ಸೋಮವಾರ, ಏಪ್ರಿಲ್ 6, 2026

ಸಂಚಿಕೆ - ೧೫

ಯುದ್ಧ ಮೌನ

ಯುದ್ಧದ ಮೌನ ಕೇಳುತ್ತವೆ ಒಂದು ಕಥೆ 

ಅದು ನೋವಿನ ಮಾತುಗಳಿಲ್ಲದ ವ್ಯಥೆ 

ಗಾಳಿಯಲ್ಲಿ ದುಃಖದ ನಾದ ಹರಡುತ್ತದೆ 

ಮನಸ್ಸುಗಳಲ್ಲಿ ಭಯದ ನೆರಳು ಉಳಿಯುತ್ತದೆ


ಹೂಗಳು ಅರಳದೆ ಮಣ್ಣಿನಲ್ಲಿ ಬೀಳುತ್ತ 

ಕನಸುಗಳು ಕಣ್ಣೀರಲ್ಲಿ ಕರಗುತ್ತ 

ನಗುವಿನ ಕ್ಷಣಗಳು ದೂರವಾಗುತ್ತಾ 

ಜೀವನವೇ ಭಾರವಾಗಿ ಕಾಣುತ್ತಾ


ಯಾರಿಗೂ ಗೆಲುವಿಲ್ಲ ಈ ಹೋರಾಟದಲ್ಲಿ, 

ನಷ್ಟವೇ ಉಳಿಯುತ್ತದೆ ಪ್ರತಿಯೊಂದು ಹಾದಿಯಲ್ಲಿ 

ಮಾನವೀಯತೆ ಕೇಳುತ್ತದೆ ಮೌನದ ಕೂಗು 

ಯಾಕೆ ಬೇಕು ಯುದ್ಧದ ಬೇಗೂ?


ಬನ್ನಿ ಶಾಂತಿಯ ದಾರಿ ಹಿಡಿಯೋಣ 

ಪ್ರೀತಿಯ ಬೀಜವನ್ನು ಬಿತ್ತೋಣ 

ಯುದ್ಧದ ಕತ್ತಲೆ ಅಂತ್ಯ ಮಾಡಿ 

ಹೊಸ ಬೆಳಕಿನ ಲೋಕ ನಿರ್ಮಿಸೋಣ


ದಿವ್ಯಶ್ರೀ. ಎ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...