ಸ್ನೇಹ
ಮೊದಲನೆ ದಿನ ಹೃದಯದಿ ಭಯವು
ಅಪರಿಚಿತ ಮೊಗಗಳೊಡನೆ ಬಾಳುವ ಸಾಹಸವು
ಒಬ್ಬರನೊಬ್ಬರು ಅರಿಯುವ ಹೋರಾಟವು
ಆಗಿಬಿಟ್ಟೆವು ಮನಕೆ ಹತ್ತಿರವು
ಕಾಲೇಜಿಗೆ ಹೋಗುವ ವಿಳಂಬವು
ಔತಣಕೂಟಕೆ ಸಿದ್ಧವಾಗುವ ವೇಗವು
ಬರಲು ಕೋಣೆಗೆ ಸಂತಸವು
ಬೆಂಚಿಗೆ ಒರಗಲು ನೆಮ್ಮದಿಯು
ರಾತ್ರಿ ಹಗಲೆನ್ನದೆ ಮುಗಿಯದಿರುವ ಮಾತುಗಳು
ಅವರಿವರನು ಕಾಲೆಳೆಯುವ ಹಾಸ್ಯ ಕಛೇರಿಯು
ಮನದುಂಬಿ ನಗುತಿರಲು
ಮುಗಿಯದಿರಲಿ ಈ ಚೇಷ್ಠೆಯ ಕಂತೆಯು
ಪರೀಕ್ಷೆಗೆ ಸಂಯೋಜಿತ ಅಧ್ಯಯನವು
ಮುಗಿಯದಿರುವ ಪ್ರಶ್ನೆ ಪತ್ರಿಕೆಗಳ ಚರ್ಚೆಯು
ಮುಂದಿನ ಸೆಮಿಸ್ಟರ್ಗೆ ಬಡ್ತಿ ಸಿಗಲು
ಇದೇ ಚಕ್ರ ಪುನರಾವರ್ತಿಸಲು
ಮುನಿಸುಗಳನ್ನು ಬದಿಗಿಟ್ಟು ಸಿಹಿನೆನಪುಗಳ ಮೆಲಕುತ
ನಿಷ್ಕಲ್ಮಷ ಹೃದಯದಿ ಎಲ್ಲರೂ ಬಾಳುತ
ಈ ನಮ್ಮ ಸ್ನೇಹಕೆ ಶರಣಾಗುತ
ನಿಲ್ಲದಿರಲಿ ಈ ಸಂತಸದ ಪಯಣವು
ಸುಜಾತಾ ಗಿ. ಪೂಜೇರ, ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ