನಾ ನಿನ್ನ ಗುಣವ 

ಬಿಚ್ಚಿ ಹಾಡು ನಿನ್ನ ಪದಕುಂಜವ 

ಪ್ರತಿದಿನವು ಕೇಳಲಿ ನಮ್ಮ ಪ್ರೀತಿಯ ಕಲರವ 

ಈಗೆ ಸಾಗಲಿ ನಮ್ಮ ಬಾಳಿನ ಪುಟವ....


ಓ ನನ್ನ ನಲ್ಲನೇ ನಾ ಹೇಳುವೆ ಒಂದು ಕವನವ 

ಮನಸಿಟ್ಟು ಕೇಳಿಕೋ ನನ್ನ ಪದವ.... 

ನಾ ಬರುವೆ ನಿನ್ನನ್ನು ಅರಸಿ 

ಪದಕಟ್ಟಿ ಹಾಡುವೆ ನಿನ್ನನ್ನು ಬೆರಸಿ 

ಸಪ್ತಪದಿಯ ತುಳಿಯುವೆನು ನಿನ್ನ ಕೈ ಜೋಡಿಸಿ 

ಕೈ ಬಿಡದೆ ಮುನ್ನಡೆಸು ನೀ ನನ್ನ ಪ್ರೀತಿಸಿ 

ಕೈ ಹಿಡಿದು ಬರುವಳು ಈ ನಿನ್ನ ಪ್ರೇಯಸಿ.


ಮಹೇಶ್ ಜಿ.ಕೆ., ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...