ಸೋಮವಾರ, ಏಪ್ರಿಲ್ 13, 2026

ಸಂಚಿಕೆ - ೧೬

ಕನ್ನಡವ್ವ

ಯೆನ್ ಮಾಡ್ತಿ ಮಾಡ್

ನಾ ಮಾತಾಡ್ತೀನಿ ಕನ್ನಡ್

ನಾ ಇಡೋ ಪ್ರತಿ ಹೆಜ್ಜೆಯ

ನೆಲ ಹೇಳತ್ ಕನ್ನಡ್

ನಾ ಕಲಿತಿರೋ ನಾ ಕಲ್ತಿರೋ ಭಾಷೆ ಕನ್ನಡ್

ತಾಯಿ ಹೇಳಿಕೊಟ್ಟ ಬಾಷೆ ಕನ್ನಡ್

ಕೈ ತುತ್ತು ಇಡುವಾಗ ಹಾಡು ಹಾಡಿದ ಭಾಷೆ ಕನ್ನಡ್

ನಾ ಮೊದಲ್ ನನ್ನ ಬಾಯಿಂದ ಉಚ್ಚರಿಸಿದ

ಅವ್ವ ಅನ್ನೋ ಪದ ಕನ್ನಡ್

ನಾ ಬಿದ್ದಾಗ ಅವ್ವ ಓಡಿ ಬಂದ್ ಎಬ್ಬಿಸಿ ನಿಲ್ಲಿಸಿ 

ಏನಾಯ್ತು ಕಂದ ಅಂತ ಕೇಳಿದ್ ಪದ ಕನ್ನಡ್

ನಾ ತಪ್ಪು ಮಾಡಿದಾಗ್,

ತಿದ್ದಿ ಬುದ್ದಿ ಹೇಳುವಾಗ್,

ಆಡಿದ್ ಭಾಷೆ ಕನ್ನಡ್.

ಇಲ್ಲಿವರ್ಗ ಅನ್ನ ಹಾಕಿದ್ ಭಾಷೆ, 

ಮುಂದೆ ಅನ್ನ ಹಾಕುವ ಭಾಷೆ ಕನ್ನಡ್.

ನನ್ನ ತಾಯಿ ಆಡೋ ಭಾಷೆ ಸಹ ಕನ್ನಡ್

ಯಾವ ಪಕ್ಷ ಬರ್ಲಿ

ಯಾವ ಪಕ್ಷ ಬಿಡ್ಲಿ

ಸದನದಲ್ಲಿ ಮಾತಾಡ್‌ಬೇಕ್ ಕನ್ನಡ್ 

ಚಾ ಕುಡಿಯುವಾಗ ಮಾತಾಡ್ತಿದ್ ಭಾಷೆ ಕನ್ನಡ್ 

ಯೆಂಡ ಕುಡಿಯುವಾಗ್ ಮಾತಾಡ್ತೀನಿ ಕನ್ನಡ್

ಸರ್ಕಾರಿ ಕಛೇರಿಯಲ್ಲಿ ಓಡಾಡೋ ನೋಟೀಸ್

ಇರರ್ಬೇಕಾದ ಭಾಷೆ ಕನ್ನಡ್

ಯಾವ್ ಪಕ್ಷ ಬರ್ಲಿ

ಯಾವ್ ಪಕ್ಷ ಬಿಡ್ಲಿ

ನಾವ್ ಗೌರವಿಸಬೇಕು ಕನ್ನಡ್

ಹೆಂಡ್ತಿ ಜೊತೆ ಮಾತಾಡ್ತೀನಿ ಕನ್ನಡ್

ಮಕ್ಕಳ ಜೊತೆ ಮಾತಾಡ್ತೀನಿ ಕನ್ನಡ್

ಬಂಧುಗಳ ಜೊತೆ ಮಾತಾಡ್ತೀನಿ ಕನ್ನಡ್

ಗುರುಗಳ ಜೊತೆ ಮಾತಾಡ್ತೀನಿ ಕನ್ನಡ್

ಯಾವ ಏನಾರಾ ಆದ್ರೆ ಆಗ್ಲಿ

ಉಳಿ ಬೇಕ್ ಕನ್ನಡ್

ಬೆಳಿ ಬೇಕ್ ಕನ್ನಡ್


ರವಿ ಅ. ಮ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...