ಸೋಮವಾರ, ಏಪ್ರಿಲ್ 13, 2026

ಸಂಚಿಕೆ - ೧೬

ಅಮ್ಮನ ನೆರಳು, ಮಗಳ ನಾಳೆ

ಅಮ್ಮನ ಮಡಿಲಲ್ಲಿ ಮೊಳಕೆಯೊಡೆದ ಕನಸು, 

ಮಗಳ ಕಣ್ಣಲ್ಲಿ ಹೊಳೆಯುವ ನಾಳೆಯ ಬೆಳಕು, 

ಅಮ್ಮನ ಮೌನದ ಪ್ರಾರ್ಥನೆಗಳಲ್ಲಿ, 

ಮಗಳ ನಗು ಹೂವಾಗಿ ಅರಳುತ್ತದೆ.


ಬಿಸಿಲಲ್ಲಿ ನೆರಳಾದ ಅಮ್ಮನ ಕೈ,

ಮಳೆಯಲ್ಲಿ ಛತ್ರಿಯಂತೆ ಕಾಪಾಡುತ್ತದೆ.

ಮಗಳ ಹೆಜ್ಜೆ ತಪ್ಪಿದಾಗಲೆಲ್ಲಾ, 

ಅಮ್ಮನ ಹೃದಯವೇ ದಾರಿಯಾಗುತ್ತದೆ.


ಕಾಲದ ನದಿಯಲ್ಲಿ ತೇಲುವ ಎರಡು ಜೀವಗಳು, 

ಒಂದೇ ತಾಳದಲ್ಲಿ ಬಡಿದಾಡುವ ಹೃದಯಗಳು, 

ಅಮ್ಮ ಎಂದರೆ ಬೇರು, ಮಗಳು ಎಂದರೆ ಹೂ, 

ಬದುಕೆನ್ನುವ ಮರಕ್ಕೆ ಜೀವ ತುಂಬುವುದೇ ಈ ಬಂಧವು


ಶ್ರೀಷ್ಮ ಎಂ.ಬಿ., ಎಂ.ಎ. ಪ್ರಥಮ ವರ್ಷ, ಎಸ್.ವಿ.ಪಿ. ಕನ್ನಡ ವಿಭಾಗ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪರಿಚಯ

ಬಿತ್ತಿ ಗೋಡೆ ಬರಹ – ಸಂಪುಟ ೩೫ ಪರಿಚಯ      ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯಿಕ ಪರಂಪರೆಯ ಭಾಗವಾಗಿ ಬೆಳೆದುಬಂದಿರುವ ‘ಬಿತ್...