ಬಂಧಿ
ಕೋಳವಿಲ್ಲ, ಬಂದೂಕಿಲ್ಲ
ಕಂಬಿಯೊಳಗಿನ ಕತ್ತಲೆಯೂ ಇಲ್ಲ
ಯಾವ ಬಂಧನವಿದು?
ಕೈಗಳ ಬಂಧಿಸಿಲ್ಲ
ಯಾವ ಅಂಕುಶವೂ ಇಲ್ಲ
ಇನ್ನೇತರ ಬಂಧನವಿದು?
ತುಟಿಗಳಿಗೆ ಬೀಗವಿಲ್ಲ
ಧ್ವನಿ ಮಾರ್ಧನಿಸುವಂತೆಯೂ ಇಲ್ಲ
ಯಾವ ಬಂಧನವಿದು?
ಕಣ್ಣ ಕಪ್ಪು ವಸ್ತವಿಲ್ಲ
ಹುಡುಕಾಟಕೆ ಕೊನೆಯೂ ಇಲ್ಲ
ಇನ್ನೇತರ ಬಂಧನವಿದು?
ಗರಿಗಳಿವೆ ರೆಕ್ಕೆಗಳಿಲ್ಲ
ದೇಹವಿದೆ ಹಾರುವಂತೆಯೂ ಇಲ್ಲ
ಯಾವ ಬಂಧನವಿದು?
ರೇಷ್ಮಾ ಎನ್ ಬಾರಿಗ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ