ದೃಶ್ಯಂ - ೨
ದೇವರ ಮೂರ್ತಿಗಳನ್ನು ಕಂಡು ಪರೀಕ್ಷೆ ಸಮಯದಲ್ಲಿ ಉದ್ದುದ್ದ ಚಲಿಸಿದ ಕೈ ಕಾಲುಗಳು.
ಕೆ.ಟಿ.ಎಮ್. ಬೈಕುಗಳು ಹತ್ತಿ ಕ್ಯಾಂಪಸ್ ಸುತ್ತುವ ಚಿಗುರು ಮೀಸೆ ಹುಡುಗನ ಬಯಕೆಗಳು.
ಪಾಚಿಯಿಂದ ಜಾರಿದ ಅವರುಗಳು. ಪುಸುಕ್ಕನೆ ನಕ್ಕ ನೋವಿನ ಮನಸುಗಳು.
ವಿಭಾಗದ ಥಿಯೇಟರ್‌ಗಳು, ನಾಗಮಂಡಲ ಸಿನಿಮಾ ನೋಡಿ ಪಾರ್ಟ್-೨ ಗೆ ಬೇಡಿಕೆ ಇಟ್ಟ ರಸಿಕರ ಗುಂಪುಗಳು.
ಬಿತ್ತಿಗಾಗಿ ನಡೆದ ಯುದ್ಧಗಳು, ಕೊನೆಯಲ್ಲಿ ದೇವರ ದಯೆಯಿಂದ ಬಗೆಹರಿದ ಭಕ್ತರುಗಳು. ರಾಣಿಪುರಂ ಪ್ರವಾಸ ಕಥನಗಳು, ಕಗ್ಗತ್ತಲಲ್ಲಿ ದಾರಿ ಕಾಣದೆ ಕೇರಳವನ್ನು ಪ್ರದಕ್ಷಿಣೆ ಹಾಕಿದ ಪ್ರವಾಸಿ ಮನಸುಗಳು.
ಹೆಜ್ಜೆಗುರುತುಗಳ ನೆನಪುಗಳು, ಫೋಟೋ ಪ್ರೇಮ್ ಮಾಡಲು ಹೋಗಿ ಇನ್ನೇನನ್ನು ಮಾಡಿದ ನಾವುಗಳು, ಪಿ.ಹೆಚ್.ಡಿ. ಪಾಸಾದ ವಿದ್ಯಾರ್ಥಿಗಳು, ಸಂಶೋಧನಾ ಕೊಠಡಿಯ ಕುರ್ಚಿಗೆ ಕರ್ಚಿಪು ಹಾಕಿದ ನಾವುಗಳು.
ಶ್ರೇಯಸ್ ಬನ್ನಡ್ಕ, ಎಂ.ಎ. ದ್ವಿತೀಯ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ