ಸೋಮವಾರ, ಏಪ್ರಿಲ್ 13, 2026

ಸಂಚಿಕೆ - ೧೬

ಪ್ರಿಯಾ ಸಖಿಗೆ ವರ್ಣಧಾರೆ

ಮಾತ್ರಾಸಮವೃತ್ತ


೧೯ ॥ ವರ್ಣಧಾರೇನೆಂದರಿಯದ ಪ್ರಿಯಾ ಸಖಿ । 

ವರ್ಣಂ ಅಕ್ಷರದಾರ್ಥಂ ಬಣ್ಣದಾರ್ಥಂ ॥ 

ವರ್ಣನಾರ್ಥಮೆಂಬೀ ತ್ರಿಯರ್ಥದಲರಿಯಂ । 

ನಿರ್ಣಯಂ ನಿನ್ಮನಸಾರ್ಥದಲ್ನಿರ್ಧರಿಸು ॥ ೧ ॥


೨೫ ॥ ಅಕ್ಷರದಾರ್ಥಂ ಬಗೆಯಲಕ್ಷರದ ಮಾಲೆಯನರ್ಪಿಸುವೆ । 

ಬಣ್ಣದಾರ್ಥ೦ ಬಗೆಯಲ್ಲಿ ಬಣ್ಣದಂಕುರವ ಬೆಳಗಿಸುವೆ ॥ 

ವರ್ಣನಾರ್ಥಂ ಬಗೆಬಗೆಯಲಾಭರಣದಲ್ಲಿ ವರ್ಣಿಸುವೆ । 

ಈ ತ್ರಿಯರ್ಥವಂ ಕೂಡೆ ನೀ ವಿಬಿನ್ನರ್ಥದಲ್ಲರಿಯುವೆ ॥ ೨ ॥


೨೭ ॥ ನಿಂಗರಿಯದೆ ನಿಂಗೆ ಕರಾಭರಣವಂ ಮನಸಿಚ್ಛೆಯಂ ಪೆಟ್ಟೆ । 

ನಿಂಗೇಳಿದೆಯಂ ಕರ್ಣಾಭರಣವಂ ಮನಸಿಚ್ಛೆಯಂ ಪೆಟ್ಟೆ ॥ 

ನಿಂಗೆಲ್ಲಾಭರಣವಂ ಮನಸುಖಿಯಲೇಕಚಿತ್ತದಲ್ದರಿಸು । 

ನಿಂಗೆ ಮನಾಭರಣವಂ ಪೆಟ್ಟವನಾ ಮನದೊಳಗಾವರಿಸಿಕೊ ॥ ೩ ॥


೧೭ ॥ ಇಳಿಸಂದ್ಯವರ್ಣಂ ಕರಾಭರಣವಂ । 

ವಸಂತ ಚೆರ್ರಿಯ ನಸುಗಂಪು ವರ್ಣ೦ ॥ 

ಕರ್ಣಾಭರಣವಂ ದ್ವಾದಶ ವರ್ಣಂ । 

ಬೊಂಬೆಯಂ ನಾನುಡುಗೊರೆಯಂ ಪೆತ್ತಂ ॥ ೪ ॥


೧೬ ॥ ಕಡಲಲೆಯು ಧರೆಗೆ ಮುತ್ತಿಕ್ಕುವಂತೆ । 

ಸಾಗರದ ಪ್ರೀತಿಯುಕ್ಕರಿಯುವುದು ॥ 

ಧರೆಯು ಕಡಲಲೆಯನ್ನು ಬಾಚಿದಂತೆ । 

ಪೃಥ್ವಿಯಪ್ಪುಗೆಯಲ್ಲೇ ಬಾಚುವುದು ॥ ೫ ॥


೧೭ ॥ ಧರೆ ಗರ್ಭದಲ್ಲಿ ಪುಟ್ಟಿದ ಕೊಪಗ್ನಿಯ । 

ಹನಿ ನೀರು ಚೆಲ್ಲಿ ತಂಪಿಸಲು ಸಾಧ್ಯವೆ ॥ 

ಕಡಲಾಳದಲ್ಲಿ ಪುಟ್ಟಿದ ಸುನಾಮಿಯ । 

ಧರೆ ಅಡ್ಡ ನಿಂತು ನಿಲ್ಲಿಸಲು ಸಾಧ್ಯವೆ ॥ ೬ ॥


೨೨ ॥ ಸಾಗರದ ಸುನಾಮಿಯನ್ಧರೆಪ್ರೀತಿ ತಣಿಸುವುದು । 

ಪೃಥ್ವಿಯ ಜ್ವಾಲಗ್ನಿಯನ್ನಲಧಾರೆ ತಣಿಸುವುದು ॥ 

ಸಾಗರದಾಳದಷ್ಟು ಧರೆಪ್ರೀತಿ ಹೊಕ್ಕಿದೆಯಂ । 

ಧರೆಯೆತ್ತರಕ್ಕಡಲಲೆಯ ಪ್ರೀತಿ ಮುತ್ತಿದೆಯಂ ॥ ೭ ॥


ಎಸ್.ಎಸ್.ವಿ. ಜಗದೀಶ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...