ಸೋಮವಾರ, ಏಪ್ರಿಲ್ 6, 2026

ಸಂಚಿಕೆ - ೧೫

ಏನೆಂದು ಬರೆಯಲಿ

ನೀವೆ ಹೇಳಿ ಏನೆಂದು ಬರೆಯಲಿ 

ಪದಗಳ ಗುಚ್ಚದಲಿ ಯಾವುದನು ಆರಿಸಲಿ 

ನೀವೆ ಹೇಳಿ ಏನೆಂದು ಬರೆಯಲಿ 

ಅಕ್ಷರಗಳ ಪೋಣಿಸಿ ಸಾಲುಗಳನ್ನು ಹೇಗೆ ಕಟ್ಟಲಿ


ಶಬ್ದಗಳ ಭಂಡಾರ ಇಲ್ಲ ಎನ್ನಲ್ಲಿ 

ಕವಿಗಳ ಗಾಳಿ ತಾಕಿಲ್ಲ ನನ್ನಲ್ಲಿ 

ಬರವಣಿಗೆ ನಡುಗುತಿದೆ ಆರಂಭದ ಸಾಲಿನಲಿ 

ನೀವೆ ಹೇಳಿ ಏನೆಂದು ಬರೆಯಲಿ


ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಿರುವೆ, ಸಾವಧಾನಿಸಿ 

ಒಮ್ಮೆಲೇ ಓಡು ಎಂದರೆ ಹೇಗೆ ಓಡಲಿ 

ಪ್ರತಿ ಗಳಿಗೆಯು ಹೇಗೆ ಬರೆಯಲಿ ಹೊಸ ವಿಷಯದಿ 

ನೀವೆ ಹೇಳಿ ಏನೆಂದು ಬರೆಯಲಿ


ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...